ಬೀದರ್: ಮುಂದಿನ ಮೂರು ದಿನಗಳ ಕಾಲ ಭಾರೀ ಶೀತಗಾಳಿ (Cold Wave) ಬೀಸುವ ಹಿನ್ನೆಲೆ ಹವಾಮಾನ ಇಲಾಖೆ (IMD) ಹಾಗೂ ಜಿಲ್ಲಾಡಳಿತ ಬೀದರ್ (Bidar) ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿದ್ದು, ಜನರಿಗೆ ಎಚ್ಚರಿಕೆ ನೀಡಿದೆ.
10 ರಿಂದ 12 ಡಿಗ್ರಿ ಇದ್ದ ತಾಪಮಾನ ಏಕಾಏಕಿ 7 ಡಿಗ್ರಿಗೆ ಇಳಿಕೆಯಾಗಿದ್ದು, ಮುಂದಿನ ಮೂರು ದಿನಗಳಲ್ಲಿ ಕನಿಷ್ಟ 5 ರಿಂದ 6 ಡಿಗ್ರಿಗೆ ಇಳಿಕೆಯಾಗುವ ಎಚ್ಚರಿಕೆ ನೀಡಿದೆ. ಸೂರ್ಯೋದಯಕ್ಕಿಂತ ಮುಂಚೆ ಇಲ್ಲಾ ಸೂರ್ಯಾಸ್ತದ ನಂತರ ವಾಕಿಂಗ್ ಮಾಡುವವರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಡಳಿತ ಜನರಿಗೆ ಸೂಚನೆ ನೀಡಿದೆ. ಕಳೆದ ಒಂದು ವಾರದಿಂದ ಬೀದರ್‌ನಲ್ಲಿ ಸಂಪೂರ್ಣವಾಗಿ ತಾಪಮಾನ ಕುಸಿತಗೊಂಡಿದೆ. ಭಾರೀ ಶೀತಗಾಳಿಯಿಂದ ರಣಚಂಡಿ ಚಳಿಗೆ ಗಡಿ ಜಿಲ್ಲೆ ಬೀದರ್ ಜನರು ಅಕ್ಷರಶಃ ತತ್ತರಿಸಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ದಾಖಲಾಗಿದ್ದು, ಕನಿಷ್ಠ ತಾಪಮಾನ 7 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗಿದೆ. ಇದನ್ನೂ ಓದಿ: ಸರ್ಕಾರದ ಯೋಜನೆಗೆ ಸಿದ್ಧಗಂಗಾ ಮಠಕ್ಕೆ `ಕರೆಂಟ್’ ಶಾಕ್ – 70 ಲಕ್ಷ ವಿದ್ಯುತ್ ಬಿಲ್ ಕಟ್ಟುವಂತೆ KIADB ಪತ್ರ
ಚಳಿಗೆ ಮನೆಯಿಂದ ಹೊರಗೆ ಬರಲು ಜನರು ಹಿಂದೇಟು ಹಾಕುತ್ತಿದ್ದು, ರಣಚಂಡಿ ಚಳಿಯಿಂದ ತಪ್ಪಿಸಿಕೊಳ್ಳಲು ಗುಂಪು ಗುಂಪಾಗಿ ಚಳಿಕಾಯಿಸುತ್ತಿದ್ದಾರೆ. ಮೊದಲ ಬಾರಿಗೆ ಇಷ್ಟೊಂದು ಕಡಿಮೆ ಪ್ರಮಾಣದ ತಾಪಮಾನ ದಾಖಲಾಗಿದೆ. ಈ ಹಿನ್ನೆಲೆ ಜನರು ಹಾಗೂ ರೈತರು ಅನಾವಶ್ಯಕವಾಗಿ ಹೊರ ಬಾರದಂತೆ ರೆಡ್ ಅಲರ್ಟ್ ಘೋಷಣೆ ಮಾಡಿ ಎಚ್ಚರಿಕೆ ನೀಡಲಾಗಿದೆ. ಇದನ್ನೂ ಓದಿ: ವಿಶ್ವದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಶಿವಣ್ಣಗೆ ಚಿಕಿತ್ಸೆ – 1 ತಿಂಗಳ ಬಳಿಕ ರಿಟರ್ನ್