ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ (Parappana Agrahara Jail) ಅಕ್ರಮ ಮಟ್ಟ ಹಾಕಲು ಅಲೋಕ್ ಕುಮಾರ್ ಹಲವು ರೀತಿಯಾಗಿ ಬದಲವಾಣೆ ಮಾಡಲು ಮುಂದಾಗಿದ್ದಾರೆ.
ಏಕೆಂದ್ರೆ ಜೈಲಿನ ಒಳಗಡೆ ವಿಚಾರಣಾ ಕೈದಿಗಳಿಗೆ (Prisoners) ಹಾಗೂ ಸಜಾ ಕೈದಿಗಳಿಗೆ ಹಲವು ರೀತಿಯಲ್ಲಿ ಜೈಲಿನಲ್ಲಿ ಮೊಬೈಲ್‌ಗಳು ಮತ್ತೇರಿಸಿಕೊಳ್ಳುವುದಕ್ಕೆ ಮಾದಕ ವಸ್ತುಗಳನ್ನ ತಲುಪಿಸುವ ಕೆಲಸ ಮಾಡುತ್ತಿದ್ದ ವಿಚಾರಗಳು ಹಲವು ಬಾರಿ ಬಹಿರಂಗವಾಗಿದೆ. ಅಲೋಕ್ ಕುಮಾರ್ ಜೈಲು ಡಿಜಿಯಾಗಿ ನೇಮಕ ಆದ ಬಳಿಕ ಜೈಲಿನಲ್ಲಿರೋ ಎಲ್ಲಾ ಬ್ಯಾರಕ್ ಗಳಿಗೆ ಸರ್ಪ್ರೈಸ್ ದಾಳಿ ಮಾಡುವ ಮೂಲಕ ಮೊಬೈಲ್ ಗಳನ್ನ ಸೀಜ್ ಮಾಡುತ್ತಿದ್ದಾರೆ.

ಮೊಬೈಲ್‌ಗಳನ್ನ ಸೀಜ್ ಮಾಡಿದ್ರೂ ಮತ್ತೆ ಹೊರಗಡೆಯಿಂದ ಒಳಗೆ ತಗೆದುಕೊಂಡು ಹೋಗಿ ಮೊಬೈಲ್, ಮಾದಕ ವಸ್ತುಗಳನ್ನ ಕೊಡುವುದಕ್ಕೆ ಆಗದ ಹಾಗೇ ಸ್ಟ್ರಿಕ್ಟ್ ಮಾಡಲಾಗಿದೆ. ಪರಪ್ಪನ ಅಗ್ರಹಾರ ಜೈಲಿನ ಸುತ್ತಮುತ್ತ ದೊಡ್ಡ ಮಟ್ಟದ ಮರಗಿಡಗಳು ಬೆಳೆದಿವೆ. ಅಲ್ಲಿಂದ ಬಂದು ಅಂದರೆ ಹೊರಗಡೆಯಿಂದ ಒಳಗಡೆ ಮೊಬೈಲ್ ಮಾದಕ ವಸ್ತುಗಳು ಎಸೆಯುವ ಕೆಲಸ ಮಾಡಲಾಗುತ್ತಿದೆ ಎನ್ನಲಾಗಿದೆ.
ಹೊರಗಿನಿಂದ ಮೊಬೈಲ್ ಮಾದಕ ವಸ್ತುಗಳನ್ನ ಎಸೆಯುವುದನ್ನ ತಡೆಗಟ್ಟಲು ಜೈಲ್‌ನ ಸುತ್ತಮುತ್ತ ಇರುವ ಗಿಡಮರಗಳನ್ನ ತಗೆದು ಹಾಕಲಾಗುತ್ತಿದೆ. ಅದರ ಜೊತೆಗೆ ಹೊರಗಡೆ ಕೂಡ ಉತ್ತಮ ಗುಣಮಟ್ಟದ ಸಿಸಿ ಕ್ಯಾಮೆರಾಗಳನ್ನ ಅಳವಡಿಸುವ ವ್ಯವಸ್ಥೆ ಮಾಡಲು ಮುಂದಾಗಿದೆ.

