ಶ್ರೀನಗರ: ಮಾಜಿ ಸಿಎಂ ಗುಲಾಂ ನಬಿ ಆಜಾದ್ (Ghulam Nabi Azad) ಅವರ ರಾಜೀನಾಮೆಯ ಬೆನ್ನಲ್ಲೇ ಪಕ್ಷಬಿಟ್ಟು ಹೋಗಿದ್ದ ಹಲವು ನಾಯಕರು ಭಾರತ್ ಜೋಡೋ ಯಾತ್ರೆ (Bharat Jodo Yatra) ಜಮ್ಮು ಮತ್ತು ಕಾಶ್ಮೀರ (Jammu And Kashmir) ಪ್ರವೇಶಿಸುವ ಮುನ್ನವೇ ಮತ್ತೆ ಪಕ್ಷ ಸೇರ್ಪಡೆಯಾಗಿದ್ದಾರೆ
LIVE: Congress party briefing along with Shri @Jairam_Ramesh, Smt @rajanipatil_in and Shri @Pawankhera at AICC HQ.https://t.co/3iBiZ2vvLv
— K C Venugopal (@kcvenugopalmp) January 6, 2023
Advertisement
ಜಮ್ಮು ಮತ್ತು ಕಾಶ್ಮೀರದ ಮಾಜಿ ಉಪ ಮುಖ್ಯಮಂತ್ರಿ ತಾರಾ ಚಂದ್, ಮಾಜಿ ಸಚಿವರಾದ ಪೀರ್ಜಾದಾ ಮೊಹಮ್ಮದ್ ಸಯೀದ್, ಮುಜಾಫರ್ ರ‍್ರೆ, ಬಲ್ವಾನ್ ಸಿಂಗ್, ಮೊಹಿಂದರ್ ಭಾರದ್ವಾಜ್, ಭೂಷಣ್ ಡೋಗ್ರಾ, ವಿನೋದ್ ಶರ್ಮಾ, ನರಿಂದರ್ ಶರ್ಮಾ, ನರೇಶ್ ಶರ್ಮಾ, ಅಂಬ್ರಿಶ್ ಮಗೋತ್ರಾ, ಸುಭಾಷ್ ಭಗತ್, ಬದ್ರಿ ನಾಥ್ ಶರ್ಮಾ, ವರುಣ್ ಮಗೋತ್ರ, ಅನುರಾಧ ಶರ್ಮಾ, ವಿಜಯ್ ತಾರ್ಗೋತ್ರ ಮತ್ತು ಚಂದರ್ ಪ್ರಭಾ ಶರ್ಮಾ ಸೇರಿದಂತೆ ಹಲವು ಹಿರಿಯ ನಾಯಕರು ಶುಕ್ರವಾರ ಪಕ್ಷಕ್ಕೆ ಮರಳಿದ್ದಾರೆ.
Advertisement
Advertisement
ಬಲ್ವಾನ್ ಸಿಂಗ್ ಮತ್ತು ತಾರಾ ಚಂದ್, ಗುಲಾಮ್ ನಬಿ ಆಜಾದ್ ಅವರ ನಿಷ್ಠಾವಂತರು. ಈ ಹಿಂದೆ ಕಾಂಗ್ರೆಸ್ ತೊರೆದು ಡೆಮಾಕ್ರಟಿಕ್ ಆಜಾದ್ ಪಾರ್ಟಿ (DAP) ಸೇರಿದ್ದರು. ಆದ್ರೆ ಪಕ್ಷವಿರೋಧಿ ಚಟುವಟಿಕೆಗಳಿಂದಾಗಿ ಆಜಾದ್ ಕೆಲವರನ್ನ ಡಿಎಪಿ ಯಿಂದ ಹೊರಹಾಕಿದ್ದರು. ಇದನ್ನೂ ಓದಿ: ಕರ್ನಾಟಕ-ಕೇರಳ ಗಡಿಯಲ್ಲಿ ರಿಂಗಣಿಸಿ ಆತಂಕ ಸೃಷ್ಟಿಸಿದ ಸ್ಯಾಟಲೈಟ್ ಫೋನ್
Advertisement
ಇಂದು ಹಲವಾರು ನಾಯಕರು ಮತ್ತೆ ಕಾಂಗ್ರೆಸ್ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಎಐಸಿಸಿ (AICC) ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ (KC Venugopal) ಸುದ್ದಿಗೋಷ್ಠಿಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ಇದು ಕಾಂಗ್ರೆಸ್ (Congress) ಪಾಲಿಗೆ ಬಹುದೊಡ್ಡ ದಿನ ಎಂದು ಹರ್ಷಗೊಂಡಿದ್ದಾರೆ. ಇದನ್ನೂ ಓದಿ: ದೇಶ ಕಾಯುವಾಗ ನಾವು ನಿಯತ್ತಿನ ನಾಯಿಗಳೇ – ಸಿದ್ದುಗೆ ಸಿ.ಟಿ ರವಿ ಗುದ್ದು
ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಎಐಸಿಸಿ ರಾಜ್ಯ ಉಸ್ತುವಾರಿ ರಜನಿ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k