ಭೋಪಾಲ್: ಪ್ರಧಾನಿ ಮೋದಿ (PM Narendra Modi) ಭಾಷಣ ಕೇಳಲು ತೆರಳಿದ್ದ ಸ್ವಸಹಾಯ ಸಂಘದ ಮಹಿಳೆಯರಿದ್ದ (Womens Self Help Group) ಬಸ್ (Bus) ಕರೋನಿ ಕಣಿವೆ ಬಳಿ ಅಪಘಾತಕ್ಕೀಡಾಗಿದ್ದು, 20 ಮಹಿಳೆಯರು ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
20 ಮಹಿಳೆಯರು (Women) ಗಾಯಗೊಂಡಿದ್ದು, ಅವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಸ್ಥಳೀಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ವಿಮ್ಸ್‌ನಲ್ಲಿ ಸಾವಿನ ಸರಣಿ- ಸುಧಾಕರ್ ಹಠದಿಂದ ನಿರ್ದೇಶಕರ ನೇಮಕ
ಮಧ್ಯಪ್ರದೇಶದ ಶಿಯೋಪುರದ ಕಾರ್‌ಹಾಲ್‌ನಲ್ಲಿ ನಡೆಯುತ್ತಿದ್ದ ಮಹಿಳಾ ಸ್ವಸಹಾಯ ಸಂಘದ (Womens Self Help Group) ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಷಣ ಕೇಳಲು 25 – 30 ಮಹಿಳೆಯರು ಬಸ್‌ನಲ್ಲಿ ತೆರಳಿದ್ದರು. ಮಾರ್ಗಮಧ್ಯೆ ಟ್ರಾಫಿಕ್ (Traffic) ಸಮಸ್ಯೆ ಎದುರಾಗಿದ್ದರಿಂದ ಸಮಾವೇಶ ತಲುಪಲು ಸಾಧ್ಯವಾಗಲಿಲ್ಲ. ಹಿಂದಿರುಗಿ ಬರುತ್ತಿದ್ದ ಸಂದರ್ಭದಲ್ಲಿ ಅಪಘಾತ (Accident) ಸಂಭವಿಸಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.