– 14 ಕಿ.ಮೀ ಎತ್ತರಕ್ಕೆ ಚಿಮ್ಮಿದ ದಟ್ಟವಾದ ಹೊಗೆ
ಅಡಿಸ್ ಅಬಾಬಾ/ ನವದೆಹಲಿ: ಇಥಿಯೋಪಿಯಾದಲ್ಲಿರುವ (Ethiopia) ಹೈಲಿ ಗುಬ್ಬಿ ಜ್ವಾಲಾಮುಖಿ ಸುಮಾರು 12,000 ವರ್ಷಗಳಲ್ಲಿ ಮೊದಲ ಬಾರಿಗೆ ಸ್ಫೋಟಗೊಂಡಿದ್ದು ವಿಶ್ವಾದ್ಯಂತ ವಿಮಾನ ಸಂಚಾರದಲ್ಲಿ ವ್ಯತ್ಯಯವಾಗಿದೆ.
ಇಥಿಯೋಪಿಯಾದ ಈಶಾನ್ಯ ಪ್ರದೇಶದಲ್ಲಿರುವ ಜ್ವಾಲಾಮುಖಿಯಿಂದ (Hayli Gubbi Volcano) ಸ್ಫೋಟಗೊಂಡ ಹೊಗೆ 14 ಕಿ.ಮೀ ಎತ್ತರದವರೆಗೆ ಚಿಮ್ಮಿದ್ದರಿಂದ ವಿಮಾನಗಳ ಹಾರಾಟಕ್ಕೆ ಸಮಸ್ಯೆಯಾಗಿದೆ.
ಆರಂಭದಲ್ಲಿ ಗಂಧಕಗಳಿರುವ ಬೂದಿ ಯೆಮೆನ್ ಮತ್ತು ಓಮನ್ ಕಡೆಗೆ ಸಾಗಿತು. ನಂತರ ಕೆಂಪು ಸಮುದ್ರದಾದ್ಯಂತ ದಟ್ಟವಾದ ಮೋಡ ಆವರಿಸಿದ್ದು ಅರಬ್ಬಿ ಸಮುದ್ರದ ಮೇಲೆ ಹೋಗಿದೆ. ಹವಾಮಾನ ಮುನ್ಸೂಚನೆಯ ಪ್ರಕಾರ ರಾಜಸ್ಥಾನ ಮತ್ತು ಹರಿಯಾಣದ ಕೆಲವು ಭಾಗಗಳನ್ನು ರಾತ್ರಿ ಬೂದಿ ಮೋಡ ತಲುಪಿ ದೆಹಲಿ ಕಡೆ ಸಾಗುವ ಸಾಧ್ಯತೆಯಿದೆ.
Ethiopia is reporting what scientists say is its first confirmed volcanic eruption in thousands of years after the Hayli Gubbi volcano in the remote Afar region burst to life. Researchers say this marks the volcano’s first recorded activity and likely its first eruption in many… pic.twitter.com/rzhMDttAfu
— Open Source Intel (@Osint613) November 24, 2025
ಈಗಾಗಲೇ ಅಕಾಸಾ ಏರ್, ಇಂಡಿಗೊ ಮತ್ತು ಕೆಎಲ್‌ಎಂ ಸೇರಿದಂತೆ ಹಲವು ಕಂಪನಿಗಳು ಕೆಲ ವಿಮಾನಗಳ ಹಾರಾಟವನ್ನು ರದ್ದು ಮಾಡಿವೆ.
ಎಂಜಿನ್ ಕಾರ್ಯಕ್ಷಮತೆಯ ವೈಪರೀತ್ಯಗಳು ಅಥವಾ ಕ್ಯಾಬಿನ್ ಹೊಗೆ ಅಥವಾ ವಾಸನೆ ಸೇರಿದಂತೆ ಯಾವುದೇ ಶಂಕಿತ ಬೂದಿ ಎದುರಾದಾಗ ತಕ್ಷಣ ವರದಿ ಮಾಡುವಂತೆ ವಿಮಾನಯಾನ ಸಂಸ್ಥೆಗಳಿಗೆ ಸೂಚಿಸಲಾಗಿದೆ.
ಜ್ವಾಲಾಮುಖಿ ಬೂದಿ ವಿಮಾನ ನಿಲ್ದಾಣದ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರಿದರೆ, ಸಂಬಂಧಪಟ್ಟ ನಿರ್ವಾಹಕರು ತಕ್ಷಣವೇ ರನ್‌ವೇಗಳು, ಟ್ಯಾಕ್ಸಿವೇಗಳು ಮತ್ತು ಏಪ್ರನ್‌ಗಳನ್ನು ಪರಿಶೀಲಿಸಬೇಕು ಎಂದು DGCA ಹೇಳಿದೆ.

