ಹೈದರಾಬಾದ್: ಕುಡಿದು ಬಂದು ತಾಯಿಗೆ ಹೊಡೆಯುತ್ತಿದ್ದ ತಂದೆಯ ವಿರುದ್ಧ ಏಳು ವರ್ಷದ ಬಾಲಕನೊಬ್ಬ ಪೊಲೀಸರಿಗೆ ದೂರು ನೀಡಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.
ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ಮುಸ್ತಾಬಾದ್ ಪಟ್ಟಣದಲ್ಲಿ ತಂದೆ ಬಾಲಕಿಶನ್ ವಿರುದ್ಧ ಭರತ್ ಎಂಬಾತ ದೂರು ನೀಡಿದ್ದಾನೆ. ಮುಸ್ತಾಬಾದ್ ಮೂಲದ ಬಾಲಕಿಶನ್‍ಗೆ ಭರತ್ ಹಾಗೂ ಶಿವಾನಿ ಎಂಬ ಇಬ್ಬರು ಮಕ್ಕಳಿದ್ದಾರೆ. ಅವರಿಬ್ಬರಲ್ಲಿ ಮುಸ್ತಾಬಾದ್‍ನ ಶಾಲೆಯೊಂದರಲ್ಲಿ ಮೂರನೇ ತರಗತಿಯಲ್ಲಿ ಭರತ್ ಓದುತ್ತಿದ್ದ.
Advertisement
Advertisement
ಮದ್ಯವ್ಯಸನಿಯಾಗಿದ್ದ ಬಾಲಕಿಶನ್ ಪ್ರತಿನಿತ್ಯ ತನ್ನ ಪತ್ನಿಗೆ ಮಕ್ಕಳೆದುರೇ ಹೊಡೆಯುತ್ತಿದ್ದ. ಇದನ್ನು ನೋಡಿದ ಭರತ್ ದಿನನಿತ್ಯ ಕಿರುಕುಳ ಅನುಭವಿಸುತ್ತಿದ್ದ ತನ್ನ ತಾಯಿಯನ್ನು ತಂದೆಯಿಂದ ಏನಾದರೂ ಮಾಡಬೇಕು ಎಂದು ನಿರ್ಧಸಿದನು. ಈ ಹಿನ್ನೆಲೆಯಲ್ಲಿ ತನ್ನ ಕುಟುಂಬದವರಿಗೆ ತಿಳಿಸದೇ ಪೊಲೀಸ್ ಠಾಣೆಗೆ ತೆರಳಿದ್ದಾನೆ. ಇದನ್ನೂ ಓದಿ: ಲೆಹೆಂಗಾ ಬಟನ್‌ನಲ್ಲಿ ಲಕ್ಷ – ಲಕ್ಷ ವಿದೇಶಿ ಕರೆನ್ಸಿ ಸಾಗಿಸುತ್ತಿದ್ದವನ ಬಂಧನ
Advertisement
Advertisement
ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ವೆಂಕಟೇಶ್ವರಲು ಕೇಳಿದ ಪ್ರಶ್ನೆಗೆ ಉತ್ತರಿಸಿದ ಭರತ್, ಕಳೆದ ದಿನಗಳಿಂದ ತನ್ನ ತಂದೆ ಮದ್ಯ ಸೇವಿಸಿ ತಾಯಿ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ತನಗೆ ಪೊಲೀಸರು ನ್ಯಾಯ ಒದಗಿಸುತ್ತಾರೆ ಎಂಬ ಸಂಪೂರ್ಣ ನಂಬಿಕೆಯಿದೆ ಎಂದು ತಿಳಿಸಿದ್ದಾನೆ. ಭರತ್ ನೀಡಿರುವ ದೂರಿನ ಮೇರೆಗೆ ಪೊಲೀಸರು ಆತನ ತಾಯಿ ದೀಪಿಕಾಳನ್ನು ವಿಚಾರಿಸಿದ್ದಾರೆ. ನಂತರ ಬಾಲಕಿಶನ್ ಹಾಗೂ ದೀಪಿಕಾಳಿಗೆ ಈ ರೀತಿ ಘಟನೆ ಮತ್ತೆ ಮರುಕಳಿಸದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಇದನ್ನೂ ಓದಿ: ಸ್ವಾತಂತ್ರ್ಯ ಬಂದ ಮೇಲೂ ಗಣೇಶೋತ್ಸವಕ್ಕೆ ಪರದಾಡುತ್ತಿದ್ದೇವೆ: ಮುತಾಲಿಕ್
Live Tv