ವಿಜಯಪುರ: ಕೇವಲ ಏಳು ದಿನದ ಟಗರೊಂದು 2 ಲಕ್ಷ ರೂಪಾಯಿಗೆ ವಿಜಯಪುರ ಜಿಲ್ಲೆಯಲ್ಲಿ ಇಂಡಿ ಪಟ್ಟಣದಲ್ಲಿ ಮಾರಾಟವಾಗಿದೆ.
ವಿಜಯಪುರ ಜಿಲ್ಲೆಯಲ್ಲಿ ಇಂಡಿ ಪಟ್ಟಣದಲ್ಲಿ ಟಗರು ಸಾಕಾಣಿಕೆದಾರ ಬಾನಪ್ಪ ಪೂಜಾರಿ ಸಾಕಿರುವ ಏಳು ದಿನದ ಟಗರಿಗೆ ಇಷ್ಟೊಂದು ರೇಟ್ ಬಂದಿದೆ. ಈ ಟಗರಿಗೆ ಸುಲ್ತಾನ ಎಂದು ಹೆಸರಿಡಲಾಗಿದೆ.
Advertisement
Advertisement
ಈ ಸುಲ್ತಾನನ್ನು ಮಹಾರಾಷ್ಟ್ರದ ಸಿದ್ದನಾಥ ಗ್ರಾಮದ ನಾಮದೇವ ಖೊಖರೆ ಎಂಬುವರು ಎರಡು ಲಕ್ಷ ರೂ.ಗೆ ಖರೀದಿಸಿದ್ದಾರೆ. ಖರೀದಿಸಿದ ನಂತರ ಈ ವಿಶೇಷ ಟಗರನ್ನು ಇಂಡಿ ಪಟ್ಟಣದಲ್ಲಿ ಹೊತ್ತುಕೊಂಡು ಡೋಲು ಬ್ಯಾಂಡ್, ಜಾಂಜ್ ಬಾರಿಸುತ್ತಾ ಮೆರವಣಿಗೆ ಮಾಡುವ ಮೂಲಕ ಪ್ರದರ್ಶನ ಮಾಡಿದ್ದಾರೆ. ಇದನ್ನೂ ಓದಿ: ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಿ ಎಂದ ಆರೋಗ್ಯ ಅಧಿಕಾರಿ ವಿರುದ್ಧ ಡಿಕೆಶಿ ಗರಂ
Advertisement
ವಿಶೇಷತೆ ಏನು?: ಈ ಟಗರಿನ ಸಂತತಿ ಅಪರೂಪದ್ದಾಗಿದೆ. ಇದು ಪರಿಶುದ್ಧ ದೇಶಿ ಖಿಲಾರಿ ತಳಿಯಾಗಿದೆ. ಆದ್ದರಿಂದಲೇ ಕೇವಲ 7 ದಿನದ ಮರಿಯನ್ನು 2 ಲಕ್ಷ ರೂ.ಗೆ ಮಾರಾಟ ಮಾಡಲಾಗಿದೆ ಎಂದು ಬಾನಪ್ಪ ಪೂಜಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಿ ಎಂದ ಆರೋಗ್ಯ ಅಧಿಕಾರಿ ವಿರುದ್ಧ ಡಿಕೆಶಿ ಗರಂ