ಕಾರವಾರ: ಸೇತುವೆ ದಾಟುತಿದ್ದ ಎಮ್ಮೆಗಳ ಗುಂಪಿನ ಮೇಲೆ ರೈಲು ಹರಿದು ಏಳು ಎಮ್ಮೆಗಳು ದಾರುಣ ಸಾವುಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಕಡವಿನಕಟ್ಟಾದಲ್ಲಿ ನಡೆದಿದೆ.
ಕಡವಿನಕಟ್ಟಾ ಅರಣ್ಯ ಪ್ರದೇಶಕ್ಕೆ ಮೇವು ಮೇಯಲು ಏಳು ಎಮ್ಮೆಗಳು ಹೋಗಿದ್ದವು. ಈ ವೇಳೆ ಅಲ್ಲೇ ಪಕ್ಕದಲ್ಲಿ ರೈಲ್ವೆ ಹಳಿ ದಾಟುವಾಗ ಮಂಗಳೂರು ಕಡೆಯಿಂದ ಗೋವಾ ಕಡೆಗೆ ಸಂಚರಿಸುತ್ತಿದ್ದ ಎಕ್ಸ್ ಪ್ರೆಸ್ ರೈಲೊಂದು ವೇಗವಾಗಿ ಬಂದು ಎಮ್ಮೆಗಳಿಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ಪರಿಣಾಮ ಏಳು ಎಮ್ಮೆಗಳು ಸ್ಥಳದಲ್ಲಿಯೇ ಮೃತಪಟ್ಟಿವೆ. ರೈಲು ಡಿಕ್ಕಿಯ ರಭಸಕ್ಕೆ ಎಮ್ಮೆಗಳ ತಲೆ, ಕೊಂಬು ಸೇರಿದಂತೆ ದೇಹವೂ ಸಂಪೂರ್ಣವಾಗಿ ಛಿದ್ರ-ಛಿದ್ರವಾಗಿ ರೈಲ್ವೆ ಹಳಿಯ ಬಳಿ ಬಿದ್ದಿದೆ.
ಕಡವಿ ಕಟ್ಟಾ ಗ್ರಾಮದ ಉಮೇಶ್ ಎಂಬವರಿಗೆ ಸೇರಿದ ಎಮ್ಮೆಗಳಾಗಿದ್ದು, ಮೃತ ಎಮ್ಮೆಗಳ ಮೌಲ್ಯ 2 ಲಕ್ಷ ರೂ. ಆಗಿದೆ ಎಂದು ತಿಳಿದು ಬಂದಿದೆ. ಈ ಘಟನೆ ಸಂಬಂಧ ರೈಲ್ವೇ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv