ಇಟಲಿಯಲ್ಲಿ ಹೆಲಿಕಾಪ್ಟರ್ ಪತನ – 7 ಮೃತದೇಹ ಪತ್ತೆ

Advertisements

ರೋಮ್: ಇಟಲಿಯಲ್ಲಿ ಹೆಲಿಕಾಪ್ಟರ್ ಒಂದು 2 ದಿನಗಳ ಹಿಂದೆ ರಾಡಾರ್‌ನಿಂದ ಕಣ್ಮರೆಯಾಗಿತ್ತು. ಪತನವಾಗಿದ್ದ ಹೆಲಿಕಾಪ್ಟರ್‌ನಿಂದ ಇದೀಗ 7 ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisements

ಹೆಲಿಕಾಪ್ಟರ್ ಗುರುವಾರ ಟಸ್ಕನಿಯ ಲುಕ್ಕಾದಿಂದ ಟೇಕ್ ಆಫ್ ಆಗಿದ್ದು, ಟ್ರೆವಿಸೊ ನಗರದ ಕಡೆಗೆ ಹೋಗುತ್ತಿತ್ತು. ಆದರೆ ಹವಾಮಾನ ವೈಪರಿತ್ಯದಿಂದಾಗಿ ಹೆಲಿಕಾಪ್ಟರ್ ಪತನವಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪುಲ್ವಾಮಾದಲ್ಲಿ ಎನ್‍ಕೌಂಟರ್ – ಮೂವರು ಲಷ್ಕರ್ ಉಗ್ರರ ಹತ್ಯೆ

Advertisements

ಹೆಲಿಕಾಪ್ಟರ್‌ನಲ್ಲಿದ್ದ 7 ಪ್ರಯಾಣಿಕರು ಮೃತಪಟ್ಟಿದ್ದಾರೆ. ಅದರಲ್ಲಿ ನಾಲ್ವರು ಟರ್ಕಿ ಮೂಲದವರು ಹಾಗೂ ಇಬ್ಬರು ಲೆಬನಾನಿಯವರು ಇದ್ದು, ಒಬ್ಬ ಇಟಲಿ ಮೂಲದ ಪೈಲಟ್ ಸೇರಿದಂತೆ ಎಲ್ಲರೂ ಮೃತಪಟ್ಟಿದ್ದಾರೆ. ಪ್ರಯಾಣಿಕರು ಇಟಲಿಗೆ ವ್ಯಾಪಾರದ ಹಿನ್ನೆಲೆ ಪ್ರಯಾಣಿಸುತ್ತಿದ್ದರು ಎಂದು ಮೊಡೆನಾ ನಗರದ ಪ್ರಿಫೆಕ್ಟ್ ಕಚೇರಿ ತಿಳಿಸಿದೆ. ಇದನ್ನೂ ಓದಿ: ಬೂದಿಮುಚ್ಚಿದ ಕೆಂಡದಂತೆ ಭಾರತ – ಯುಪಿಯಲ್ಲಿ 250ಕ್ಕೂ ಗಲಭೆಕೋರರು ಅರೆಸ್ಟ್

ಟಸ್ಕನಿ ಹಾಗೂ ಎಮಿಲಿಯಾ ರೋಮ್ಯಾಗ್ನಾ ಪ್ರದೇಶದ ಗಡಿಯಲ್ಲಿರುವ ಪರ್ವತ ಪ್ರದೇಶದಲ್ಲಿ ಹೆಲಿಕಾಪ್ಟರ್ ಪತ್ತೆಯಾಗಿದೆ. ಹೆಲಿಕಾಪ್ಟರ್ ಸಂಪೂರ್ಣವಾಗಿ ಸುಟ್ಟು ಹೋಗಿರುವುದರಿಂದ ಎಲ್ಲರೂ ಮೃತಪಟ್ಟಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisements
Exit mobile version