ಸ್ಯಾಂಡಲ್ ವುಡ್ ನಲ್ಲಿ ಯಶ್, ಪುನೀತ್ ರಾಜ್ ಕುಮಾರ್ ಅವರಂತಹ ಸ್ಟಾರ್ ನಟರಿಗೆ ಸಿನಿಮಾ ಮಾಡಿ ಸೈ ಎನಿಸಿಕೊಂಡವರು ಪವನ್ ಒಡೆಯರ್ (Pawan Wodeyar). ನಿರ್ದೇಶನದಲ್ಲಿ ಗೆದ್ದಿರುವ ಪವನ್ ನಿರ್ಮಾಪಕರಾಗಿಯೂ ಮೊದಲ ಹೆಜ್ಜೆಯಲ್ಲಿ ಶಹಬಾಸ್ ಗಿರಿ ಪಡೆದುಕೊಂಡಿದ್ದಾರೆ. ಡೊಳ್ಳು ಸಿನಿಮಾ ಮೂಲಕ ನಿರ್ಮಾಣಕ್ಕಿಳಿದು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಬಾಚಿಕೊಂಡಿದ್ದ ಪವನ್ ಒಡೆಯರ್ ಮತ್ತೊಮ್ಮೆ ಸಾಗರ್ ಪುರಾಣಿಕ್ ಜೊತೆ ಕೈ ಜೋಡಿಸಿರುವುದು ಗೊತ್ತೇ ಇದೆ.
Advertisement
ಡೊಳ್ಳು ಸಾರಥಿ ಸಾಗರ್ ಪುರಾಣಿಕ್ (Sagar Puranik) ಹಾಗೂ ಪವನ್ ಒಡೆಯರ್ ಮತ್ತೊಂದು ಸಂಗಮದ ಸಿನಿಮಾ ಸೆಟ್ಟೇರಿದೆ. ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಇತ್ತೀಚೆಗಷ್ಟೇ ಮುಹೂರ್ತ ನೆರವೇರಿದೆ. ಈ ಚಿತ್ರಕ್ಕೆ ವೆಂಕ್ಯಾ (Venkya) ಎಂಬ ಟೈಟಲ್ ಇಡಲಾಗಿದೆ. ವೆಂಕ್ಯಾನಿಗೆ ಸಾಗರ್ ಪುರಾಣಿಕ್ ಆಕ್ಷನ್ ಕಟ್ ಹೇಳುವುದರ ಜೊತೆಗೆ ನಾಯಕನಾಗಿಯೂ ಮೊದಲ ಹೆಜ್ಜೆ ಇಟ್ಟಿದ್ದಾರೆ. ನಿರ್ದೇಶನದ ಜೊತೆಗೆ ಸಾಗರ್ ನಟನೆ ಜವಾಬ್ದಾರಿನ್ನು ಹೊತ್ತುಕೊಂಡಿದ್ದಾರೆ.
Advertisement
Advertisement
ವೆಂಕ್ಯಾ ಶೂಟಿಂಗ್ ಈಗಾಗಲೇ ಚಾಲುವಾಗಿದೆ. ಇದೊಂದು ವಿಭಿನ್ನ ಪ್ರಯತ್ನದ ಸಿನಿಮಾ. ಉತ್ತರ ಕರ್ನಾಟಕದ ಕಥೆಯಾದ್ರೂ ಅದು ದೇಶ ಎಲ್ಲಾ ಸುತ್ತಲಿದೆ. ಇದೊಂದು ಹೊಸ ಬಗೆಯ ಕಮರ್ಷಿಯಲ್ ಸಿನಿಮಾ ಅಂತಿದೆ ಚಿತ್ರತಂಡ. ಶೀಘ್ರದಲ್ಲೇ ಉಳಿದ ತಾರಾ ಬಳಗ ಹಾಗೂ ತಾಂತ್ರಿಕ ವರ್ಗದ ಬಗ್ಗೆ ಚಿತ್ರತಂಡ ಮಾಹಿತಿ ನೀಡಲಿದೆ.
Advertisement
ಅಪೇಕ್ಷಾ ಒಡೆಯರ್ ಮತ್ತು ಪವನ್ ಒಡೆಯರ್ ಹಣ ಹಾಕುತ್ತಿರುವ ವೆಂಕ್ಯಾ ಚಿತ್ರಕ್ಕೆ ಸ್ನೇಹಿತರಾದ ಅವಿನಾಶ್ ವಿ ರೈ ಮತ್ತು ಮೋಹನ್ ಲಾಲ್ ಮೆನನ್ ಸಹ ನಿರ್ಮಾಣವಿರಲಿದೆ.