ಬೆಂಗಳೂರು: ಇಂದಿನಿಂದ ವಿಧಾನಮಂಡಲ ಅಧಿವೇಶನ ನಡೆಯಲಿದ್ದು, ಕಮಲವನ್ನು ಸದನದಲ್ಲಿ ಮುಜುಗರದಲ್ಲಿ ಮುಳುಗಿಸಲು ಜೆಡಿಎಸ್ ಭರ್ಜರಿ ಪೂರ್ವ ತಯಾರಿಯಲ್ಲಿ ತೊಡಗಿದೆ. ಸದನ ಕದನಗೆ ಜೆಡಿಎಸ್ ರೆಡಿಯಾಗಿದ್ದು, ವಿಧಾನಮಂಡಲ ಅಧಿವೇಶನ ಕಲಾಪಕ್ಕೂ ಮುನ್ನ ಜೆಡಿಎಸ್ ಶಾಸಕಾಂಗ ಸಭೆ ನಡೆಯಲಿದೆ. ಕಲಾಪದಲ್ಲಿ ಬಿಎಸ್‍ವೈ ಸರ್ಕಾರವನ್ನು ಅಡಗತ್ತರಿಯಲ್ಲಿ ಸಿಲುಕಿಸಲು ಪೂರ್ವ ತಯಾರಿಯಲ್ಲಿರುವ ಜೆಡಿಎಸ್, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಡೆಯಲಿದೆ.
ಸಭೆಯಲ್ಲಿ ಏನೇನು ಚರ್ಚೆಯಾಗಬಹುದು?
1. ಮೈತ್ರಿ ಸರ್ಕಾರ ದ ಅವಧಿಯಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ನೀಡುತ್ತಿದ್ದ ಕೆಲವೊಂದು ಅನುದಾನವನ್ನು ಈಗ ಸ್ಥಗಿತಗೊಳಿಸಲಾಗಿದೆ. ಸಿಎಂ ಯಡಿಯೂರಪ್ಪ ಈ ಅನುದಾನದ ಕಡತಕ್ಕೆ ಸಹಿ ಹಾಕುತ್ತಿಲ್ಲ ಅನ್ನುವ ಆರೋಪವನ್ನು ಕುಮಾರಸ್ವಾಮಿ ಮಾಡಲಿದ್ದಾರೆ. ಇದು ದ್ವೇಷದ ರಾಜಕೀಯ ಅಂತ ವಾಗ್ದಾಳಿ ನಡೆಸಲು ಸಜ್ಜು. ಎಲ್ಲಾ ಅನುದಾನ ಸ್ಥಗಿತದ ದಾಖಲೆಯನ್ನು ಜೆಡಿಎಸ್ ರೆಡಿ ಇಟ್ಟಿದೆ.
2. ಸಾಲಮನ್ನಾ ವಿಚಾರದಲ್ಲಿ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ಲ್ಯಾನ್. ಸದನದಲ್ಲಿ ರೈತರ ವಿರೋಧಿ ಬಿಜೆಪಿ ಸರ್ಕಾರ ಅಂತ ಬಿಂಬಿಸಲು ಕುಮಾರ ಸ್ವಾಮಿ ಅಸ್ತ್ರ ಬಳಕೆ ಮಾಡಲಿದ್ದಾರೆ.
3.ಮಂಗಳೂರು ಗಲಭೆ, ಬಾಂಬ್ ಪ್ರಕರಣ, ಗೋಲಿಬಾರ್ ಪ್ರಕರಣದಲ್ಲೂ ಬಿಜೆಪಿಯ ವಿರುದ್ಧ ವಾಗ್ಧಾಳಿಗೆ ರೆಡಿ.
4. ಆಶೋಕ್ ಪುತ್ರನ ಪ್ರಕರಣದ ಬಗ್ಗೆಯೂ ಪ್ರಸ್ತಾಪ ಸಾಧ್ಯತೆ.
5. ಪ್ರವಾಹದ ಅನುದಾನದ ವಿಚಾರದಲ್ಲಿಯೂ ಬಿಜೆಪಿಯ ವೈಫಲ್ಯವನ್ನು ಎತ್ತಿ ಹೇಳಲು ಜೆಡಿಎಸ್ ರೆಡಿಯಾಗಿದೆ.