ಬೆಂಗಳೂರು: ಫೆ.14- 15 ರಂದು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ. ಫೆಬ್ರವರಿ 17 ರಿಂದ ವಿಧಾನಸಭೆ ಅಧಿವೇಶನ ಆರಂಭವಾಗಲಿದ್ದು, ಅದಕ್ಕೂ ಮೊದಲು ಸದನದ ಹೊರಗೆ ಸರ್ಕಾರಕ್ಕೆ ಪ್ರತಿಭಟನೆಯ ಬಿಸಿ ಮುಟ್ಟಿಸಲು ಕೈ ಪಾಳಯ ಮುಂದಾಗಿದೆ.
Advertisement
ರಾಜ್ಯ ಸರ್ಕಾರ ಶಾಲಾಮಕ್ಕಳು, ಮಹಿಳೆಯರಿಗೆ ತೊಂದರೆ ಕೊಡುತ್ತಿದೆ. ಯಾವ ಪ್ರಕರಣಕ್ಕೆ ಯಾವ ಕೇಸ್ ದಾಖಲಿಸಬೇಕು ಅಂತ ಪೊಲೀಸರು ಯೋಚಿಸುತ್ತಿಲ್ಲ. ಕಲ್ಲಡ್ಕ ಪ್ರಭಾಕರ್ ಭಟ್ ಶಾಲೆ ಮೇಲೆ ಸೆಡಿಷನ್ ಕೇಸ್ ಹಾಕಲ್ಲ. ಆದರೆ ಯುಟಿ ಖಾದರ್, ಶಾಹಿನ್ ಸ್ಕೂಲ್ ಮೇಲೆ ದೇಶದ್ರೋಹದ ಕೇಸ್ ದಾಖಲಿಸುತ್ತಾರೆ. ಆ ಮೂಲಕ ವಿರೋಧ ಮಾಡುವವರ ಬಾಯಿ ಮುಚ್ಚಿಸುವ ಕೆಲಸ ಮಾಡ್ತಿದ್ದಾರೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಕಾಂಗ್ರೆಸ್ ಸಿದ್ಧತೆ ನಡೆಸಿದೆ.
Advertisement
Advertisement
ರೇಣುಕಾಚಾರ್ಯ ತರಹದವರು ಎಂಥೆಂಥದ್ದೋ ಹೇಳಿಕೆಗಳನ್ಬು ಕೊಡ್ತಾರೆ. ಕೀಳುಮಟ್ಟದ ರಾಜಕಾರಣ ಬಿಜೆಪಿ ನಾಯಕರು ಮಾಡುತ್ತಿದ್ದಾರೆ ಎಂದು ಆರೋಪಿಸಿ ಫೆಬ್ರವರಿ 15 ರಂದು ಮೌರ್ಯ ಸರ್ಕಲ್ ಗಾಂಧಿ ಪ್ರತಿಮೆಯಿಂದ ಪ್ರತಿಭಟನೆ ಹೊರಟು ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಕಾಂಗ್ರೆಸ್ ನಿರ್ಧರಿಸಿದೆ.