ಅಂಗಡಿಗಳಲ್ಲಿ ಸಿಗುವ ಚಿಕ್ಕಿಯನ್ನು (Chikki) ಮಕ್ಕಳು ಇಷ್ಟಪಟ್ಟು ತಿನ್ನುತ್ತಾರೆ. ಹಲವು ಬಗೆಯ ಒಣ ಬೀಜಗಳನ್ನು ಬಳಸಿ ಚಿಕ್ಕಿಯನ್ನು ಮಾಡಲಾಗುತ್ತದೆ. ಅದೇ ರೀತಿ ಎಳ್ಳಿನಿಂದಲೂ ಚಿಕ್ಕಿ (Sesame Chikki) ಮಾಡಬಹುದು. ಒಮ್ಮೆ ಮನೆಯಲ್ಲಿಯೇ ಎಳ್ಳು ಚಿಕ್ಕಿಯನ್ನು ಮಾಡಿ ನೋಡಿ. ಎಳ್ಳಿನ ಚಿಕ್ಕಿ ಮಾಡುವ ವಿಧಾನ ಇಲ್ಲಿದೆ.
Advertisement
ಬೇಕಾಗುವ ಪದಾರ್ಥಗಳು:
ಬಿಳಿ ಎಳ್ಳು- 1 ಕಪ್
ತುಪ್ಪ- 1 ಟೀಸ್ಪೂನ್
ಬೆಲ್ಲ- 1 ಕಪ್ ಇದನ್ನೂ ಓದಿ: ಸಿಹಿಯಾದ ಆಲೂಗಡ್ಡೆಯ ಹಲ್ವಾ
Advertisement
ಮಾಡುವ ವಿಧಾನ:
* ಮೊದಲಿಗೆ ಪ್ಯಾನ್‌ನಲ್ಲಿ ಎಳ್ಳು ಹಾಕಿ, ಕಡಿಮೆ ಉರಿಯಲ್ಲಿ ಚೆನ್ನಾಗಿ ಹುರಿಯಿರಿ. ಬಳಿಕ ಬದಿಗಿಡಿ.
* ಇನ್ನೊಂದು ಕಡಾಯಿ ತೆಗೆದುಕೊಂಡು ಅದಕ್ಕೆ ತುಪ್ಪ ಹಾಕಿ ಬಿಸಿ ಮಾಡಿ.
* ಬಳಿಕ ಬೆಲ್ಲ ಸೇರಿಸಿ ಅದು ಸಂಪೂರ್ಣ ಕರಗುವ ತನಕ ಮಧ್ಯಮ ಉರಿಯಲ್ಲಿ ಕುದಿಸಿ.
* ಬೆಲ್ಲ ಸಂಪೂರ್ಣ ಕರಗಿದ ಬಳಿಕ ಸಿರಪ್‌ನಂತೆ ಆಗುತ್ತದೆ.
* ಅದರ ಒಂದು ಹನಿಯನ್ನು ತೆಗೆದುಕೊಂಡು, ನೀರಿರುವ ಬಟ್ಟಲಿನಲ್ಲಿ ಹಾಕಿ ನೋಡಿ. ಅದು ತಕ್ಷಣ ಗಟ್ಟಿಯಾದ ಚೆಂಡಿನಂತಾದರೆ
Advertisement
Advertisement
ಪಾಕ ತಯಾರಾಗಿದೆ. ಇಲ್ಲದೇ ಹೋದರೆ ಮತ್ತೊಂದು ನಿಮಿಷ ಕುದಿಸಿ ಮತ್ತೆ ಪರಿಶೀಲಿಸಿ.
* ಈಗ ಬೆಲ್ಲದ ಸಿರಪ್‌ಗೆ ಎಳ್ಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
* ಈಗ ಒಂದು ತಟ್ಟೆಗೆ ತುಪ್ಪವನ್ನು ಸವರಿ(ಬಟರ್ ಪೇಪರ್ ಬಳಸಬಹುದು), ಅದರ ಮೇಲೆ ಎಳ್ಳಿನ ಮಿಶ್ರಣವನ್ನು ಸುರಿಯಿರಿ.
* ಮಿಶ್ರಣ ಬೇಗ ಗಟ್ಟಿಯಾಗುವುದರಿಂದ ಅದು ಬೆಚ್ಚಗಿರುವಾಗಲೇ ಚಾಕುವಿನ ಮೂಲಕ ಚೌಕಾಕಾರದಲ್ಲಿ ಕತ್ತರಿಸಿ.
* ಈಗ ಮಿಶ್ರಣವನ್ನು ತಣ್ಣಗಾಗಲು ಬಿಡಿ.
* ಎಳ್ಳು ಚಿಕ್ಕಿ ಇದೀಗ ತಯಾರಾಗಿದ್ದು, ಇದನ್ನು ಗಾಳಿಯಾಡದ ಡಬ್ಬದಲ್ಲಿ ಶೇಖರಿಸಿಟ್ಟರೆ, 1 ತಿಂಗಳ ವರೆಗೂ ಬೇಕೆಂದಾಗ ಸವಿಯಬಹುದು. ಇದನ್ನೂ ಓದಿ: ಫಟಾಫಟ್ ಅಂತ ಮಾಡ್ಬೋದು ಕೇಸರ್ ಪೇಡ