ಬೆಂಗಳೂರು: ಹೋಟೆಲ್ ಮತ್ತು ರೆಸ್ಟೋರೆಂಟ್‍ಗಳಲ್ಲಿ ಸೇವಾ ಶುಲ್ಕ ರದ್ದುಪಡಿಸುವ ಸಂಬಂಧ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈಗಾಗಲೇ, ಕೇಂದ್ರದ ಆದೇಶ ರಾಜ್ಯ ಸರ್ಕಾರದ ಕೈಸೇರಿದ್ದು, ಈ ನಿಟ್ಟಿನಲ್ಲಿ ಮುಂದಿನವಾರ ಹೋಟೆಲ್, ರೆಸ್ಟೋರೆಂಟ್ ಮಾಲೀಕರ ಜೊತೆ ಸಭೆ ಮಾಡಿ, ಸೇವಾಶುಲ್ಕ ರದ್ದು ಮಾಡಲಾಗುವುದು ಎಂದು ಆಹಾರ ನಾಗರೀಕ ಪೂರೈಕೆ ಸಚಿವ ಯು. ಟಿ. ಖಾದರ್ ಹೇಳಿದ್ದಾರೆ.
Advertisement
ಇಂದು ವಿಧಾನಸೌಧದಲ್ಲಿ ಮಾತನಾಡಿದ ಅವರು, ಹೋಟೆಲ್ ಮತ್ತು ರೆಸ್ಟೋರೆಂಟ್‍ಗಳಲ್ಲಿ ಸೇವಾ ಶುಲ್ಕ ರದ್ದುಪಡಿಸಬೇಕೆಂದು ಕೇಂದ್ರ ಆದೇಶಿಸಿದೆ. ಅದರಂತೆ ಹೋಟೆಲ್, ರೆಸ್ಟೋರೆಂಟ್ ಮಾಲೀಕರ ಸಭೆ ಮಾಡಿ ಸೇವಾ ಶುಲ್ಕ ರದ್ದು ಮಾಡುತ್ತೇವೆ. ಆದೇಶ ಜಾರಿ ಬಳಿಕವೂ ಶುಲ್ಕ ವಸೂಲಿ ಮಾಡಿದರೆ ಕೇಂದ್ರ ಸರ್ಕಾರದ ಆದೇಶದಂತೆ ದಂಡ ವಿಧಿಸಿಲಾಗುವುದು. ಅಲ್ಲದೆ ಗ್ರಾಹಕರು ಕೂಡ ನೇರವಾಗಿ ಗ್ರಾಹಕರ ಕೋರ್ಟ್‍ಗೆ ದೂರು ನೀಡಬಹುದು ಎಂದ್ರು.
Advertisement
ಸಮಾರಂಭಗಳಲ್ಲಿ ಅನಗತ್ಯವಾಗಿ ಆಹಾರ ವ್ಯರ್ಥವಾಗುತ್ತಿದೆ. ಈ ನಿಟ್ಟಿನಲ್ಲಿ ಎನ್‍ಜಿಓಗಳ ಜೊತೆ ಚರ್ಚೆ ನಡೆಸಲಾಗುತ್ತಿದೆ. ಸಭೆ ಸಮಾರಂಭಗಳಲ್ಲಿ ವ್ಯರ್ಥವಾಗುತ್ತಿರುವ ಆಹಾರವನ್ನು ತಡೆಯಲು ನಿಯಮ ರೂಪಿಸಿ, ಸರ್ಕಾರೇತರ ಸಂಸ್ಥೆಗಳ ಮೂಲಕ ಹಸಿದವರಿಗೆ ವ್ಯರ್ಥ ಆಹಾರವನ್ನು ಪೂರೈಸುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ನಿಯಮವನ್ನು ತರಲು ಮುಂದಾಗಿದೆ ಅಂತಾ ಸಚಿವರು ಹೇಳಿದ್ರು.
Advertisement