ಬೆಂಗಳೂರು: ಇನ್ನು ಮುಂದೆ ಬೆಂಗಳೂರಿನಲ್ಲಿ (Bengaluru) ಕಸಕ್ಕೂ (Garbage) ಸೇವಾ ಶುಲ್ಕ ಪಾವತಿಸಬೇಕು. ಇದೇ ಏಪ್ರಿಲ್ 1 ರಿಂದ ಇದು ಜಾರಿಗೆ ಬರಲಿದೆ ಎಂದು ಬಿಬಿಎಂಪಿ (BBMP) ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಈ ವಿಚಾರದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಇದು ತೆರಿಗೆ (Tax) ಅಲ್ಲ. ಇದು ಸರ್ವಿಸ್ ಚಾರ್ಜ್ ಆಗಿದ್ದು, ಪ್ರಾಪಾರ್ಟಿ ಟ್ಯಾಕ್ಸ್ ಜೊತೆಗೆ ವರ್ಷಕ್ಕೆ ಎರಡು ಬಾರಿ ಹಣ ಕಟ್ಟಬಹುದು ಎಂದು ತಿಳಿಸಿದರು.
ವಿದ್ಯುತ್ ಬಿಲ್ ರೀತಿ ಪ್ರತಿ ಮನೆ ಮನೆಗೆ ಹೋಗಿ ಸಂಗ್ರಹಿಸಲು ಸಾಧ್ಯವಿಲ್ಲ. ಹೀಗಾಗಿ ಸರ್ವಿಸ್ ಚಾರ್ಜ್ ಹಾಕಲಾಗುತ್ತದೆ ಎಂದು ವಿವರಿಸಿದರು.
ನಗರದಲ್ಲಿ ಕಸ ವಿಲೇವಾರಿಯಾಗದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಕಸ ವಿಲೇವಾರಿ ಒಂದು ದಿನ ಸ್ಥಗಿತವಾಗಿದೆ, ರಾತ್ರಿಯಿಡಿ ಅನ್ ಲೋಡ್ ಮಾಡಲಾಗುತ್ತಿದೆ. ಅವರನ್ನು ಮನವೊಲಿಸಲು ಯಶಸ್ವಿಯಾಗಿದ್ದು ರಾತ್ರಿ ವೇಳೆ ಕಸ ವಿಲೇವಾರಿ ಆಗಲಿದೆ ಎಂದು ತಿಳಿಸಿದರು.