ಮಡಿಕೇರಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಬಸ್‌ಗಳಿಗೆ ಸೋಮವಾರ ಬೆಳಗ್ಗೆಯಿಂದ DCS (ಘಟಕದ ಗಣಕಯಂತ್ರದ ತಂತ್ರಾಂಶ) ಸಾಫ್ಟ್‌ವೇರ್ ಸರ್ವರ್ ಸಮಸ್ಯೆಯಿಂದಾಗಿ ಪ್ರಯಾಣಿಕರು ಹೈರಾಣಾಗಿರುವ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ.
Advertisement
ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಕರಿಗೆ ಟಿಕೆಟ್ ಮಾಡುವ DCS (ಘಟಕದ ಗಣಕಯಂತ್ರದ ತಂತ್ರಾಂಶ) ಸಾಫ್ಟ್‌ವೇರ್ ಸರ್ವರ್ ಸಮಸ್ಯೆಯಿಂದ ವಿವಿಧ ಜಿಲ್ಲೆಗಳಿಗೆ ಸಂಚಾರ ಮಾಡಬೇಕಿರುವ ಬಸ್‌ಗಳು ಮಡಿಕೇರಿ ಡಿಪೋದಲ್ಲೇ ಸರತಿ ಸಾಲಿನಲ್ಲಿ ನಿಂತಿವೆ. ಹೀಗಾಗಿ ಬಸ್‌ಗಳಿಗಾಗಿ ಕಾದು ಕಾದು ನೂರಾರು ಪ್ರಯಾಣಿಕರು ಹೈರಾಣಾಗಿದ್ದಾರೆ.
Advertisement
Advertisement
ಅಲ್ಲದೇ ಸುಮಾರು 15 ಮಾರ್ಗಗಳಲ್ಲಿ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಕುಶಾಲನಗರ, ಸೋಮವಾರಪೇಟೆ, ಮೈಸೂರು ಸೇರಿದಂತೆ ಹಲವೆಡೆಗಳಲ್ಲಿ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಇದನ್ನೂ ಓದಿ: `ಏಕ್ ಹೈ ತೊ ಸೇಫ್ ಹೈ’ ಪ್ರಧಾನಿ ಘೋಷಣೆಗೆ ಟೀಕೆ – ಮೋದಿ, ಅದಾನಿ ಫೋಟೋ ತೋರಿಸಿ ರಾಗಾ ವ್ಯಂಗ್ಯ
Advertisement
ಇನ್ನೂ ಈ ಬಗ್ಗೆ ʻಪಬ್ಲಿಕ್ ಟಿವಿʼ, ಡಿಪೋ ಮ್ಯಾನೇಜರ್ ಮೆಹಬೂಬ್ ಅಲಿ ಅವರನ್ನ ಕೇಳಿದ್ರೆ, ಬೆಳಗ್ಗೆಯಿಂದಲ್ಲೂ ಇಂಟರ್ನೆಟ್ ಸಮಸ್ಯೆಯಿಂದ ಘಟಕದ ಗಣಕಯಂತ್ರದ ತಂತ್ರಾಂಶದಲ್ಲಿ ಸಮಸ್ಯೆಯಾಗಿತ್ತು. ಹೀಗಾಗಿ ಮೈಸೂರು ಸೋಮವಾರಪೇಟೆ ಸೇರಿದಂತೆ ಸುಮಾರು ಹದಿನೈದು ಕಡೆಗಳಲ್ಲಿ ರೂಟ್ ಅಪರೇಟ್ ಅಗಿಲ್ಲ. ಸದ್ಯದಲ್ಲೇ ತಾಂತ್ರಿಕದೋಷ ಸರಿಪಡಿಸಿ ಬಸ್ ಸಂಚಾರಕ್ಕೆ ಆರಂಭಿಸುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 40% ಕಮಿಷನ್ ಆರೋಪದಂತೆ ಕೋವಿಡ್‌ನಲ್ಲೂ ಕ್ಲೀನ್ ಚಿಟ್ ಸಿಗಲಿದೆ: ಸೋಮಣ್ಣ ವಿಶ್ವಾಸ