ಫೇಮಸ್ ಸ್ಟ್ರೀಟ್ ಫುಡ್ ಕಚೋರಿ ನಾವು ಕೇಳಿದ್ದೇವೆ. ಆದರೆ ಖೋವಾ ಕಚೋರಿ ಕೇಳಿದ್ದೀರಾ? ಸಿಹಿ ಸಿಹಿಯಾದ ಖೋವಾ ಕಚೋರಿ ರಾಜಸ್ಥಾನದಲ್ಲಿ ಹಬ್ಬದ ತಿಂಡಿಗಳಲ್ಲಿ ಫೇಮಸ್. ಮನೆಗೆ ಅತಿಥಿಗಳು ಬಂದಾಗಲೂ ಈ ಸಿಹಿ ಹಂಚಲು ಒಂದು ಉತ್ತಮ ಆಯ್ಕೆ. ಖೋವಾ ಕಚೋರಿ ಹೇಗೆ ಮಾಡೋದು ಎಂಬುದನ್ನು ನೋಡೋಣ.
Advertisement
ಬೇಕಾಗುವ ಪದಾರ್ಥಗಳು:
ಮೈದಾ ಹಿಟ್ಟು – 1 ಕಪ್
ತುಪ್ಪ – 75 ಗ್ರಾಂ
ಉಪ್ಪು – ಚಿಟಿಕೆ
ನೀರು – 1 ಕಪ್
ಸ್ಟಫಿಂಗ್ ತಯಾರಿಸಲು:
ಖೋವಾ – ಅರ್ಧ ಕಪ್
ಕೇಸರಿ – ಚಿಟಿಕೆ
ತೆಳ್ಳಗೆ ಕತ್ತರಿಸಿದ ಬಾದಾಮಿ – 2 ಟೀಸ್ಪೂನ್
ತೆಳ್ಳಗೆ ಕತ್ತರಿಸಿದ ಪಿಸ್ತಾ – 2 ಟೀಸ್ಪೂನ್
ಒಣ ದ್ರಾಕ್ಷಿ – 2 ಟೀಸ್ಪೂನ್
ಏಲಕ್ಕಿ ಪುಡಿ – 1 ಟೀಸ್ಪೂನ್
ಎಣ್ಣೆ – ಹುರಿಯಲು ಬೇಕಾಗುವಷ್ಟು
ಸಕ್ಕರೆ ಪಾಕ ತಯಾರಿಸಲು:
ಸಕ್ಕರೆ – 1 ಕಪ್
ನಿಂಬೆ ರಸ – 2 ಟೀಸ್ಪೂನ್
ಬಾದಾಮಿ, ಪಿಸ್ತಾ ಚೂರುಗಳು – ಅಲಂಕಾರಕ್ಕೆ ಇದನ್ನೂ ಓದಿ: ಟ್ರೈ ಮಾಡಿ ಸಾಂಪ್ರದಾಯಿಕ ಪಂಜಾಬಿ ಸಿಹಿಯಾದ ಲಸ್ಸಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಮೈದಾ, ತುಪ್ಪ ಹಾಗೂ ಉಪ್ಪನ್ನು ಒಂದು ಬಟ್ಟಲಿನಲ್ಲಿ ಸೇರಿಸಿ ಮಿಶ್ರಣ ಮಾಡಿ. ಬಳಿಕ ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ಮೃದುವಾದ ಹಿಟ್ಟನ್ನಾಗಿ ನಾದಿಕೊಳ್ಳಿ.
* ಹಿಟ್ಟನ್ನು ಒದ್ದೆ ಬಟ್ಟೆಯಿಂದ ಮುಚ್ಚಿ, 15 ನಿಮಿಷ ವಿಶ್ರಾಂತಿ ನೀಡಿ.
* ಈಗ ಒಂದು ಬೌಲ್‌ನಲ್ಲಿ ಖೋವಾ, ಬಾದಾಮಿ, ಪಿಸ್ತಾ, ಒಣ ದ್ರಾಕ್ಷಿ, ಕೇಸರಿ ಹಾಗೂ ಏಲಕ್ಕಿ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ ಪಕ್ಕಕ್ಕಿಡಿ.
* ಸಕ್ಕರೆ ಪಾಕ ತಯಾರಿಸಲು 4 ಕಪ್ ನೀರಿಗೆ 1 ಕಪ್ ಸಕ್ಕರೆ ಸೇರಿಸಿ ಕುದಿಸಿ. ಬಳಿಕ ಅದಕ್ಕೆ ಕೇಸರಿ ಹಾಗೂ ನಿಂಬೆ ರಸ ಸೇರಿಸಿ ಪಕ್ಕಕ್ಕೆ ಇಡಿ.
* ಈಗ ಹಿಟ್ಟು ಹಾಗೂ ಖೋವಾ ಮಿಶ್ರಣಗಳನ್ನು ನಿಂಬೆ ಗಾತ್ರದ ಉಂಡೆಗಳನ್ನಾಗಿ ಮಾಡಿಕೊಳ್ಳಿ.
* ಹಿಟ್ಟಿನ ಉಂಡೆಯನ್ನು ತೆಗೆದುಕೊಂಡು ಅದನ್ನು ಸಣ್ಣ ಹಾಗೂ ಸ್ವಲ್ಪ ದಪ್ಪಗೆ ವೃತ್ತಾಕಾರದಲ್ಲಿ ಲಟ್ಟಿಸಿಕೊಳ್ಳಿ.
* ಅದರ ನಡುವೆ ಖೋವಾ ಮಿಶ್ರಣದ ಉಂಡೆಯನ್ನು ಇಟ್ಟು, ಹಿಟ್ಟಿನ ಬದಿಗಳನ್ನು ನಡುವೆ ತಂದು ಮತ್ತೆ ಉಂಡೆಯಾಗಿ ಸುತ್ತಿಕೊಳ್ಳಿ.
* ಈಗ ಇದನ್ನು ಸ್ವಲ್ಪ ಚಪ್ಪಟೆಯಾಗಿ ಲಟ್ಟಿಸಿಕೊಳ್ಳಿ ಹಾಗೂ ಬಿಸಿ ಎಣ್ಣೆಯಲ್ಲಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಮಧ್ಯಮ ಉರಿಯಲ್ಲಿ ಹುರಿದುಕೊಳ್ಳಿ.
* ಎಲ್ಲಾ ಉಂಡೆಗಳನ್ನೂ ಇದೇ ರೀತಿ ಪುನರಾವರ್ತಿಸಿ.
* ಬಳಿಕ ಹುರಿದ ಕಚೋರಿಗಳನ್ನು ಸಕ್ಕರೆ ಪಾಕದಲ್ಲಿ ಮುಳುಗಿಸಿ ಸುಮಾರು 15 ನಿಮಿಷ ಪಾಕವನ್ನು ಹೀರಿಕೊಳ್ಳಲು ಹಾಗೇ ಬಿಡಿ.
* ನಂತರ ಅವುಗಳನ್ನು ಪಾಕದಿಂದ ತೆಗೆದು ತಟ್ಟೆಗಳಲ್ಲಿ ಜೋಡಿಸಿ, ಅದರ ಮೇಲೆ ಬಾದಾಮಿ ಹಾಗೂ ಪಿಸ್ತಾ ಚೂರುಗಳಿಂದ ಅಲಂಕರಿಸಿ.
* ಇದೀಗ ಸಿಹಿ ಸಿಹಿ ಖೋವಾ ಕಚೋರಿ ತಯಾರಾಗಿದ್ದು, ಅತಿಥಿಗಳಿಗೆ ಬಡಿಸಿ. ಇದನ್ನೂ ಓದಿ: ಸ್ವೀಟ್ ರಂಗೀಲಾ ಬರ್ಫಿ ಟೇಸ್ಟ್ ಮಾಡಿ ಥ್ರಿಲ್ ಆಗಿ