ಬಾಲಿವುಡ್ ನಟ, ಸಂಸದ ಸನ್ನಿ ಡಿಯೋಲ್ (Sunny Deol) ವಿರುದ್ಧ ನಿರ್ಮಾಪಕರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಗದರ್ 2 ಸಿನಿಮಾದ ಭಾರೀ ಯಶಸ್ಸಿನ ಬೆನ್ನಲ್ಲೇ ಈ ಆರೋಪ ಕೇಳಿ ಬಂದಿದೆ. ಗದರ್ 2 ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಭರ್ಜರಿ ಕಮಾಯಿ ಮಾಡಿದೆ. ಸನ್ನಿ ಡಿಯೋಲ್ ಗೆ ಮತ್ತೆ ಮರು ಜೀವ ನೀಡಿದೆ.
ನಿರ್ಮಾಪಕ ಸೌರವ್ ಗುಪ್ತಾ ಅವರು ಸನ್ನಿ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಸನ್ನಿ ಪಡೆದುಕೊಂಡಿದ್ದ ಹಣವನ್ನು ವಾಪಸ್ಸು ನೀಡಿಲ್ಲ. ಹಣ ಕೇಳಿದರೆ ಬೆದರಿಕೆ ಕೂಡ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಪತ್ರಿಕಾಗೋಷ‍್ಠಿಯಲ್ಲಿ ಮಾತನಾಡಿದ ಗುಪ್ತಾ, ನನ್ನಿಂದ ಹಣ ಪಡೆದು ವಂಚಿಸಿದ್ದಾರೆ. ದಾಖಲೆಗಳನ್ನು ತಿದ್ದಿದ್ದಾರೆ. ಹಣ ವಾಪಸ್ಸು ಕೇಳಿದರೆ ಬೆದರಿಕೆ ಹಾಕಿದ್ದಾರೆ ಎಂದಿದ್ದಾರೆ.
ಸೌರವ್ ಜೊತೆ ಸನ್ನಿ ಸಿನಿಮಾವೊಂದನ್ನು ಮಾಡಬೇಕಿತ್ತು. ಅದಕ್ಕಾಗಿ ಹಣ ಕೂಡ ಸನ್ನಿ ಪಡೆದುಕೊಂಡಿದ್ದರು. ಆದರೆ, ಆ ಸಿನಿಮಾ ಮಾಡಲಿಲ್ಲ. ಕೊಡಬೇಕಾದ ಹಣವನ್ನೂ ಈವರೆಗೂ ಹಿಂದಿರುಗಿಸಿಲ್ಲ. 2014ರಲ್ಲೇ ಈ ಘಟನೆ ನೆಡಿದೆ ಎಂದು ಸೌರವ್ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.