– ನಾನು ಎರಡು ಬಾರಿ ಡ್ರಗ್ಸ್ ಸೇವಿಸಿದ್ದೇನೆ
– ಅನುಶ್ರೀ ಕಷ್ಟಪಟ್ಟು ಬಂದಿದ್ದು, ಗೌರವಿಸುತ್ತೇನೆ
ಮಂಗಳೂರು: ನಿರೂಪಕಿ ಅನುಶ್ರೀ ವಿರುದ್ಧ ನಾನು ಹೇಳಿಕೆ ಕೊಟ್ಟಿದ್ದೇನೆ ಎಂಬುದು ಸುಳ್ಳು. ಅವರ ವಿರುದ್ಧ ನಾನು ಈ ರೀತಿಯ ಹೇಳಿಕೆ ನೀಡಿಲ್ಲ. ಇದು ಸುಳ್ಳು ಆರೋಪ ಎಂದು ಡ್ರಗ್ಸ್ ಆರೋಪ ಎದುರಿಸುತ್ತಿರುವ ಕಿಶೋರ್ ಅಮನ್ ಶೆಟ್ಟಿ ಹೇಳಿಕೆ ನೀಡಿದ್ದಾರೆ.
Advertisement
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕಿಶೋರ್ ಅಮನ್ ಶೆಟ್ಟಿ, ನನಗೂ ಅನುಶ್ರೀಗೂ ಯಾವುದೇ ರೀತಿಯ ಸಂಪರ್ಕ ಇಲ್ಲ. ಕುಣಿಯೋಣ ಬಾರಾ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಪರಿಚಯ ಆಗಿದೆ. 2009ರಲ್ಲಿ ಡ್ಯಾನ್ಸ್ ಗೆ ಕೊರಿಯೋಗ್ರಾಫ್ ಮಾಡಿದ್ದೇ ಅದೇ ಮೊದಲು ಮತ್ತು ಕೊನೆ. ಬಳಿಕ 4-5 ವರ್ಷಗಳ ಹಿಂದೆ ಮಂಗಳೂರಲ್ಲಿ ನಡೆದ ಡ್ಯಾನ್ಸ್ ಕ್ಲಾಸ್ ಕಾರ್ಯಕ್ರಮದಲ್ಲಿ ನಾವು ಭೇಟಿಯಾಗಿದ್ದೆವು. ಬಳಿಕ ನಾವಿಬ್ಬರು ಎಲ್ಲೂ ಭೇಟಿಯಾಗಿಲ್ಲ, ಫೋನ್ ಸಂಪರ್ಕವೂ ಇಲ್ಲ. ಅವರ ಫೋನ್ ನಂಬರ್ ಕೂಡ ನನ್ನ ಬಳಿ ಇಲ್ಲ. ಇದೆಲ್ಲವೂ ಸುಳ್ಳು ಆರೋಪ ಎಂದರು. ಇದನ್ನೂ ಓದಿ: ಡ್ರಗ್ಸ್ ಸೇವಿಸಿ ಡ್ಯಾನ್ಸ್ ಮಾಡಿದ್ರೆ ಖುಷಿ ಆಗುತ್ತೆ ಅಂತಿದ್ರು ಅನುಶ್ರೀ: ಕಿಶೋರ್ ಅಮನ್ ಶೆಟ್ಟಿ
Advertisement
Advertisement
ಖಾಸಗಿ ವಾಹಿನಿಯ ಶೋ ಒಂದರ ಫೈನಲ್‍ನಲ್ಲಿ ಕೊರಿಯೋಗ್ರಾಫ್ ಮಾಡಿದ್ದೆ ನಾನು. ಆ ಬಳಿಕ ಯಾವುದೇ ಸಂಪರ್ಕವಿಲ್ಲ. ಎಲ್ಲವೂ ಸುಳ್ಳು ಸುದ್ದಿಗಳು, ಅನುಶ್ರೀ ವಿರುದ್ಧ ನಾನು ಹೇಳಿಕೆ ನೀಡಿದ್ದೇನೆ ಎಂಬುದು ಸುಳ್ಳು. ಪೆಡ್ಲಿಂಗ್ ಮಾಡಲು ಹೋಗಿಲ್ಲ. ಯಾಕಂದ್ರೆ ನಮ್ಮ ವೃತ್ತಿಯೇ ಬೇರೆ. ಜಾರ್ಜ್ ಶೀಟ್‍ನಲ್ಲಿ ಸುಳ್ಳು ಹೇಳಿಕೆ ಹಾಕಲಾಗಿದೆ. ಪಾರ್ಟಿ ಬಿಡಿ ನಾವು ರಿಹರ್ಸಲ್ ಮಾಡಿ ಬರೋದೇ ಲೇಟ್ ನೈಟ್ ಅಂತ್ರದಲ್ಲಿ ಇದೆಲ್ಲ ಮಾಡಲು ಸಾಧ್ಯವೇ ಎಂದು ಕಿಶೋರ್ ಹೇಳಿದರು. ಇದನ್ನೂ ಓದಿ: ಬರೀ ಯೂರಿನ್, ರಕ್ತ ಪರೀಕ್ಷೆ ಮಾಡಿದ್ರೆ ಸಾಲದು -ಹೇರ್ ಫೋಲಿಕಲ್ ಟೆಸ್ಟ್‌ಗೆ ಇಂದ್ರಜಿತ್ ಆಗ್ರಹ
Advertisement
ಅನುಶ್ರೀ ಬಗ್ಗೆ ಇಂತಹ ಹೇಳಿಕೆಗಳನ್ನು ನಾನು ಕೊಡಲೇ ಇಲ್ಲ. ಅನುಶ್ರೀ ತುಂಬಾ ಕಷ್ಟಪಟ್ಟು ಮೇಲೆ ಬಂದಿದ್ದಾರೆ. ಅವರಿಗೆ ತುಂಬಾ ಗೌರವ ಕೊಡುತ್ತೇವೆ. ನಾನು ಅವರಿಗೆ ಬರೀ ಕೊರಿಯೋಗ್ರಾಫ್ ಮಾತ್ರ ಮಾಡಿದ್ದೇನೆ ಇದು ಕಿಶೋರ್ ಹೇಳುತ್ತಿರುವ ಪಕ್ಕಾ ಮಾಹಿತಿ ಎಂದರು. ಇದನ್ನೂ ಓದಿ: ಡ್ರಗ್ಸ್ ಲಿಂಕ್ ಪ್ರಕರಣ – ಚಾರ್ಜ್‍ಶೀಟ್‍ನಲ್ಲಿ ಆ್ಯಂಕರ್ ಅನುಶ್ರೀ ಹೆಸರು
ನನ್ನ ಲೈಫ್ ಹಾಳು ಮಾಡುತ್ತಿದ್ದಾರೆ. ಯಾರು ಈ ರೀತಿ ಮಾಡುತ್ತಿದ್ದಾರೆ ಗೊತ್ತಿಲ್ಲ. ಒಳ್ಳೆಯ ಕೊರಿಯೋಗ್ರಾಫರ್ ಆಗಬೇಕೆಂಬ ಕನಸು ನನಗಿದೆ ಅದನ್ನು ಈಡೇರಿಸವಲ್ಲಿ ನಿರತನಾಗಿದ್ದೇನೆ. ನಾನು ಯಾರಿಗೂ ತೊಂದರೆ ಕೊಟ್ಟಿಲ್ಲ. ಹುಟ್ಟಿದಾಗಿನಿಂದ ತಪ್ಪು ಮಾಡಿಲ್ಲ. ಯಾರು ಈ ರೀತಿ ಮಾಡುತ್ತಾರೋ ಅವೆರಿಗೆ ಒಳ್ಳೆಯದಾಗಲಿ ಎಂದು ಬೆಸರ ವ್ಯಕ್ತಪಡಿಸಿದ ಅವರು, ಪಾರ್ಟಿಗೆ ಹೋಗುತ್ತಿದ್ದೇನೆ, ಆದರೆ ಡ್ರಗ್ಸ್ ಪಾರ್ಟಿಗಳಿಗೆಲ್ಲ ಹೋಗಿಲ್ಲ. ಡ್ರಗ್ಸ್ ಸೇವನೆ ಎರಡು ಬಾರಿ ಮಾಡಿದ್ದೇನೆ. ಆದರೆ ಪೆಡ್ಲಿಂಗ್- ಗಿಡ್ಲಿಂಗ್ ಎಲ್ಲ ಮಾಡಿಲ್ಲ ಎಂದರು. ಇದನ್ನೂ ಓದಿ: ಡ್ರಗ್ಸ್ ಕೇಸ್- ಅನುಶ್ರೀ ಮೊಬೈಲ್‍ನಿಂದ ಮೂವರು ಪ್ರಭಾವಿ ವ್ಯಕ್ತಿಗಳಿಗೆ ಕರೆ