ದಾವಣಗೆರೆ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಿರುವ ಬಗ್ಗೆ ಗೊತ್ತಾಗಿದೆ. ತಪ್ಪು ಮಾಡಿದವರ ಮೇಲೆ ಕಠಿಣ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ಪಟ್ಟಣದಲ್ಲಿ ನಡೆದ ಮಾಜಿ ಸಚಿವ ಪಿಟಿ ಪರಮೇಶ್ವರ ನಾಯ್ಕ್ ಪುತ್ರನ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ಸಿಎಂ ಸಿದ್ದರಾಮಯ್ಯ ಅವರು, ಪರಪ್ಪನ ಅಗ್ರಹಾರ ಜೈಲಿನಲ್ಲಿ ಐಸಿಸ್ ಉಗ್ರ ಜುಹಾದ್ ಹಮೀದ್ ಶಕೀಲ್ ಮನ್ನಾ ಹಾಗೂ ವಿಕೃತ ಕಾಮಿ ಉಮೇಶ್ ರೆಡ್ಡಿ ಸೇರಿ ಹಲವರಿಗೆ ರಾಜಾತಿಥ್ಯ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಐಸಿಸ್‌ಗೆ ಮುಸ್ಲಿಂ ಯುವಕರನ್ನ ನೇಮಿಸುತ್ತಿದ್ದ ಉಗ್ರನಿಗೆ ಬೆಂಗಳೂರು ಸೆಂಟ್ರಲ್ ಜೈಲಲ್ಲಿ ರಾಜಾತಿಥ್ಯ!

ತಪ್ಪು ಮಾಡಿದವರ ಮೇಲೆ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಸಂಬಂಧ ಪಟ್ಟ ಅಧಿಕಾರಿ ರಜೆಯಲ್ಲಿದ್ದಾರೆ. ಹೋಮ್ ಮಿನಿಸ್ಟರ್ ಅವರು ನಾಳೆ ಸಭೆ ಕರೆದಿದ್ದಾರೆ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ. ಆ ರೀತಿ ಯಾರು ಮಾಡಿದ್ದಾರೋ ಅವರಿಗೆ, ಅವಕಾಶ ಮಾಡಿಕೊಟ್ಟವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ವಿಕೃತ ಕಾಮಿ ಉಮೇಶ್ ರೆಡ್ಡಿ, ರನ್ಯಾ ರಾವ್ ಪ್ರಿಯಕರ ತರುಣ್ ಜೈಲಲ್ಲಿ ಬಿಂದಾಸ್ ಲೈಫ್!
ಒಂದು ದಿನದ ಹಿಂದೆಯಷ್ಟೇ ಐಸಿಸ್ ಉಗ್ರ ಜುಹಾದ್ ಹಮೀದ್ ಶಕೀಲ್ ಮನ್ನಾ, ವಿಕೃತ ಕಾಮಿ ಉಮೇಶ್ ರೆಡ್ಡಿ ಹಾಗೂ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಜೈಲು ಸೇರಿರುವ ನಟಿ ರನ್ಯಾ ರಾವ್ ಪ್ರಿಯಕರ ತರುಣ್ ರಾಜ್ ಜೈಲಿನಲ್ಲಿ ಬಿಂದಾಸ್ ಲೈಫ್ ನಡೆಸುತ್ತಿರುವ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗಿತ್ತು. ಫೋನ್‌ನಲ್ಲಿ ಸಂಭಾಷಣೆ ನಡೆಸುತ್ತಾ, ಎಲ್ಇಡಿ ಟಿವಿ ನೋಡಿಕೊಂಡು ಮಜಾ ಮಾಡುತ್ತಿದ್ದ ದೃಶ್ಯ ವೈರಲ್ ಆಗಿತ್ತು.
ಯತ್ನಾಳ್ ವಿರುದ್ಧ ಕ್ರಮದ ಎಚ್ಚರಿಕೆ
ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ವಿಚಾರವಾಗಿ ಮಾತನಾಡಿ, ಚುನಾವಣೆ ಮಾಡ್ತೇವೆ. ಅದು ಹೈಕೋರ್ಟ್‌ನಲ್ಲಿದೆ. ಹೈಕೋರ್ಟ್ ಯಾವಾಗ ಹೇಳುತ್ತೋ ಆವಾಗ ಚುನಾವಣೆ ಮಾಡ್ತೇವೆ. ಇನ್ನೂ ಸಕ್ಕರೆ ಕಾರ್ಖಾನೆಯವರು ನಿಗದಿ ಮಾಡಿದ ಹಣದಷ್ಟು ಕೊಡ್ತಾರೆ ಅಂದುಕೊಂಡಿದ್ದೇನೆ. ಅವರ ಮುಂದೆಯೇ ಸಭೆ ಮಾಡಿದ್ದೇವೆ. ಇದಕ್ಕೆ ಯತ್ನಾಳ್ ವಿರೋಧ ಮಾಡಿದ್ರೆ ಅವರ ಮೇಲೆ ಹಾಗೂ ಅವರ ಫ್ಯಾಕ್ಟರಿ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
11 ಲಕ್ಷ ಮೆಕ್ಕೆಜೋಳ ಹಾನಿಗೆ ಪರಿಹಾರ
ಮೆಕ್ಕೆಜೋಳ ಬೆಂಬಲ ಬೆಲೆ ವಿಚಾರವಾಗಿ ಮಾತನಾಡಿ, ಮೆಕ್ಕೆಜೋಳಕ್ಕೆ ಬೆಂಬಲ ಬೆಲೆಯನ್ನು ನಿಗದಿ ಮಾಡೋದು ಕೇಂದ್ರ ಸರ್ಕಾರ, 11 ಲಕ್ಷ ಹೆಕ್ಟೆರ್ ಮೆಕ್ಕೆಜೋಳ ಹಾನಿಯಾಗಿದೆ. ಅವರಿಗೇಲ್ಲ ಪರಿಹಾರ ಕೊಡುತ್ತೇವೆ ಎಂದರು.


