ಬೆಂಗಳೂರು: ಸಿದ್ದರಾಮಯ್ಯನವರೇ ಪ್ರತಿಮೆ ಭಗ್ನ ಮಾಡುವವರೂ ನೀವೇ, ಗೌರವ ಸಲ್ಲಿಸುವವರೂ ನೀವೇ. ಇದೆಲ್ಲ ಹೇಗೆ ಸಾಧ್ಯ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಟ್ವೀಟ್ ಮಾಡುವ ಮೂಲಕ ಪ್ರಶ್ನಿಸಿದೆ.
ಬೆಳಗಾವಿಯ ಅನಗೊಳದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಯು ಎಂ.ಇ.ಎಸ್ ಪುಂಡರ ದಾಳಿಯಿಂದ ಹಾನಿಗೊಳಗಾದ ನಂತರ ಅದೇ ಜಾಗದಲ್ಲಿ ನೂತನ ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ. ಇಂದು ಪ್ರತಿಮೆ ಸ್ಥಳಕ್ಕೆ ಭೇಟಿನೀಡಿ, ನಿಸ್ವಾರ್ಥ ಹೋರಾಟಗಾರನಿಗೆ ಗೌರವ ಸಲ್ಲಿಸಿದೆ. pic.twitter.com/fkCrMUPLvR
— Siddaramaiah (@siddaramaiah) December 20, 2021
Advertisement
ಕುಂದಾನಗರಿ ಬೆಳಗಾವಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮುಖದ ಭಾಗ, ಮೂಗು ಮತ್ತು ಕತ್ತಿಯನ್ನು ಕಿಡಿಗೇಡಿಗಳು ಶನಿವಾರದ ಮುಂಜಾವಿನಲ್ಲಿ ವಿರೂಪಗೊಳಿಸಿದ್ದರು. ರಾಯಣ್ಣ ಹಿಡಿದಿದ್ದ ಕಠಾರಿಯನ್ನು ರಸ್ತೆಯ ಬದಿಗೆ ಎಸೆದಿದ್ದರು. ಜೊತೆಗೆ ಬಸ್ ಹಾಗೂ ಮನೆಗಳ ಮೇಲೆ ಕಲ್ಲುತೂರಾಟ ನಡೆಸಿ, ಹೋಟೆಲ್‍ವೊಂದರ ಮುಂದೆ ಇದ್ದ ಕನ್ನಡ ನಾಮಫಲಕವನ್ನು ಕೆಳಕ್ಕುರುಳಿಸಿದ್ದರು. ಇದರಿಂದಾಗಿ ಕನ್ನಡ ಪರ ಸಂಘಟನೆಗಳು ರೊಚ್ಚಿಗೆದ್ದಿದ್ದು, ಬೆಳಗಾವಿಯಲ್ಲಿ ಎಂಇಎಸ್ ಅನ್ನು ನಿಷೇಧಿಸಬೇಕೆಂದು ಪ್ರತಿಭಟನೆ ನಡೆಸುತ್ತಿದೆ. ಇನ್ನೂ ಕನ್ನಡ ಪರ ಕಾರ್ಯಕರ್ತರನ್ನು ನಿಭಾಯಿಸಲು ಪೊಲೀಸರು ಪರದಾಡುತ್ತಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮರುಪ್ರತಿಷ್ಠಾಪನೆ
Advertisement
ಸಿದ್ದರಾಮಯ್ಯನವರೇ,
ಮಹಾರಾಷ್ಟ್ರದಲ್ಲಿರುವ ಆಡಳಿತ ಪಕ್ಷ ಕನ್ನಡ ಬಾವುಟ ಸುಡುತ್ತದೆ, ಕನ್ನಡಿಗರ ವಾಹನ ಧ್ವಂಸ ಮಾಡುತ್ತದೆ.
ಕರ್ನಾಟಕದ ವಿರೋಧ ಪಕ್ಷ ಶಿವಾಜಿ ಪ್ರತಿಮೆಗೆ ಮಸಿ ಬಳಿಯುತ್ತಿದೆ.
ಕ್ರಿಯೆ ಮತ್ತು ಪ್ರತಿಕ್ರಿಯೆ ಎರಡೂ ಕೆಪಿಸಿಸಿ ಕಚೇರಿಯಿಂದ ಹೊರಟ ಆಜ್ಞೆ. #ನಾಡದ್ರೋಹಿಕಾಂಗ್ರೆಸ್ pic.twitter.com/hliQtboaAn
— BJP Karnataka (@BJP4Karnataka) December 20, 2021
Advertisement
ಸದ್ಯ ಈ ಘಟನೆಗೆ ಕಾರಣ ಕಾಂಗ್ರೆಸ್ ಎಂದು ಬಿಜೆಪಿ ಟ್ವೀಟ್ ಮಾಡುವ ಮೂಲಕ ನೇರವಾಗಿ ದಾಳಿ ನಡೆಸಿದೆ. ಮಹಾರಾಷ್ಟ್ರದಲ್ಲಿ ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದ್ದು ಕಾಂಗ್ರೆಸ್ ಕಾರ್ಯಕರ್ತರು. ಕನ್ನಡಿಗರ ವಾಹನ ಪುಡಿಮಾಡಿದ್ದು ಕಾಂಗ್ರೆಸ್ ಕಾರ್ಯಕರ್ತರು. ಶಿವಾಜಿ ಪ್ರತಿಮೆಗೆ ಮಸಿ ಬಳಿದಿದ್ದು ಕಾಂಗ್ರೆಸ್ ಕಾರ್ಯಕರ್ತರು. ಮೂರೂ ಘಟನೆಗಳ ಸೂತ್ರದಾರರು ಈಗ ಘಟನೆಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ. ಸಿದ್ದರಾಮಯ್ಯನವರೇ ಪ್ರತಿಮೆ ಭಗ್ನ ಮಾಡುವವರೂ ನೀವೇ, ಗೌರವ ಸಲ್ಲಿಸುವವರೂ ನೀವೇ. ಇದೆಲ್ಲ ಹೇಗೆ ಸಾಧ್ಯ ಎಂದು ಪ್ರಶ್ನಿಸುವ ಮೂಲಕ ಕಿಡಿಕಾರಿದೆ.
Advertisement
ಸಿದ್ದರಾಮಯ್ಯನವರೇ,
ಪ್ರತಿಮೆ ಭಗ್ನ ಮಾಡುವವರೂ ನೀವೇ, ಗೌರವ ಸಲ್ಲಿಸುವವರೂ ನೀವೇ.
ಇದೆಲ್ಲ ಹೇಗೆ ಸಾಧ್ಯ?#ನಾಡದ್ರೋಹಿಕಾಂಗ್ರೆಸ್ pic.twitter.com/RT9klCVyGX
— BJP Karnataka (@BJP4Karnataka) December 20, 2021
ಮಹಾರಾಷ್ಟ್ರದಲ್ಲಿರುವ ಆಡಳಿತ ಪಕ್ಷ ಕನ್ನಡ ಬಾವುಟ ಸುಡುತ್ತದೆ, ಕನ್ನಡಿಗರ ವಾಹನ ಧ್ವಂಸ ಮಾಡುತ್ತದೆ. ಕರ್ನಾಟಕದ ವಿರೋಧ ಪಕ್ಷ ಶಿವಾಜಿ ಪ್ರತಿಮೆಗೆ ಮಸಿ ಬಳಿಯುತ್ತಿದೆ. ಕ್ರಿಯೆ ಮತ್ತು ಪ್ರತಿಕ್ರಿಯೆ ಎರಡೂ ಕೆಪಿಸಿಸಿ ಕಚೇರಿಯಿಂದ ಹೊರಟ ಆಜ್ಞೆ ಎಂದು ಆರೋಪಿಸಿದೆ. ಇದನ್ನೂ ಓದಿ: ಶಾಂತಿ ಕದಡುವುದೇ ನಾಡದ್ರೋಹಿ ಕಾಂಗ್ರೆಸ್ ಉದ್ದೇಶ – ಕೈ ವಿರುದ್ಧ ಬಿಜೆಪಿ ಟ್ವೀಟ್ ದಾಳಿ
ಸಿದ್ದರಾಮಯ್ಯನವರೇ,
ಮಹಾರಾಷ್ಟ್ರದಲ್ಲಿರುವ ಆಡಳಿತ ಪಕ್ಷ ಕನ್ನಡ ಬಾವುಟ ಸುಡುತ್ತದೆ, ಕನ್ನಡಿಗರ ವಾಹನ ಧ್ವಂಸ ಮಾಡುತ್ತದೆ.
ಕರ್ನಾಟಕದ ವಿರೋಧ ಪಕ್ಷ ಶಿವಾಜಿ ಪ್ರತಿಮೆಗೆ ಮಸಿ ಬಳಿಯುತ್ತಿದೆ.
ಕ್ರಿಯೆ ಮತ್ತು ಪ್ರತಿಕ್ರಿಯೆ ಎರಡೂ ಕೆಪಿಸಿಸಿ ಕಚೇರಿಯಿಂದ ಹೊರಟ ಆಜ್ಞೆ. #ನಾಡದ್ರೋಹಿಕಾಂಗ್ರೆಸ್ pic.twitter.com/hliQtboaAn
— BJP Karnataka (@BJP4Karnataka) December 20, 2021