ಚಿಕ್ಕಬಳ್ಳಾಪುರ: ತಾಲೂಕಿನ ಅಗಲಗುರ್ಕಿ ಬಳಿ ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ (National Highway) ಟಿಪ್ಪರ್ ಲಾರಿಯೊಂದು ಡಿವೈಡರ್ ಹಾರಿ ಎದುರು ಪಥದಲ್ಲಿ ಸಾಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಇದ್ರಿಂದ ಕಾರು ಹಾಗೂ ಬೈಕ್ ಸಹ ಅಪಘಾತಕ್ಕೀಡಾಗಿ ಸರಣಿ ಅಪಘಾತ ಸಂಭವಿಸಿದೆ.
Advertisement
ಅಂದಹಾಗೆ ಮಹಾಶಿವರಾತ್ರಿ ಹಬ್ಬದ ಜಾಗರಣೆ ಅಂಗವಾಗಿ ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ಆವಲಗುರ್ಕಿ ಬಳಿಯ ಆದಿಯೋಗಿ ಈಶಾ ಫೌಂಡೇಶನ್‌ಗೆ (Isha Foundation) ಭಕ್ತಸಾಗರವೇ ಹರಿದುಬಂದಿದೆ. ಇದ್ರಿಂದ ಮೊದಲೇ ಎಲ್ಲಾ ರಸ್ತೆಗಳು ಹೈವೇ ಸಹ ಸಂಪೂರ್ಣ ಟ್ರಾಫಿಕ್ ಮಯವಾಗಿದೆ. ಅದರಲ್ಲಿ ಅಪಘಾತ ಬೇರೆ ಆಗಿ ಹೈವೇ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಇದನ್ನೂ ಓದಿ: ಹೇಯ್ಲಿ ಮ್ಯಾಥ್ಯೂಸ್, ಬ್ರಂಟ್ ಫಿಫ್ಟಿ ಆಟ – ಯುಪಿ ವಿರುದ್ಧ ಮುಂಬೈಗೆ 8 ವಿಕೆಟ್‌ಗಳ ಜಯ
Advertisement
Advertisement
ಕೊನೆಗೆ ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಗೆ ವಾಹನಗಳ ಡೈವರ್ಟ್ ಮಾಡಲಾಯಿತು. ಆದ್ರೂ ವಾಹನ ದಟ್ಟಣೆ ಹೆಚ್ಚಾಗಿ ಇಶಾದಿಂದ ಬೆಂಗಳೂರು ಕಡೆ ತೆರಳುವ ಪ್ರಯಾಣಿಕರ ಪಾಡು ಹೇಳತೀರದ್ದಾಗಿತ್ತು. ಇದನ್ನೂ ಓದಿ: ಅಫ್ಘಾನಿಸ್ತಾನಕ್ಕೆ ರೋಚಕ 8 ರನ್‌ಗಳ ಜಯ – ಚಾಂಪಿಯನ್ಸ್ ಟ್ರೋಫಿಯಿಂದ ಇಂಗ್ಲೆಂಡ್ ಔಟ್
Advertisement
ಇನ್ನೂ ಸಂಚಾರ ನಿಯಂತ್ರಣಕ್ಕೆ ಟ್ರಾಫಿಕ್ ಪೊಲೀಸರು ಹೈರಾಣಾಗಿ ಹೋಗುವಂತೆ ಮಾಡಿದೆ. ಅದೃಷ್ಟವಶಾತ್ ಅಪಘಾತದಲ್ಲಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿಕ್ಕಬಳ್ಳಾಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಟ್ರಾಫಿಕ್ ಪೊಲೀಸರು ಕ್ರೇನ್ ತರಿಸಿ ಲಾರಿಗಳನ್ನ ಸರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.