– ಕುಡಿದು ವಾಹನ ಚಾಲನೆ ಶಂಕೆ
ಬೆಂಗಳೂರು: ನಗರದ (Bengaluru) ಮೈಸೂರು ರಸ್ತೆಯಲ್ಲಿ ಕ್ಯಾಂಟರ್ ಒಂದು ನಿಯಂತ್ರಣ ತಪ್ಪಿ ಐರಾವತ ಬಸ್, ಕಾರು, ಆಟೋ ಲಾರಿ ಹಾಗೂ ಬೈಕ್‍ಗೆ (Accident) ಡಿಕ್ಕಿಯಾಗಿದೆ.
ಸ್ಯಾಟಲೈಟ್ ಬಸ್ ನಿಲ್ದಾಣ ಮುಂಭಾಗ ಬೆಳಗ್ಗೆ 5:00 ಗಂಟೆಗೆ ಈ ಅಪಘಾತ ಸಂಭವಿಸಿದೆ. ಕ್ಯಾಂಟರ್ ಮೈಸೂರು ಕಡೆಗೆ ಹೋಗುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ನಿಂತಿದ್ದ ಕಾರು, ಆಟೋ, ಬೈಕ್‍ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಆಟೋ ಅಪ್ಪಚ್ಚಿಯಾಗಿದೆ ಅಷ್ಟೇ ಅಲ್ಲದೇ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಹೊರಬರುತ್ತಿದ್ದ ಐರಾವತ ಬಸ್‍ಗೂ ಸಹ ಕ್ಯಾಂಟರ್ ಡಿಕ್ಕಿಹೊಡೆದಿದೆ. ಬಳಿಕ ಲಾರಿಯೊಂದಕ್ಕೆ ಡಿಕ್ಕಿಯಾಗಿ ಕ್ಯಾಂಟರ್ ನಿಂತಿದೆ.
ಅಪಘಾತದಲ್ಲಿ ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಆಗಿಲ್ಲ. ಡಿಕ್ಕಿಯ ರಭಸಕ್ಕೆ ಕ್ಯಾಂಟರ್‍ನ ಮುಂಭಾಗ ಅಪ್ಪಚ್ಚಿಯಾಗಿದೆ. ಅಪಘಾತದಲ್ಲಿ ಗಾಯಗೊಂಡಿದ್ದ ಕ್ಯಾಂಟರ್ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕ್ಯಾಂಟರ್ ಚಾಲಕ ಕುಡಿದು ವಾಹನ ಚಲಾಯಿಸಿರುವ (Drunk And Drive) ಶಂಕೆ ವ್ಯಕ್ತವಾಗಿದೆ.