ಬೆಂಗಳೂರು: ಸೀರಿಯಲ್ ಮೂಲಕ ಮನೆಮಾತಾಗಿರುವ ನಟಿ ರಶ್ಮಿ ಪ್ರಭಾಕರ್ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕಳೆದ ಎರಡು ದಿನಗಳಿಂದ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಫೋಟೋಗಳನ್ನು ಅಪ್‍ಲೋಡ್ ಮಾಡುತ್ತ ಕುತೂಹಲ ಮೂಡಿಸಿದ್ದರು. ಅವರನ್ನು ವರಿಸುತ್ತಿರುವ ಹುಡುಗ ಯಾರು ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ.
ನಿಖಿಲ್ ಜೊತೆ ರಶ್ಮಿ ಪ್ರಭಾಕರ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕೆಲವು ಫೋಟೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕೆಲವು ಭರವಸೆಗಳು ಎಂದಿಗೂ ಮುರಿಯುವುದಿಲ್ಲ. ನನ್ನ ಜೀವನದ ರಾಜಕುಮಾರ ಎಂದು ಬರೆದುಕೊಂಡು ನಿಶ್ಚಿತಾರ್ಥದ ಫೋಟೋವನ್ನು ಶೇರ್ ಮಾಡಿದ್ದಾರೆ. ಅಭಿಮಾನಿಗಳು ಶುಭ ಕೋರಿ ಕಾಮೆಂಟ್ ಮಾಡುತ್ತಿದ್ದಾರೆ.
View this post on Instagram
ರಶ್ಮಿ ಹಲವು ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರರಂಗಕ್ಕೆ ಕಾಲಿಟ್ಟಾಗಿನಿಂದ ರಶ್ಮಿ ಒಂದಲ್ಲ ಒಂದು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಚಿನ್ನು ಪಾತ್ರವನ್ನು ಅನೇಕರು ಇನ್ನೂ ಮರೆತಿಲ್ಲ. ನಟನೇ ಮೂಲಕವಾಗಿ ಸುದ್ದಿಯಾಗುತ್ತಿದ್ದ ರಶ್ಮಿ ಅವರು ಇದೀಗ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
ನಿಖಿಲ್ ಯಾರು ಏನು ಮಾಡುತ್ತಿದ್ದಾರೆ? ರಶ್ಮಿ ಹಾಗೂ ನಿಖಿಲ್ ಅವರದ್ದು ಲವ್ ಮ್ಯಾರೇಜ್? ಅರೇಂಜ್ ಮ್ಯಾರೇಜ್ ಎಂಬುದರ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.