– ಮೂವರು ಮಕ್ಕಳಿಗೆ ಗಾಯ
ಚಿಕ್ಕಬಳ್ಳಾಪುರ: ದಂಪತಿ ಹಾಗೂ ಅವರ ಮೂವರು ಮಕ್ಕಳು ಪ್ರತ್ಯೇಕವಾಗಿ ತೆರಳುತ್ತಿದ್ದ ಸ್ಕೂಟಿ ಹಾಗೂ ಬೈಕ್‍ಗೆ (Bike) ಟೆಂಪೋ (Tempo) ಡಿಕ್ಕಿಯಾಗಿ (Accident) ಗಂಡ ಹಾಗೂ ಹೆಂಡತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಂತಾಮಣಿ ತಾಲೂಕಿನ ಕಾಚನಹಳ್ಳಿ ಬಳಿ ನಡೆದಿದೆ.
ಕುರಬೂರು ಗ್ರಾಮದ ಶ್ರೀರಾಮ್ (40) ಹಾಗೂ ಶ್ಯಾಮಲ (35) ಮೃತಪಟ್ಟ ದುರ್ದೈವಿಗಳು ಎಂದು ತಿಳಿದು ಬಂದಿದೆ. ಕೋಲಾರದ ಕಡೆಯಿಂದ ಚಿಂತಾಮಣಿ (Chintamani) ಕಡೆಗೆ ಸ್ಕೂಟಿ ಹಾಗೂ ಬೈಕ್ ಮೂಲಕ ಮಕ್ಕಳಾದ ಮೋಕ್ಷ ಹಾಗೂ ತುಷಾರ್ ಸೇರಿದಂತೆ ಅಣ್ಣನ ಮಗ ತೇಜಸ್‍ನನ್ನು ಕೂರಿಸಿಕೊಂಡು ತೆರಳುತ್ತಿದ್ದರು. ಈ ವೇಳೆ ಚಿಂತಾಮಣಿ ಕಡೆಯಿಂದ ಕೋಲಾರದ ಕಡೆಗೆ ತೆರಳುತ್ತಿದ್ದ ಟೆಂಪೋ ಡಿಕ್ಕಿಯಾಗಿದೆ. ಪರಿಣಾಮ ಘಟನೆಯಲ್ಲಿ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಲ್ಲದೇ ಮೂವರು ಮಕ್ಕಳು ಗಾಯಗೊಂಡಿದ್ದು ಚಿಂತಾಮಣಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಜೈನಮುನಿಗಳ ಹಂತಕರ ವಿರುದ್ಧ ಕಠಿಣ ಕ್ರಮ: ಡಿ.ಕೆ ಶಿವಕುಮಾರ್
ಬಳಿಕ ಟೆಂಪೋ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಇದರಿಂದ ಟೆಂಪೋಗೆ ಬೆಂಕಿ ಹೊತ್ತಿಕೊಂಡು ಉರಿದಿದ್ದು, ಆಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಠಾಣೆ ಸಿಪಿಐ ಸುಧಾಕರ್ ರೆಡ್ಡಿ, ಎಎಸ್ಪಿ ಕುಶಾಲ್ ಚೋಕ್ಸಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಹಿಂದೂ ಎನ್ನುವುದು ಒಂದು ಧರ್ಮವೇ ಅಲ್ಲ: ತೋಂಟದಾರ್ಯ ಸಿದ್ದರಾಮ ಸ್ವಾಮೀಜಿ
Web Stories