ರಾಷ್ಟ್ರೀಯ ಹೆದ್ದಾರಿಯಲ್ಲಿ 5 ಖಾಸಗಿ ಬಸ್‌ಗಳ ನಡುವೆ ಸರಣಿ ಅಪಘಾತ

Public TV
1 Min Read
NELAMANGALA ACCIDENT

ಬೆಂಗಳೂರು/ನೆಲಮಂಗಲ: ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ, ನೆಲಮಂಗಲ (Nelamangala) ತಾಲೂಕಿನ ತೊಣಚಿನಗುಪ್ಪೆ ಬಳಿ ಸರಣಿ ಅಪಘಾತ ನಡೆದಿದ್ದು, ಭಾರೀ ಟ್ರಾಫಿಕ್‌ ಜಾಮ್‌ (Taffic Jam) ಉಂಟಾದ ಘಟನೆ ನಡೆದಿದೆ.

5 ಖಾಸಗಿ ಬಸ್ ಗಳ ನಡುವೆ ಈ ಸರಣಿ ಅಪಘಾತ ನಡೆದಿದೆ. ಘಟನೆಯಲ್ಲಿ 25 ಮಂದಿಗೆ ಗಾಯಗಳಾಗಿದ್ದು, ಗಾಯಗೊಂಡವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ನೆಲಮಂಗಲ ಸಂಚಾರಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಬಸ್‌ಗಳನ್ನು ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿದ್ದಾರೆ. ಅಲ್ಲದೆ ಸ್ಥಳೀಯರ ನೆರವಿನೊಂದಿಗೆ ಬಸ್ ಬಸ್ ಗಳ ಮಧ್ಯೆ ಸಿಲುಕಿರುವ ಜನರು ಜನರನ್ನ ಹೊರಗೆ ತೆಗೆಯಲು ಹರಸಾಹಸ ಪಡುತ್ತಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿರುವ ಇಸ್ರೇಲ್ ರಾಯಭಾರಿ ಕಚೇರಿಗೆ ಬಾಂಬ್ ಬೆದರಿಕೆ ಕರೆ

BUS ACCIDENT 1

ಸಂಪೂರ್ಣವಾಗಿ ಆವರಿಸಿರುವ ಮಂಜಿನಿಂದ ರಸ್ತೆ ಕಾಣದೆ ಅಪಘಾತ ಆಗಿರುವ ಶಂಕೆ ವ್ಯಕ್ತವಾಗಿದೆ. ಘಟನೆಯಿಂದ ತುಮಕೂರು- ಬೆಂಗಳೂರು ರಸ್ತೆಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನಸವಾರರು ಪರದಾಡಿದ್ದಾರೆ.

Share This Article