ವಾಷಿಂಗ್ಟನ್: ಯುಎಸ್ ಓಪನ್‍ನ ಮೂರನೇ ಸುತ್ತಿನಲ್ಲಿ ಸೋಲುವ ಮೂಲಕ ಅಮೆರಿಕದ ಟೆನಿಸ್ ಲೆಜೆಂಡ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಟೆನಿಸ್‍ಗೆ ವಿದಾಯ ಹೇಳಿದ್ದಾರೆ.
Advertisement
ಯುಎಸ್ ಓಪನ್ ಟೂರ್ನಿ ಆರಂಭಕ್ಕೂ ಮುನ್ನ ಇದು ನನ್ನ ಕೊನೆಯ ಟೆನಿಸ್ ಟೂರ್ನಿಯಾಗಿದ್ದು, ಈ ಟೂರ್ನಿಯ ಬಳಿಕ ನಿವೃತ್ತಿ ಘೋಷಿಸುವುದಾಗಿ ಈ ಹಿಂದೆಯೇ ಸೆರೆನಾ ಘೋಷಿಸಿದ್ದರು. ಇದನ್ನೂ ಓದಿ: 1.5 ಕೋಟಿ ರೂ. ನೀಡಿ ನೀರಜ್ ಚೋಪ್ರಾರ ಜಾವೆಲಿನ್ ಖರೀದಿಸಿದ ಬಿಸಿಸಿಐ
Advertisement
Advertisement
ಯುಎಸ್ ಓಪನ್ 3ನೇ ಸುತ್ತಿನಲ್ಲಿ ಆಸ್ಟ್ರೇಲಿಯಾದ ಆಜ್ಞಾ ಟೊಮಿಲ್ಲಾನೋವಿಕ್ ವಿರುದ್ಧ ಸೋಲುವ ಮೂಲಕ ಟೂರ್ನಿಯಿಂದ ಹೊರಬಿದ್ದರು. ಇದರೊಂದಿಗೆ ವಿಶ್ವ ಟೆನಿಸ್ ಪ್ರಿಯರ ಮನಗೆದ್ದಿದ್ದ ಲೆಜೆಂಡ್ ಆಟಗಾರ್ತಿ ಭಾವುಕರಾಗಿ ಟೆನಿಸ್ ಅಂಗಳಕ್ಕೆ ಗುಡ್‍ಬೈ ಹೇಳಿದ್ದಾರೆ.
Advertisement
24ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆಲ್ಲುವ ಕನಸಿನೊಂದಿಗೆ ಕಣಕ್ಕಿಳಿದಿದ್ದ 40ರ ಹರೆಯದ ಸೆರೆನಾ ಆಸ್ಟ್ರೇಲಿಯಾದ ಅಜ್ಞಾ ಟೊಮಿಲ್ಲಾನೋವಿಕ್ ವಿರುದ್ಧ ಬರೋಬ್ಬರಿ 3 ಗಂಟೆ 5 ನಿಮಿಷಗಳ ಕಾಲ ಹೋರಾಟ ನಡೆಸಿ ಕೊನೆಗೆ ಸೋಲೊಪ್ಪಿಕೊಂಡರು. ಮೊದಲ ಸೆಟ್ ಗೆದ್ದ ಸೆರೆನಾ ಬಳಿಕ ಎರಡು ಸೆಟ್‍ಗಳನ್ನು ಸತತವಾಗಿ ಸೋತು ಟೂರ್ನಿಗೆ ಗುಡ್‍ಬೈ ಘೋಷಿಸಿದ್ದಾರೆ. 7-5, 6-7, 6-1 ಸೆಟ್‍ಗಳಿಂದ ಗೆದ್ದ ಆಜ್ಞಾ ಟೊಮಿಲ್ಲಾನೋವಿಕ್ ಮುಂದಿನ ಹಂತಕ್ಕೆ ತೇರ್ಗಡೆಗೊಂಡರು. ಇದನ್ನೂ ಓದಿ: ಪರ್ಫಾರ್ಮ್ಯಾಕ್ಸ್ ಬ್ರ್ಯಾಂಡ್‌ಗೆ ಜಸ್ಪ್ರೀತ್ ಬುಮ್ರಾ ಬ್ರ್ಯಾಂಡ್ ಅಂಬಾಸಿಡರ್
"I wouldn't be Serena if there wasn't Venus."@serenawilliams ???? @Venuseswilliams pic.twitter.com/C7RZXcf23E
— US Open Tennis (@usopen) September 3, 2022
ಟೆನಿಸ್ ಅಂಗಳದಲ್ಲಿ ಮಿಂಚಿನ ಪಾದ ಚಲನೆ ಮೂಲಕ ಅದೆಷ್ಟೋ ಅಗ್ರಗಣ್ಯ ಆಟಗಾರ್ತಿಯರನ್ನು ಸೋಲಿಸಿ ವಿಶ್ವದ ಗಮನಸೆಳೆದಿದ್ದ ಸೆರೆನಾ ತನ್ನ 27 ವರ್ಷಗಳ ವೃತ್ತಿಜೀವನದಲ್ಲಿ 23 ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದಿರುವ ಏಕೈಕ ಆಟಗಾರ್ತಿ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ.