ಮೈಸೂರು ದಸರಾಗೆ ಪ್ರತ್ಯೇಕ ಮಾರ್ಗಸೂಚಿ – ಉದ್ಘಾಟನೆಗೆ ಕೇವಲ 100 ಮಂದಿಗಷ್ಟೇ ಅವಕಾಶ

Public TV
2 Min Read
mys dasara jambo savari 2020 3

– ದಸರಾ ಆಚರಣೆಯಲ್ಲಿ 400 ಮಂದಿಗೆ ಅನುಮತಿ
– ರಾಜ್ಯಕ್ಕೆ ಮತ್ತೊಂದು ಗೈಡ್‍ಲೈನ್ಸ್

ಮೈಸೂರು/ಬೆಂಗಳೂರು: ಅರಮನೆ ನಗರಿಯ ದಸರಾ ಹಬ್ಬಕ್ಕೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗಿದೆ. ದಸರಾ ಹಬ್ಬ, ದುರ್ಗಾ ಪೂಜೆಗೆ ಮಾರ್ಗಸೂಚಿ ರೆಡಿಯಾಗಿದೆ. ಈ ಮೂಲಕ ಮೈಸೂರಿಗೆ ಒಂದು, ಇಡೀ ರಾಜ್ಯಕ್ಕೆ ಮತ್ತೊಂದು ಗೈಡ್‍ಲೈನ್ಸ್ ಎನ್ನುವಂತಾಗಿದೆ.

mys dasara jambo savari 2020 13

ಮೈಸೂರು ದಸರಾಗೆ ಮಾರ್ಗಸೂಚಿ..!
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅಂತರ, ಮಾಸ್ಕ್ ಬಳಕೆ ಕಡ್ಡಾಯ. ವರ್ಚುವಲ್ ಮೂಲಕ ದಸರಾ ವೈಭವ ವೀಕ್ಷಣೆಗೆ ಅವಕಾಶ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ. ದಸರಾ ವೀಕ್ಷಣೆಗೆ ಬಂದ ಸಾರ್ವಜನಿಕರಿಗೆ ಮಾಸ್ಕ್ ಕಡ್ಡಾಯವಾಗಿರುತ್ತದೆ.

ಆಚರಣೆಯಲ್ಲಿ ಪಾಲ್ಗೊಳ್ಳುವ ವ್ಯಕ್ತಿಗಳ ಸಂಖ್ಯೆ ಸೀಮಿತ ಮಾಡಲಾಗಿದೆ. ದಸರೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರಿಗೂ ನೆಗೆಟಿವ್ ರಿಪೋರ್ಟ್ ಜೊತೆಗೆ 1 ಡೋಸ್ ಲಸಿಕೆ ಕಡ್ಡಾಯ. ಕರ್ತವ್ಯ ನಿರತ ಅಧಿಕಾರಿಗಳು, ರಕ್ಷಣಾ ಸಿಬ್ಬಂದಿ, ಕಲಾವಿದರಿಗೆ ಇದು ಅನ್ವಯವಾಗಲಿದೆ.

MYS DASARA

ಮೈಸೂರು ಸೇರಿದ ಕರ್ನಾಟಕದ ಕಲಾವಿದರಿಗೆ ಆದ್ಯತೆ ನೀಡುವುದು. ಚಾಮುಂಡಿ ಬೆಟ್ಟಕ್ಕೆ 100 ಜನರಿಗೆ ಮಾತ್ರ, 8 ದಿನಗಳ ಕಾಲ 500 ಕಲಾವಿದರಿಗೆ ಮಾತ್ರ ಅವಕಾಶ ನೀಡಲಾಗುವುದು. ಪ್ರತಿದಿನ ಸಂಜೆ 2 ಗಂಟೆ ಮೀರದಂತೆ ಸಾಂಸ್ಕೃತಿಕ ಕಾರ್ಯಕ್ರಮವಿದ್ದು, ಜಂಬೂ ಸವಾರಿಗೆ 500 ಜನರಿಗೆ ಮಾತ್ರ ಅವಕಾಶ ನಿಡಲಾಗುತ್ತಿದೆ. ಇದನ್ನೂ ಓದಿ:  ಚಾಮುಂಡಿ ಭಕ್ತರಿಗಿಲ್ಲ ಅಮ್ಮನವರ ದರ್ಶನ- 3ದಿನ ಪ್ರವೇಶಕ್ಕೆ ನಿರ್ಬಂಧ

mys dasara jambo savari 2020 14

ರಾಜ್ಯಕ್ಕೆ ರೂಲ್ಸ್ ಗಳೇನು..?
ಮೈಸೂರು ಹೊರತಾಗಿ ರಾಜ್ಯದ ಇತರೆಡೆ ನಡೆಸಲಾಗುವ ಆಚರಣೆಗೆ 400 ಕಿಂತ ಹೆಚ್ಚು ಜನ ಒಮ್ಮೆಲೆ ಸೇರಬಾರದು. ಸಾಮಾಜಿಕ ಅಂತರವಿಲ್ಲದೇ ನಡೆಸಲಾಗುವ ದಸರಾ ಕಾರ್ಯಕ್ರಮಗಳಿಗೆ ನಿಷೇಧ. ಸರ್ಕಾರ ಮತ್ತು ಜಿಲ್ಲಾಡಳಿತ ಹೊರಡಿಸಿರುವ ನಿಯಮಗಳನ್ನ ಪಾಲಿಸತಕ್ಕದು, ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ, ಜಿಲ್ಲಾಡಳಿತ ಸ್ಥಳೀಯ ಸಂಸ್ಥೆಗಳು ರೂಲ್ಸ್ ಫಾಲೋ ಮಾಡಬೇಕು. ಕಾನೂನು ಸುವ್ಯವಸ್ಥೆಗೆ ಭಂಗ ಬರದಂತೆ ದಸರಾ ಹಬ್ಬ ಆಚರಣೆ ಮಾಡಬೇಕು.

mysuru dasara 2020 6

ರಾಜ್ಯಾದ್ಯಂತ ಆಚರಿಸಲಾಗುವ ನಾಡಹಬ್ಬ, ದಸರಾ ತಯಾರಿ ಮತ್ತು ಚಟುವಟಿಕೆ ಕುರಿತು ಸಂಬಂಧಿಸಿದ ಪ್ರಾಧಿಕಾರಗಳಿ ಆಗಾಗ್ಗೆ ಕ್ರಮ ವಹಿಸುವುದು. ಕೊವಿಡ್ 19 ಇರುವ ಹಿನ್ನೆಲೆ ದಸರಾ ಹಬ್ಬವನ್ನ ಅತ್ಯಂತ ಸರಳವಾಗಿ ಮತ್ತು ಭಕ್ತಿ ಪೂರ್ವಕವಾಗಿ ಆಚರಿಸಬೇಕು. ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕಾ ಕ್ರಮವಹಿಸಿ ಆಚರಣೆಗೆ ಮುನ್ನವೇ ನಿಷೇಧ ಕುರಿತು ಪ್ರಚಾರ ಮಾಡತಕ್ಕದ್ದಾಗಿದೆ.

Share This Article
Leave a Comment

Leave a Reply

Your email address will not be published. Required fields are marked *