ಹಾಸನ: ಪ್ರಜ್ವಲ್ ರೇವಣ್ಣ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಹಿರಿಯರು ತೀರ್ಮಾನ ಕೈಗೊಳ್ಳುತ್ತಾರೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದ್ದಾರೆ.
ಹೊಳೆನರಸೀಪುರದ ಕಾರ್ಯಕ್ರಮದಲ್ಲಿ ಪ್ರಜ್ವಲ್ ರೇವಣ್ಣ ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರಜ್ವಲ್‍ಗೆ ಇನ್ನೂ ವಯಸ್ಸಿದೆ. ರಾಜಕೀಯದಲ್ಲಿ ಪಕ್ಷ ಈಗಾಗಲೇ ಅವರಿಗೆ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿಯನ್ನು ನೀಡಿದ್ದು, ಬಡವರಿಗೆ ಸಂಬಂಧಿಸಿದ ಕೆಲಸವನ್ನು ಮಾಡಲಿ, ಅವರ ಸ್ಪರ್ಧೆ ಕುರಿತು ಹಿರಿಯರು ತೀರ್ಮಾನಿಸುತ್ತಾರೆ. ನಾನು ಶಾಸಕನಾಗಿದ್ದು 32ನೇ ವಯಸ್ಸಿನಲ್ಲಿ. ಜನರ ಆಶೀರ್ವಾದ, ಸಾರ್ವಜನಿಕರ ಆಶೀರ್ವಾದ ನನಗಿದೆ. ಇಲ್ಲಿಯವರೆಗೂ ರಾಜಕೀಯದಲ್ಲಿಯೇ ನಾನೂ ಇಲ್ಲವೇ ಎಂದು ಪ್ರಶ್ನಿಸಿದರು.
Advertisement
ರಾಜ್ಯದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್‍ನೊಂದಿಗೆ ಹೊಂದಾಣಿಕೆ ಕುರಿತು ಮಾಧ್ಯಮಗಳು ಪ್ರಶ್ನಿಸಿದಾಗ, ಈ ಕುರಿತು ಮುಖ್ಯಮಂತ್ರಿ ಕುಮಾರಣ್ಣ ಮತ್ತು ದೇವೇಗೌಡರು ತೀರ್ಮಾನವೇ ಅಂತಿಮ ಎಂದು ಉತ್ತರ ನೀಡಿ ಜಾರಿಕೊಂಡರು. ಹೆಚ್. ವಿಶ್ವನಾಥ್ ಜೆಡಿಎಸ್ ಪಕ್ಷದ ರಾಜ್ಯಧ್ಯಕ್ಷರಾದರೆ ಸಂತೋಷದ ವಿಚಾರ ಎಂದು ರೇವಣ್ಣ ತಿಳಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews