ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಪ್ರತಿಮಾ ಕೊಲೆ- ತಪ್ಪೊಪ್ಪಿಕೊಂಡ ಕಿರಣ್

Public TV
1 Min Read
PRATHIMA KIRAN

ಬೆಂಗಳೂರು: ಗಣಿ ಅಧಿಕಾರಿ ಪ್ರತಿಮಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕಾರು ಚಾಲಕನನ್ನು ಬಂಧಿಸಲಾಗಿದೆ.

ಪ್ರತಿಮಾ ಮೇಲಿನ ಸೇಡಿನಿಂದ ಪ್ರಾಣ ತೆಗೆದು ಕಿರಣ್ ಎಸ್ಕೇಪ್ ಆಗಿ ಇವಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಅಲ್ಲದೆ ವಿಚಾರಣೆಯ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.

4 ವರ್ಷದಿಂದ ಕಾರು ಚಾಲಕನಾಗಿದ್ದ ಕಿರಣ್, ಬೇಜವಾಬ್ದಾರಿಯಿಂದ ಕಾರು ಓಡಿಸುತ್ತಿದ್ದನು. ಗುತ್ತಿಗೆ ಆಧಾರದಲ್ಲಿ ಚಾಲಕ ವೃತ್ತಿ ಮಾಡುತ್ತಿದ್ದ ಕಿರಣ್ ಕಳೆದ ತಿಂಗಳು ಹೊಸ ಸರ್ಕಾರಿ ಕಾರು ಅಪಘಾತ ಮಾಡಿದ್ದನು. ಅಪಘಾತದ ನಂತರ ಕಚೇರಿಯಲ್ಲೇ ಕಾರು ಬಿಟ್ಟು ತೆರಳಿದ್ದನು.

ಕಿರಣ್ ನಡವಳಿಕೆಯಿಂದ ಕೋಪಗೊಂಡಿದ್ದ ಪ್ರತಿಮಾ, 10 ದಿನಗಳ ಹಿಂದೆ ಕೆಲಸದಿಂದ ತೆಗೆದು ಹಾಕಿದ್ದರು. ಈ ವೇಳೆ ಪ್ರತಿಮಾ ಕಾಲಿಗೆ ಬಿದ್ದು ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಬೇಡಿಕೊಂಡಿದ್ದನು. ಆದರೆ ಪ್ರತಿಮಾ ಅವರು ಕಿರಣ್‍ನನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿದ್ದರು. ಇದೇ ಕಾರಣಕ್ಕೆ ಪ್ರತಿಮಾ ಮೇಲೆ ದ್ವೇಷಕಾರಿದ್ದನು.

ಕಿರಣ್‍ಗೆ ವಾರ್ನಿಂಗ್ ಕೊಟ್ಟಿದ್ದ ಪ್ರತಿಮಾ: ಪ್ರತಿಮಾ ರೇಡ್ ಹೋಗುವ ವಿಚಾರ ಲೀಕ್ ಮಾಡುತ್ತಿದ್ದ ಬಗ್ಗೆ ಮಾಹಿತಿ ಇತ್ತು. ಈ ಕಾರಣಕ್ಕೆ ಪ್ರತಿಮಾ ವಾರ್ನ್ ಕೂಡ ಮಾಡಿದ್ದರು. ಈ ವೇಳೆ ಬೈದಾಗ ತಪ್ಪಾಗಿದೆ ಕೆಲಸದಿಂದ ತೆಗೆಯಬೇಡಿ ಎಂದು ಕೇಳಿಕೊಂಡಿದ್ದನು.

ಕೊಲೆ ದಿನವೂ ಪ್ರತಿಮಾ ಕಾಲಿಗೆ ಬಿದ್ದು ಕೆಲಸಕ್ಕೆ ಸೇರಿಸಿಕೊಳ್ಳುವಂತೆ ದುಂಬಾಲು ಬಿದ್ದಿದ್ದನು. ಆದರೆ ಆಕೆ ಅದನ್ನು ತಿರಸ್ಕರಿಸಿದ್ದರಿಂದ ಶನಿವಾರ ಮನೆ ಬಳಿಯೇ ಕಾದು ಕುಳಿತು ಹೊಂಚು ಹಾಕಿ ಕೊಲೆ ಮಾಡಿ ಕಿರಣ್ ಎಸ್ಕೇಪ್ ಆಗಿದ್ದನು. ಇದೀಗ ಪೊಲೀಸರು ಆತನನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Share This Article