ಬೆಂಗಳೂರು: ಸ್ಯಾಂಡಲ್‍ವುಡ್ ಪವರ್ ಸ್ಟಾರ್ ದಿ.ಪುನೀತ್ ರಾಜ್ ಕುಮಾರ್ ಅವರಿಗೆ ಯಾವುದೇ ರೀತಿಯ ಆಟಿಟ್ಯೂಡ್ ಇರಲಿಲ್ಲ. ಅವರ ಜೀವನ ಶೈಲಿ ಹಲವರಿಗೆ ಮಾರ್ಗದರ್ಶನ ಎಂದು ತೆಲುಗು ಹಿರಿಯ ನಟ ಸುಮನ್ ಹೇಳಿದರು.
ಅಪ್ಪು ಹುಟ್ಟುಹಬ್ಬದ ಪ್ರಯುಕ್ತ ಇಂದು ಅವರ ಸಮಾಧಿಗೆ ಬೇಟಿ ಕೊಟ್ಟ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಅಪ್ಪು ಅಗಲಿಕೆ ಸಿನಿಮಾ ಇಂಡಸ್ಟ್ರಿಗೆ ದೊಡ್ಡ ಲಾಸ್ ಆಗಿದೆ. ಇಂದು ಪುನೀತ್ ರಾಜ್ ಕುಮಾರ್ ಅವರ ಜನ್ಮದಿನ. ಅವರ ಸಮಾಜಸೇವೆ ಅವರ ಚಿಂತನೆ ತುಂಬಾ ಮೆಚುರ್ಡ್ ಆಗಿದೆ. ನಟನೆ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು ಎಂದು ಭಾವುಕರಾದರು. ಇದನ್ನೂ ಓದಿ: ಅಪ್ಪು ಸಮಾಧಿ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್‍ಕುಮಾರ್
ಚಿಕ್ಕ ವಯಸ್ಸಿನಲ್ಲೆ ತುಂಬಾ ಮೆಚುರ್ಡ್ ಥಿಂಕಿಂಗ್ ಅವರಲ್ಲಿತ್ತು. ತುಂಬಾ ಚಿಕ್ಕ ವಯಸ್ಸಿನಲ್ಲಿ ಈ ರೀತಿ ಆಗಿರೋದು ನೋವು ತಂದಿದೆ. ಅಪ್ಪುಗೆ ಯಾವುದೇ ರೀತಿಯ ಆಟ್ಯಿಡ್ಯೂಡ್ ಇರಲಿಲ್ಲ. ಅವರ ಜೀವನ ಶೈಲಿ ಹಲವರಿಗೆ ಮಾರ್ಗದರ್ಶನ ಆಗಿದೆ ಎಂದು ಹೇಳುತ್ತಾ ಇಂದು ಜೇಮ್ಸ್ ರಿಲೀಸ್ ಆಗಿದೆ ಶುಭ ಹಾರೈಸುತ್ತೇವೆ ಅಂದ್ರು. ಇದನ್ನೂ ಓದಿ: ಪುನೀತ್ ರಾಜ್‍ಕುಮಾರ್ ಹುಟ್ಟಹುಬ್ಬ- ಬಿಎಸ್‍ವೈ, ಬೊಮ್ಮಾಯಿ ಹೇಳಿದ್ದೇನು..?
ಇಂದು ಪುನೀತ್‍ಗೆ 47 ವರ್ಷದ ಹುಟ್ಟುಹಬ್ಬವಾಗಿದ್ದು, ಇಂದೇ ಅಪ್ಪು ನಟನೆಯ ಕೊನೆಯ ಸಿನಿಮಾ ಜೇಮ್ಸ್ ಕೂಡ ರಿಲೀಸ್ ಆಗಿದೆ. ಈ ಮೂಲಕ ಅಭಿಮಾನಿಗಳ ಸಂಭ್ರಮ ಇಮ್ಮಡಿಯಾಗಿದೆ. ಆದರೆ ಈ ನಡುವೆ ಅಪ್ಪು ಇಲ್ಲ ಅನ್ನೋ ನೋವು ಕೂಡ ಅಭಿಮಾನಿಗಳಲ್ಲಿದೆ. ರಾಜ್ಯದ ಥಿಯೇಟರ್ ಗಳ್ಲಿ ಜೇಮ್ಸ್ ಜಾತ್ರೆ ಈಗಾಗಲೇ ಆರಂಭವಾಗಿದ್ದು, ಅಪ್ಪು ಚಿತ್ರ ನೋಡಿ ಕರುನಾಡು ಕಣ್ಣಿರಾಗಿದೆ. ಇದನ್ನೂ ಓದಿ: ಡಾ.ಪುನೀತ್ ರಾಜ್‍ಕುಮಾರ್ 47ನೇ ಜನ್ಮದಿನ – ಸಮಾಧಿ ಬಳಿ ಕೇಕ್ ಕತ್ತರಿಸಿದ ದೊಡ್ಮನೆ ಕುಟುಂಬ