ಕಾಬೂಲ್: ಮಿಲಿಟರಿ ಆಸ್ಪತ್ರೆಯ ಮೇಲೆ ದಾಳಿಯಾಗಿದ್ದು, ಈ ವೇಳೆ ತಾಲಿಬಾನ್ ಹಿರಿಯ ಕಮಾಂಡರ್ ಸಾವನ್ನಪ್ಪಿದ್ದಾರೆ.
ಮಂಗಳವಾರ ಕಾಬೂಲ್‍ನ ಸೇನಾ ಆಸ್ಪತ್ರೆಯ ಮೇಲೆ ದಾಳಿ ನಡೆದಿದ್ದು, ಈ ವೇಳೆ 19 ಜನರು ಮೃತಪಟ್ಟಿದ್ದಾರೆ. ಈ ಗುಂಪಿನಲ್ಲಿ ಕಾಬೂಲ್‍ನ ಹಿರಿಯ ತಾಲಿಬಾನ್ ಮಿಲಿಟರಿ ಕಮಾಂಡರ್ ಹಮ್ದುಲ್ಲಾ ಮೊಖ್ಲಿಸ್ ಕೂಡ ಇದ್ದು, ಅವರು ಸಹ ಸಾವನ್ನಪ್ಪಿದ್ದಾರೆ. ಮೊಖ್ಲಿಸ್ ಅವರು ದಾಳಿಯ ವೇಳೆ ಪ್ರತಿರೋಧವನ್ನು ವ್ಯಕ್ತಪಡಿಸಿದ್ದಕ್ಕೆ ಅವರನ್ನು ಕೊಲ್ಲಲಾಗಿದೆ ಎಂದು ವರದಿಗಳ ಪ್ರಕಾರ ತಿಳಿದುಬಂದಿದೆ.
Advertisement
Advertisement
ಮೊಖ್ಲಿಸ್ ಅವರು ಹಾಡ್ರ್ಲಿನೆ ಹಕ್ಕಾನಿ ನೆಟ್ವರ್ಕ್ ಸದಸ್ಯ ಮತ್ತು ಬದ್ರಿ ಕಾಪ್ರ್ಸ್ ವಿಶೇಷ ಪಡೆಗಳ ಅಧಿಕಾರಿಯಾಗಿದ್ದು, ತಾಲಿಬಾನ್ ರಾಜಧಾನಿಯನ್ನು ವಶಪಡಿಸಿಕೊಂಡ ನಂತರ ಮೃತರಾದ ಅತ್ಯಂತ ಹಿರಿಯ ವ್ಯಕ್ತಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಇಸ್ಲಾಮಿಕ್ ಸ್ಟೇಟ್-ಖೊರಾಸನ್(ಐಎಸ್-ಕೆ) ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದು, ನಮ್ಮ ಐದು ತಂಡ ಏಕಕಾಲದಲ್ಲಿ ದಾಳಿ ನಡೆಸಿದೆ ಎಂದು ತಿಳಿಸಿದೆ. ಇದನ್ನೂ ಓದಿ: ತಾಯಿ ಮಗುವಿನ ಮೇಲೆ ಹರಿದ ಕಾರು – ಸ್ಥಳದಲ್ಲೇ ಇಬ್ಬರು ಸಾವು
Advertisement
ಈ ಕುರಿತು ಮಾತನಾಡಿದ ತಾಲಿಬಾನ್ ವಕ್ತಾರ ಜಬಿವುಲ್ಲಾ ಮುಜಾಹಿದ್, ದಾಳಿಯನ್ನು ತಾಲಿಬಾನ್ ಪಡೆಗಳು 15 ನಿಮಿಷಗಳಲ್ಲಿ ಹಿಮ್ಮೆಟ್ಟಿಸಿತ್ತು. ಉಗ್ರರು ಆಸ್ಪತ್ರೆಯಲ್ಲಿರುವ ನಾಗರಿಕರು, ವೈದ್ಯರು ಮತ್ತು ರೋಗಿಗಳನ್ನು ಗುರಿಯಾಗಿ ಇಟ್ಟುಕೊಂಡು ಈ ದಾಳಿಯನ್ನು ಮಾಡಿದ್ದಾರೆ. ಅಮೆರಿಕ ಬಿಟ್ಟು ಹೋಗಿದ್ದ ಹೆಲಿಕಾಪ್ಟರ್ ಮೂಲಕ ವಿಶೇಷ ಪಡೆಗಳನ್ನು ಆಸ್ಪತ್ರೆಯ ಛಾವಣಿಯ ಮೇಲೆ ಇಳಿಸಲಾಯಿತು. ನಮ್ಮ ಪಡೆ ಉಗ್ರರನನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಆಸ್ಪತ್ರೆಯ ಪ್ರವೇಶ ದ್ವಾರದ ಬಳಿ ಬಾಂಬರ್ ಗಳನ್ನು ಸ್ಫೋಟಿಸಿ ಈ ದಾಳಿ ನಡೆದಿದೆ. ದಾಳಿಕೋರರು ತಮ್ಮ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಿ ಆಸ್ಪತ್ರೆಗೆ ನುಗ್ಗಿದ್ದಾರೆ. ಈ ವೇಳೆ ಆಸ್ಟತ್ರೆಯಲ್ಲಿದ್ದ ಜನರ ಮೇಲೆ ದಾಳಿ ಮಾಡಿದ್ದಾರೆ. ಪರಿಣಾಮ 19 ಮಂದಿ ಮೃತರಾಗಿದ್ದು, ಸುಮಾರು 50 ಜನರಿಗೆ ಗಾಯವಾಗಿದೆ. ಈ ಹಿನ್ನೆಲೆ ಗಾಯಾಳುಗಳನ್ನು ಕಾಬೂಲ್‍ನ ಆಸ್ಪತ್ರೆಗಳಿಗೆ ಕೊಂಡೊಯ್ಯಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕಡಿಮೆ ಲಸಿಕೆ ವಿತರಣೆ – 40ಕ್ಕೂ ಹೆಚ್ಚು ಡಿಸಿಗಳ ಜೊತೆ ಮೋದಿ ಸಭೆ
ಅಶ್ರಫ್ ಘನಿ ನೇತೃತ್ವದ ಸರ್ಕಾರದ ಪತನದ ನಂತರ ಆಗಸ್ಟ್‍ನಲ್ಲಿ ತಾಲಿಬಾನ್ ಅಧಿಕಾರವನ್ನು ವಶಪಡಿಸಿಕೊಂಡ ನಂತರ ಮೊದಲ ಬಾರಿಗೆ ಈ ರೀತಿಯ ದಾಳಿ ನಡೆದಿದ್ದು, ಈ ದಾಳಿ ಅಫ್ಘಾನಿಸ್ತಾನವನ್ನು ಬೆಚ್ಚಿಬೀಳಿಸಿದೆ.