ಬೆಂಗಳೂರು: ಹಿರಿಯ ಕನ್ನಡ ವಿದ್ವಾಂಸ ಪ್ರೊ. ಟಿ.ಆರ್. ಮಹದೇವಯ್ಯ (82) ಇಂದು ನಗರದ ನಾಗರಬಾವಿಯ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.
ಮಹದೇವಯ್ಯ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಕನ್ನಡ ನಿಘಂಟು ರಚನೆಗಾಗಿ ನಾಲ್ಕು ದಶಕಗಳ ಕಾಲ ಸುದೀರ್ಘ ಸೇವೆಯನ್ನು ಸಲ್ಲಿಸಿದ್ದಾರೆ. ಮಹದೇವಯ್ಯ
ಅವರು ವಚನಜ್ಯೋತಿ ಬಳಗದ ಗೌರವಾ ಅಧ್ಯಕ್ಷರಾಗಿಯೂ ಸೇವೆಯನ್ನು ಸಲ್ಲಿಸಿದ್ದಾರೆ.
Advertisement
ತಮ್ಮ ಸಾವಿನ ಬಳಿಕ ತಮ್ಮ ದೇಹವನ್ನು ದಾನ ಮಾಡಬೇಕೆಂಬ ಇಚ್ಚೆಯನ್ನು ಮಹದೇವಯ್ಯ ಅವರು ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರು ಜೆಎಸ್‍ಎಸ್ ಆಸ್ಪತ್ರೆಗೆ ದೇಹದಾನ ಮಾಡಲು ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ. ಮಹದೇವಯ್ಯನವರು ಸಮಗ್ರ ಚಿಂತನೆ ಸೇರಿದಂತೆ ಹತ್ತಾರು ಮೌಲಿಕ ಕೃತಿಗಳನ್ನು ರಚಿಸಿದ್ದಾರೆ.
Advertisement