ಬೆಂಗಳೂರು: ಇಲ್ಲಿನ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಹಿರಿಯ ಪತ್ರಕರ್ತರಾದ ಕೆ.ಸತ್ಯನಾರಾಯಣ (K.Sathyanarayana) ಅವರಿಗೆ ಶನಿವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶ್ರದ್ಧಾಂಜಲಿ ಸಭೆಯಲ್ಲಿ ಸಹದ್ಯೋಗಿಗಳು, ಹಿರಿಯ ಪತ್ರಕರ್ತರು, ಕುಟುಂಬದ ಸದಸ್ಯರು ಸತ್ಯನಾರಾಯಣ ಅವರನ್ನು ಸ್ಮರಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಬೆಂಗಳೂರು ಪ್ರೆಸ್ ಕ್ಲಬ್ (Press Club Bengaluru), ಕರ್ನಾಟಕ ಮಾಧ್ಯಮ ಅಕಾಡೆಮಿ (Karnataka Media Academy), ಕರ್ನಾಟಕ ಪತ್ರಕರ್ತರ ಸಹಕಾರ ಸಂಘ ಹಾಗೂ ಕೆ.ಸತ್ಯನಾರಾಯಣ ಅವರ ಅಭಿಮಾನಿಗಳ ಬಳಗ ಸಹಯೋಗದಲ್ಲಿ ಕೆ.ಸತ್ಯನಾರಾಯಣ ಅವರಿಗೆ ನುಡಿ ನಮನ ಸಲ್ಲಿಸಲಾಯಿತು. ಇದನ್ನೂ ಓದಿ: ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣ ನಿಧನಕ್ಕೆ ಗಣ್ಯರ ಸಂತಾಪ
Advertisement
Advertisement
ಈ ವೇಳೆ ಮಾತನಾಡಿದ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ, ಸತ್ಯನಾರಾಯಣ ಅವರನ್ನು ಇಳಿವಯಸ್ಸಿನಲ್ಲಿ ಶಿಷ್ಯ ವರ್ಗ ಪ್ರೀತಿಯಿಂದ ನೋಡಿಕೊಂಡಿದೆ ಎಂದು ನೆನಪಿಸಿಕೊಂಡರು.
Advertisement
ನಮ್ಮನ್ನು ಅಗಲಿದ 40 ಹಿರಿಯ ಪತ್ರಕರ್ತರ ಬಗ್ಗೆ ಪುಸ್ತಕಗಳನ್ನು ಹೊರತರುತ್ತಿದ್ದೇವೆ. ಮುಂದಿನ ತಿಂಗಳು ಪುಸ್ತಕ ಬಿಡುಗಡೆ ಮಾಡಲಾಗುವುದು. ಸತ್ಯನಾರಾಯಣ ಅವರ ಜೀವನ ಚರಿತ್ರೆ ಪುಸ್ತಕವನ್ನು ಹೊರತರುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.
Advertisement
ಸತ್ಯನಾರಾಯಣ ಅವರ ಪುತ್ರಿ ಅಪೂರ್ವ ತಮ್ಮ ತಂದೆಯ ವ್ಯಕ್ತಿತ್ವ ಕುರಿತು ಮಾತನಾಡಿದರು. ಈಗಿನ ಮಕ್ಕಳು, ನಮ್ಮಪ್ಪ ನನಗೆ ಸೈಕಲ್ ತುಳಿಯುವುದನ್ನು ಹೇಳಿಕೊಟ್ರು. ಬೈಕ್ ಓಡಿಸೋದನ್ನು ಕಲಿಸಿಕೊಟ್ರು ಅಂತಾ ಹೇಳ್ತಾರೆ. ಆದರೆ ನಮ್ಮ ತಂದೆ ಬಜೆಟ್ ಕುರಿತು ಪ್ರಬಂಧ ಬರೆಯುವಾಗ, “ನೀನು ಬರಿ ಬಜೆಟ್ ನೋಡಿದರೆ ಸಾಲದು. ಆರ್ಥಿಕ ಸಮೀಕ್ಷೆಯನ್ನೂ ನೋಡಿಕೊಳ್ಳಬೇಕೆಂದು” ಸಲಹೆ ನೀಡಿದ್ದರು ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಇದನ್ನೂ ಓದಿ: ಪಂಚಭೂತಗಳಲ್ಲಿ ಲೀನವಾದ ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣ
ಹಿರಿಯ ಪತ್ರಕರ್ತ ಡಿ.ಉಮಾಪತಿ ಮಾತನಾಡಿ, ಸತ್ಯ ಅವರು ಅಧಿಕಾರ ಕೇಂದ್ರಗಳಿಂದ ದೂರ ಇದ್ದವರು. ಅಧಿಕಾರ ಕೇಂದ್ರಗಳನ್ನು ಅತ್ಯಂತ ಅಸಡ್ಡೆಯಿಂದ ನೋಡಿದವರು. ಈಗ ಅಂತಹವರು ಬೆರಳೆಣಿಕೆಯಷ್ಟು ಮಂದಿ ಇದ್ದಾರೆ. ಅಧಿಕಾರ ಕೇಂದ್ರಗಳ ಕಣ್ಣು ಕೋರೈಸುವ ಪ್ರಭೆಯ ಮುಂದೆ ಪತ್ರಕರ್ತರಾದ ನಾವು ಕುರುಡಾಗಿದ್ದೇವೆ ಎಂದು ಹೇಳಿದರು.
ನನ್ನ ಕೆಲಸ ಮುಗಿತಪ್ಪ ಅಂತಾ ಹೆಗಲಿಗೆ ಚೀಲ ಹಾಕಿಕೊಂಡು ಸತ್ಯನಾರಾಯಣ ಅವರು ಹೊರಟು ಹೋಗಿದ್ದಾರೆ. ಪತ್ರಿಕೆಗಳಲ್ಲಿ ಕೆಲಸ ಮಾಡುವುದೆಂದರೆ ಬೇರೆ ಉದ್ಯೋಗಗಳಂತೆ ಅಲ್ಲ ಎಂಬ ಪಾಠವನ್ನು ಅವರು ನಮಗೆ ಹೇಳಿಕೊಟ್ಟಿದ್ದಾರೆ ಎಂದು ಸ್ಮರಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಸತ್ಯನಾರಾಯಣರಂಥ ಹಿರಿಯರು ಸುದ್ದಿಮನೆಯಲ್ಲಿ ಹಾಕಿದ ಆದರ್ಶವನ್ನು ಕಾಪಿಟ್ಟುಕೊಂಡು ಹೋದರೆ ನಮಗೆ ಗೌರವ. ಸತ್ಯನಾರಾಯಣ ಅವರು ಆದರ್ಶದ ಬದುಕನ್ನು ಜೀವಿಸಿದ್ದಾರೆ ಎಂದು ಮಾತನಾಡಿದರು.
ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಆರ್.ಶ್ರೀಧರ್ ಮಾತನಾಡಿ, ಸತ್ಯನಾರಾಯಣ ಅವರು ಬರೆದ ವರದಿಗಳು, ಲೇಖನ ವಿರುದ್ಧವಾಗಿ ಯಾವ ಮಾತುಗಳು ಸಹ ಬರುತ್ತಿರಲಿಲ್ಲ. ಏಕೆಂದರೆ ಅವರು ಎಂದೂ ಅಸತ್ಯ ಬರೆದಿರಲಿಲ್ಲ. ಸತ್ಯವನ್ನು ಬರೆಯುತ್ತಾ ಪತ್ರಕರ್ತರಾಗಿದ್ದರು ಎಂದು ಬಣ್ಣಿಸಿದರು. ಇದನ್ನೂ ಓದಿ: ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣ ನಿಧನ
ʼಪಬ್ಲಿಕ್ ಟಿವಿʼ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್, ಕನ್ನಡಪ್ರಭ ಪತ್ರಿಕೆ ಸಂಪಾದಕರಾದ ರವಿ ಹೆಗಡೆ, ಹಿರಿಯ ಪತ್ರಕರ್ತ ಇಮ್ರಾನ್ ಕುರೇಶಿ, ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಆರ್.ಶ್ರೀಧರ್, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ, ಹಿರಿಯ ಪತ್ರಕರ್ತ ರಾಮಕೃಷ್ಣ ಉಪಾಧ್ಯಾಯ, ಹಿರಿಯ ಪತ್ರಕರ್ತರಾದ ನಾಗಮಣಿ, ಟಿ.ರಾಮಯ್ಯ, ಹಿರಿಯ ಸಾಹಿತಿ ವಿಜಯಮ್ಮ ಅವರು ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡಿದ್ದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k