ಬೆಂಗಳೂರು: ಇಂದು ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ ಗೌರಿ ಲಂಕೇಶ್ ತಿಂಗಳ ಹಿಂದೆ ಆಪ್ತರ ಜೊತೆ ಜೀವಬೆದರಿಕೆ ಬಂದಿದ್ದ ವಿಚಾರವನ್ನು ಹಂಚಿಕೊಂಡಿದ್ದರು ಎನ್ನುವ ವಿಚಾರ ಈಗ ಬೆಳಕಿಗೆ ಬಂದಿದೆ.
ಸ್ನೇಹಿತೆ, ಸಚಿವೆ ಬಿಟಿ ಲಲಿತಾ ನಾಯ್ಕ್ ಜೊತೆ ತಿಂಗಳ ಹಿಂದೆ ನನಗೆ ಯಾರೋ ಕರೆ ಮಾಡಿ ನಿನ್ನನ್ನು ಉಳಿಸಲ್ಲ ಸಾಯಿಸ್ತೀವಿ ಅಂತಾ ಹೇಳ್ತಾನೆ ಇದ್ದಾರೆ ಎಂದು ತಿಳಿಸಿದ್ದರು.
Advertisement
ಇದರ ಜೊತೆ ಬಿಟಿ ಲಲಿತ ನಾಯ್ಕ್ ಗೆ ನಿಮಗೆ ಜೀವ ಬೆದರಿಕೆ ಬಂದ ಮೇಲೆ ದೂರು ಕೊಟ್ಟಿದ್ದೀರಾ ಎಂದು ವಿಚಾರಿಸಿಕೊಂಡಿದ್ರು. ದೂರು ಕೊಟ್ಟರೂ ಏನು ಪ್ರಯೋಜನ ಆಗಿಲ್ಲ ಅಂದಾಗ ಗೌರಿ ಲಂಕೇಶ್, ಪೊಲೀಸ್ ವ್ಯವಸ್ಥೆ ಅಷ್ಟೇ ಬಿಡಿ ಅಂತಾ ಸುಮ್ಮನಾಗಿದ್ರು.
Advertisement
ಬಿಟಿ ಲಲಿತಾ ನಾಯಕ್ ಗೂ ಆರೇಳು ತಿಂಗಳ ಹಿಂದೆ ಜೀವ ಬೆದರಿಕೆ ಪತ್ರ ಬಂದಿತ್ತು. ಈ ವಿಚಾರದ ಬಗ್ಗೆ ಮಾತನಾಡುವಾಗ ಗೌರಿ ಲಂಕೇಶ್ ತಮಗೆ ಬಂದಿದ್ದ ಜೀವ ಬೆದರಿಕೆಯ ವಿಚಾರವನ್ನು ತಿಳಿಸಿದ್ದರು.
Advertisement
Advertisement
https://youtu.be/E5KklglYg8o