ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಹೊಸದೊಂದು ಸಂಕಟ ಶುರುವಾಗಿದೆ. ಹಿಂಗೆ ಆದ್ರೆ ನಾವು ಮಾತ್ರ ಇರಲ್ಲ, ನಮ್ ದಾರಿ ನಮಗೆ ಅಂತ ಹಿರಿಯ ಶಾಸಕರು ಹೇಳಿದ್ದು, ಬೈ ಎಲೆಕ್ಷನ್ ವರೆಗೆ ಸರ್ಕಾರಕ್ಕೆ ಡೆಡ್‍ಲೈನ್ ಕೊಟ್ಟಿದ್ದಾರೆ.
ಹೌದು. ಸಂಪುಟ ವಿಸ್ತರಣೆ ಮಾಡುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ನ ಹಿರಿಯ ಶಾಸಕರು ಒತ್ತಡ ಹಾಕುತ್ತಿದ್ದಾರೆ. ಆದ್ರೆ ಅದು ನನ್ನ ಕೈಯಲ್ಲಿ ಇಲ್ಲ, ಹೈಕಮಾಂಡ್ ನಿರ್ಧಾರ ಕಣ್ರಪ್ಪ ಅಂತ ಸಿದ್ದರಾಮಯ್ಯ ಹೇಳಿದ್ದಾರೆ.
Advertisement
Advertisement
ಸಿದ್ದರಾಮಯ್ಯ ಮಾತಿನಿಂದ ಹೈಕಮಾಂಡ್ ಮೇಲೆ ಸಿಟ್ಟಿಗೆದ್ದ 20ಕ್ಕೂ ಹೆಚ್ಚು ಶಾಸಕರು, ನವೆಂಬರ್ ಎರಡನೇ ವಾರದೊಳಗೆ ಸಂಪುಟ ವಿಸ್ತರಣೆ ಮಾಡಬೇಕು ಎಂದು ಡೆಡ್‍ಲೈನ್ ಹಾಕಿದ್ದಾರೆ. ಸಂಪುಟ ವಿಸ್ತರಣೆಯಾಗದಿದ್ದರೆ ನಮ್ ದಾರಿ ನಾವು ನೋಡಿಕೊಳ್ಳುತ್ತೀವಿ ಅಂತ ಶಾಸಕರು ಎಚ್ಚರಿಕೆ ನೀಡಿದ್ದಾರೆ ಅಂತ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.
Advertisement
ಹಾಗಾದ್ರೆ ಶಾಸಕರ ಡೆಡ್‍ಲೈನ್ ಲೆಕ್ಕಚಾರ ಏನು..?
> 5 ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ತನಕ ಸೈಲೆಂಟ್ ಆಗಿರೋದು
> ನವೆಂಬರ್ 8ರ ಬಳಿಕ ಸಂಪುಟ ವಿಸ್ತರಣೆಗೆ ಬಹಿರಂಗವಾಗಿ ಆಗ್ರಹಿಸೋದು
> ಸರ್ಕಾರಕ್ಕೆ ಕಂಟಕವಾಗುತ್ತೆ ಅಂತಾ ಹೈಕಮಾಂಡ್‍ಗೆ ಸಂದೇಶ ರವಾನಿಸೋದು
> ಲೋಕಸಭೆ ಚುನಾವಣೆ ಬಳಿಕವಷ್ಟೇ ಸಂಪುಟ ವಿಸ್ತರಣೆ ಅಂದ್ರೆ ಕೈ ಕೊಡೋದು
Advertisement
> ಆಪರೇಷನ್ ಕಮಲದ ಸೆಕೆಂಡ್ ಛಾನ್ಸ್‍ಗೆ ಷರತ್ತು ವಿಧಿಸಿ ಜಂಪ್ ಮಾಡುವುದು
> ಗುಂಪು ಗುಂಪಾಗಿಯೇ ಆಪರೇಷನ್ ಸೆಕೆಂಡ್ ಛಾನ್ಸ್‍ನಲ್ಲಿ ಚೌಕಾಸಿ ಮಾಡುವುದು
> ಮತ್ತೆ ಶಾಸಕರಾಗಲು ಪೂರ್ಣ ಜವಾಬ್ದಾರಿಯನ್ನ ಆಪರೇಷನ್ ಟೀಂಗೆ ವಹಿಸೋದು ಆಗಿದೆ.
ಒಟ್ಟಿನಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸಂಪುಟ ವಿದ್ತರಣೆಗೆ ಒತ್ತಡ ಹೆಚ್ಚಾಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv