– ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ ಸಂದೇಶ?
ಚಿಕ್ಕಬಳ್ಳಾಪುರ: 2013ರ ಸಿದ್ದರಾಮಯ್ಯನವರೇ ಬೇರೆ, 2024ರ ಈಗಿನ ಸಿದ್ದರಾಮಯ್ಯನವರೇ (Siddaramaiah) ಬೇರೆ ಎಂದು ಮಾಜಿ ಸಚಿವ ಎನ್.ಹೆಚ್ ಶಿವಶಂಕರ ರೆಡ್ಡಿ (N. H. Shivashankara Reddy) ಅಸಮಾಧಾನ ಹೊರಹಾಕಿದ್ದಾರೆ.
Advertisement
ಜಿಲ್ಲೆಯ (Chikkaballapur) ಮಂಚೇನಹಳ್ಳಿಯಲ್ಲಿ `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಇಲ್ಲಿನ ಲೋಕಸಭಾ ಕ್ಷೇತ್ರದ (Lok Sabha Election 2024) ಕಾಂಗ್ರೆಸ್ (Congress) ಟಿಕೆಟ್ ಕೈ ತಪ್ಪುವ ಆತಂಕದ ಹಿನ್ನೆಲೆಯಲ್ಲೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಬೇಸರ ಹೊರಹಾಕಿದ್ದಾರೆ. ಡಿಕೆಶಿ ಸಹ ಸ್ಟ್ರೈಟ್ ಪೊಲಿಟಿಷಿಯನ್, ಆದರೆ ಸಿದ್ದರಾಮಯ್ಯ ಹಾಗೂ ಡಿಕೆಶಿಯವರನ್ನು ಪರಿಸ್ಥಿತಿಗಳು ಕಟ್ಟಿ ಹಾಕುತ್ತಿವೆ. ಎಲ್ಲೋ ಒಂದು ಕಡೆ ನಾನು ಸಿದ್ದರಾಮಯ್ಯ ಸಿಎಂ ಆಗಲಿ ಎಂದು ಹೇಳಿದ್ದ ಹೇಳಿಕೆ ಸಹ ಈಗ ನನಗೆ ಮುಳುವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಕಮಲ್ನಾಥ್ ಇಂದು, ಎಂದೆಂದಿಗೂ ಕಾಂಗ್ರೆಸ್ನಲ್ಲೇ ಇರುತ್ತಾರೆ: ದಿಗ್ವಿಜಯ್ ಸಿಂಗ್
Advertisement
Advertisement
ವೀರಪ್ಪ ಮೊಯ್ಲಿ ಹಾಗೂ ರಕ್ಷಾರಾಮಯ್ಯನವರು ಈ ಕ್ಷೇತ್ರದವರಲ್ಲ, ಅವರು ಹೊರಗಿನವರು. ನಾನು ಈ ಕ್ಷೇತ್ರದವನು. ನನಗೆ ಟಕೆಟ್ ಕೊಡಿ ಎಂಬ ಬೇಡಿಕೆ ಇಟ್ಟಿದ್ದೇನೆ. ಈ ಬೇಡಿಕೆಗೆ ಸಿದ್ದರಾಮಯ್ಯ ಹಾಗೂ ಡಿಕೆಶಿಯವರಿಂದ ನನಗೆ ಸಕಾರಾತ್ಮಕಾವಾದ ಸ್ಪಂದನೆ ಸಿಗುತ್ತಿಲ್ಲ. ನನಗೆ ಟಿಕೆಟ್ ಸಿಗತ್ತೋ? ಇಲ್ವೋ? ಎನ್ನುವ ಸಂಶಯ ಮೂಡಿದೆ. ಹಾಗಾಗಿ ನಾನು ಸ್ವಾಭಿಮಾನಕ್ಕೆ ಧಕ್ಕೆಯಾದರೆ ಯುದ್ಧ ಮಾಡಲು ತಯಾರಿದ್ದೇನೆ ಎಂದಿದ್ದಾರೆ. ಈ ಮೂಲಕ ಪರೋಕ್ಷವಾಗಿ ಬಿಜೆಪಿಗೆ ಹೋಗುವ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ: ಅಲ್ಲಿ ಆನೆ ತುಳಿದ್ರೆ 15 ಲಕ್ಷ ಕೊಡ್ತೀರಿ, ಇಲ್ಲಿ 5 ಲಕ್ಷ ನೀಡ್ತೀರಿ: ಹೆಚ್ಡಿಕೆ ಕೆಂಡಾಮಂಡಲ
Advertisement