ತಿರುವನಂತಪುರಂ: ಕಾಂಗ್ರೆಸ್ ಹಿರಿಯ ನಾಯಕ (Senior Congress leader) ಮತ್ತು ಎಂಟು ಬಾರಿ ಶಾಸಕರಾಗಿದ್ದ ಆರ್ಯಾದನ್ ಮೊಹಮ್ಮದ್(87) (Aryadan Mohammed) ನಿಧನರಾಗಿದ್ದಾರೆ.
ಮೂರು ಬಾರಿ ಸಚಿವರಾಗಿದ್ದ ಆರ್ಯದನ್ ಮೊಹಮ್ಮದ್ ಅವರು ಅನಾರೋಗ್ಯ ಸಮಸ್ಯೆಯಿಂದ ಕಳೆದ ಒಂದು ವಾರದಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 1977ರಿಂದ 2011ರವರೆಗೆ ಎಂಟು ಬಾರಿ ನಿಲಂಬೂರು ಕ್ಷೇತ್ರದಿಂದ (Nilambur constituency) ಪ್ರತಿನಿಧಿಸಿದ್ದರು. ಇ ಕೆ ನಾಯನಾರ್ ( E K Nayanar) ಮಂತ್ರಿಮಂಡಲದಲ್ಲಿ ಮೊದಲ ಬಾರಿಗೆ ಆರ್ಯಾದನ್ ಮೊಹಮ್ಮದ್ ಸಚಿವರಾಗಿದ್ದರು. ಜೊತೆಗೆ ಎ.ಕೆ. ಆಂಟನಿ (A K Antony) ಸಂಪುಟ ಮತ್ತು ಉಮ್ಮನ್ ಚಾಂಡಿ (Oommen Chandy) ನೇತೃತ್ವದ ಸರ್ಕಾರದಲ್ಲಿಯೂ ಸಚಿವರಾಗಿದ್ದರು.
ಕಳೆದ ಒಂದು ವಾರದಿಂದ ಐಸಿಯುವಿನಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದ ಆರ್ಯಾದನ್ ಮೊಹಮ್ಮದ್ ಭಾನುವಾರ ಕೊನೆಯುಸಿರೆಳೆದಿದ್ದು, ಸಾರ್ವಜನಿಕರು ಅವರ ಅಂತಿಮ ದರ್ಶನ ಡೆದ ನಂತರ ಪಾರ್ಥಿವ ಶರೀರವನ್ನು ನಿಲಂಬೂರಿಗೆ (Nilambur) ಕೊಂಡೊಯ್ಯಲಾಗುವುದು ಮತ್ತು ಸೋಮವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಅವರ ಪುತ್ರ ಆರ್ಯಾದನ್ ಶೌಕತ್ (Aryadan Shoukath ) ತಿಳಿಸಿದ್ದಾರೆ.
ಆರ್ಯಾದನ್ ಮೊಹಮ್ಮದ್ ನಿಧನಕ್ಕೆ ಹಲವಾರು ರಾಜಕೀಯ ನಾಯಕರು ಕಂಬನಿ ಮಿಡಿದಿದ್ದು, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ಅವರು ಕೂಡ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್-ಬಿಜೆಪಿ ತಿಕ್ಕಾಟದ ನಡುವೆ ರೈತರಿಂದ ಶುರುವಾಯ್ತು ಪೇ ಫಾರ್ಮರ್ ಅಭಿಯಾನ
ಮೊಹಮ್ಮದ್ ಎಡಪಂಥಿಯ ಪಕ್ಷದೊಂದಿಗೆ ಮತ್ತು ವಿರುದ್ಧವಾಗಿ ಕೆಲಸ ಮಾಡಿದ ರಾಜಕೀಯ ಅನುಭವವನ್ನು ಹೊಂದಿದ್ದರು. ಅವರು ಹೆಸರಾಂತ ಶಾಸಕರಾಗಿದ್ದರು. ಯಾವಾಗಲೂ ಜಾತ್ಯತೀತ ಮೌಲ್ಯಗಳನ್ನು ಎತ್ತಿ ಹಿಡಿದಿದ್ದರು ಎಂದು ಪಿಣರಾಯಿ ವಿಜಯನ್ ತಿಳಿಸಿದ್ದಾರೆ.