ಹೈದರಾಬಾದ್: 13 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ 72 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಹೈದರಾಬಾದ್ನ ಕಾನೂನು ಪುಸ್ತಕಗಳ ಲೇಖಕ ಹಾಗೂ ಪ್ರಕಾಶಕನಾಗಿರುವ ಗಾದೆ ವೀರಾ ರೆಡ್ಡಿ ಬಂಧಿತ ಆರೋಪಿ.
Advertisement
ಸಂತ್ರಸ್ತ ಬಾಲಕಿಯ ತಾಯಿ ಆರೋಪಿಯ ಮನೆಯಲ್ಲಿ ಕೆಲಸದ ಆಳಾಗಿದ್ದಳು. ಹೀಗಿರುವಾಗ ವೀರಾ ರೆಡ್ಡಿ ಅಪ್ರಾಪ್ತ ಬಾಲಕಿಯ ಮನೆಗೆ ನುಗ್ಗಿ ಅನುಚಿತವಾಗಿ ವರ್ತಿಸಿದ್ದ ಎನ್ನಲಾಗಿದೆ. ತಾಯಿ ಆಕೆಯನ್ನು ಸಹೋದರನ ಮನೆಯಲ್ಲಿ ಬಿಟ್ಟು ಊರಿಗೆ ಹೋದಾಗಲೂ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭಕ್ಕೆ ಕಾದು ಕುಳಿತು ನಂತರ ಮನೆಗೆ ನುಗ್ಗಿ ಲೈಂಗಿಕ ಕಿರುಕುಳ ನೀಡಿದ್ದಾಗಿ ಆರೋಪಿಸಲಾಗಿದೆ. ಇದನ್ನೂ ಓದಿ: ವಾಷಿಂಗ್ಟನ್ ಸುಂದರ್ಗೆ ಕೊರೊನಾ – ಜಯಂತ್ ಯಾದವ್ಗೆ ಒಲಿದ ಅದೃಷ್ಟ
Advertisement
ಸಂತ್ರಸ್ತ ಬಾಲಕಿ ಘಟನೆಯ ಬಗ್ಗೆ ತಾಯಿಗೆ ತಿಳಿಸಿದ್ದು, ಮೀರ್ಪೇಟ್ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಆರೋಪಿ ದೂರನ್ನು ಹಿಂತೆಗೆದುಕೊಳ್ಳುವಂತೆ ಒತ್ತಡ ಹಾಕಿದ್ದ. ಇಲ್ಲವಾದಲ್ಲಿ ಕಿರಿಕುಳದ ಆರೋಪದಲ್ಲಿ ತಮ್ಮ ಹೆಸರನ್ನು ಬರೆದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್ನಲ್ಲಿ ಕಂಚು ಗೆದ್ದಿದ್ದ ಬಾಕ್ಸರ್ ಲವ್ಲಿನಾ ಈಗ ಡಿಎಸ್ಪಿ
Advertisement
Advertisement
ಆರೋಪಿ ಗಾದೆ ವೀರಾ ರೆಡ್ಡಿ ಮೇಲೆ 13 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಕೇಸ್ ದಾಖಲಿಸಿ ಬಂಧಿಸಲಾಗಿದೆ. ಮೀರ್ಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.