ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಛಾಯಾಗ್ರಾಹಕರಾದ ಎಸ್.ವಿ ಶ್ರೀಕಾಂತ್(87) ಅವರು ಗುರುವಾರ ಸಂಜೆ ಬೆಂಗಳೂರಿನ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ.
“ಟ್ರಿಕ್ ಫೋಟೋಗ್ರಫಿ ಎಕ್ಸ್‌ಪರ್ಟ್” ಎಂದೇ ಹೆಸರಾಗಿದ್ದ ಎಸ್.ವಿ ಶ್ರೀಕಾಂತ್ ಅವರು ದ್ವಿಪಾತ್ರ ಪ್ರಯೋಗಗಳನ್ನು ಮಾಡಿ ಸೈ ಎನಿಸಿಕೊಂಡಿದ್ದರು. ‘ಗೆಜ್ಜೆ ಪೂಜೆ’, ‘ಉಪಾಸನೆ’ ಹಾಗೂ ‘ಮಾರ್ಗದರ್ಶಿ’ ಚಿತ್ರಗಳ ಛಾಯಾಗ್ರಾಹಣಕ್ಕೆ ಶ್ರೀಕಾಂತ್ ಅವರಿಗೆ ರಾಜ್ಯ ಪ್ರಶಸ್ತಿ ಸಹ ಒಲಿದಿದೆ.
Advertisement
Advertisement
1960ರಿಂದ 40 ವರ್ಷಗಳ ಕಾಲ 60 ಕ್ಕೂ ಹೆಚ್ಚು ಚಿತ್ರಗಳಿಗೆ ಶ್ರೀಕಾಂತ್ ಅವರು ಕೆಲಸ ಮಾಡಿದ್ದಾರೆ. ವರನಟ ಡಾ. ರಾಜಕುಮಾರ್ ಅವರ ಅನೇಕ ಚಿತ್ರಗಳಿಗೆ ಶ್ರೀಕಾಂತ್ ಅವರು ಛಾಯಾಗ್ರಾಹಣ ಮಾಡಿದ್ದಾರೆ. ಅದರಲ್ಲಿ ‘ಬಬ್ರುವಾಹನ’ ಸಿನಿಮಾ ಸದಾ ಮನಸಿನಲ್ಲಿ ಉಳಿಯುಯುವುದು. ಯಾಕೆಂದರೆ ಆಗಿನ ಕಾಲದಲ್ಲಿಯೇ ಟ್ರಿಕ್ ಶಾಟ್ಸ್ ಬಳಸಿ ಶ್ರೀಕಾಂತ್ ಅವರು ಛಾಯಾಗ್ರಾಹಣ ಮಾಡಿದ್ದರು.
Advertisement
‘ಸಾಕ್ಷಾತ್ಕಾರ’, ‘ಗೆಜ್ಜೆಪೂಜೆ’, ‘ಬಬ್ರುವಾಹನ’, ‘ಮಾರ್ಗದರ್ಶಿ’, ‘ಉಪಾಸನೆ’, ‘ಜೀವನ ಚೈತ್ರ’, ‘ತ್ರಿಮೂರ್ತಿ’ ಮುಂತಾದವರು ಅವರ ಪ್ರಮುಖ ಸಿನಿಮಾಗಳಿಗೆ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ‘ಸ್ವರ್ಣ ಗೌರಿ’, ‘ಪ್ರೇಮಮಯಿ’, ‘ಮನಸಿದ್ದರೆ ಮಾರ್ಗ’, ‘ಬಹಾದ್ದೂರ್ ಗಂಡು’, ‘ನಾ ನಿನ್ನ ಬಿಡಲಾರೆ’, ‘ಹಣ್ಣಲೇ ಚಿಗುರಿದಾಗ’, ‘ಅದೇ ಕಣ್ಣು’, ‘ಶ್ರಾವಣ ಬಂತು’, ‘ರಾಣಿ ಮಹಾರಾಣಿ’, ‘ವಿಜಯ್ ವಿಕ್ರಮ್’, ‘ಎಡಕಲ್ಲು ಗುಡ್ಡದ ಮೇಲೆ’ ಹಾಗೂ ಇನ್ನಿತರ ಸಿನಿಮಾಗಳು ಶ್ರೀಕಾಂತ್ ಅವರ ಛಾಯಾಗ್ರಾಹಣದಲ್ಲಿ ಮೂಡಿಬಂದಿದೆ.