ಮುಂಬೈ: ಐಎಎಸ್ ಅಧಿಕಾರಿಗಳ ಪುತ್ರಿಯೊಬ್ಬಳು ಸೋಮವಾರ (ಇಂದು) ಮುಂಜಾನೆ ಮುಂಬೈನ (Mumbai) ಬಹುಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಾರಾಷ್ಟ್ರ ಕೇಡರ್ IAS ಅಧಿಕಾರಿಗಳಾದ ರಾಧಿಕಾ ಮತ್ತು ವಿಕಾಸ್ ರಸ್ತೋಗಿ ಅವರ ಪುತ್ರಿ ಲಿಪಿ ರಸ್ತೋಗಿ (27) ಆತ್ಮಹತ್ಯೆಗೆ ಶರಣಾದ ಯುವತಿ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಿಸದೇ ಆಕೆ ಮೃತಪಟ್ಟಿದ್ದಾಳೆ.
Advertisement
Advertisement
ಕಾನೂನು ವಿದ್ಯಾರ್ಥಿನಿಯಾಗಿದ್ದ ಲಿಪಿ, ಇಂದು ಮುಂಜಾನೆ 4 ಗಂಟೆ ಸುಮಾರಿಗೆ ರಾಜ್ಯ ಸಚಿವಾಲಯದ ಬಳಿಯ ಕಟ್ಟಡದ 10ನೇ ಮಹಡಿಯಿಂದ ಜಿಗಿದಿದ್ದಾರೆ. ಆಕೆಯ ಕೋಣೆಯಲ್ಲಿ ಡೆತ್ ನೋಟ್ ಒಂದು ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಲಿಪಿ ಹರಿಯಾಣದ ಸೋನೆಪತ್ನಲ್ಲಿ ಕಾನೂನು ವ್ಯಾಸಾಂಗ ಮಾಡುತ್ತಿದ್ದಳು. ಪೊಲೀಸ್ ಅಧಿಕಾರಿಗಳ ಪ್ರಕಾರ, ಅವಳು ಪರೀಕ್ಷೆಗಳ ಬಗ್ಗೆ ಆತಂಕದಲ್ಲಿದ್ದಳು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಭವಾನಿ ರೇವಣ್ಣಗೆ ಬಂಧನದ ಭೀತಿ – ಹೆಚ್ಡಿಕೆ ರಿಯಾಕ್ಷನ್ ಏನು?
Advertisement
ವಿಕಾಸ್ ರಸ್ತೋಗಿ ಮಹಾರಾಷ್ಟ್ರದ ಶಿಕ್ಷಣ ಇಲಾಖೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿದ್ದರೆ, ರಾಧಿಕಾ ರಸ್ತೋಗಿ ರಾಜ್ಯದ ಗೃಹ ಇಲಾಖೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.