ಉಡುಪಿ: ಬಿಜೆಪಿ (BJP) ಹಾಗೂ ಆರ್‌ಎಸ್‌ಎಸ್ (RSS) ಹಿರಿಯ ಮುಖಂಡರಾಗಿದ್ದ ಸೋಮಶೇಖರ ಭಟ್ (Somashekar Bhat) (89) ಅವರು ವಯೋಸಹಜ ಕಾಯಿಲೆಯಿಂದ ಭಾನುವಾರ ನಿಧನರಾಗಿದ್ದಾರೆ.
ಉಡುಪಿ (Udupi) ಪುರಸಭೆಯ ಮಾಜಿ ಅಧ್ಯಕ್ಷರಾಗಿದ್ದ ಸೋಮಶೇಖರ ಭಟ್ ಎಲ್‌ಕೆ ಅಡ್ವಾಣಿ, ಬಿಎಸ್‌ವೈ, ಡಾ.ವಿಎಸ್ ಆಚಾರ್ಯ ಹಾಗೂ ಬಿಜೆಪಿಯ ಹಿರಿಯ ಮುಖಂಡರೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದರು. ಇದೀಗ ವಯೋಸಹಜ ಖಾಯಿಲೆಯಿಂದ ಮೃತಪಟ್ಟಿದ್ದಾರೆ. ಜನಸಂಘದ ಹಿರಿಯ ನಾಯಕರಾದ ಇವರು ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಪಾರ್ಟಿಯನ್ನು ಕಟ್ಟಿ ಬೆಳೆಸಿದ್ದರು. ಇದನ್ನೂ ಓದಿ: ಮೋದಿ ಪೋಸ್ಟರ್ ವಿರೂಪ – ಮಹಾರಾಷ್ಟ್ರದ ಯುವ ಮೋರ್ಚಾ ಕಾಂಗ್ರೆಸ್ ಅಧ್ಯಕ್ಷ ಅರೆಸ್ಟ್
ಇವರ ನಿಧನಕ್ಕೆ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ ರಾಘವೇಂದ್ರ ಕಿಣಿ, ಉಡುಪಿ ಮಾಜಿ ಶಾಸಕ ರಘುಪತಿ ಭಟ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಜೈಲು ಸೇರಿದ್ದವರಿಂದ ದೂರು ಕೊಟ್ಟವರ ಮೇಲೆ ಹಲ್ಲೆ ಆರೋಪ