ಶಿವಮೊಗ್ಗ: ವರುಣಾ ಕ್ಷೇತ್ರದ ಕುರಿತು ವರಿಷ್ಟರು ಮುಂಚೆಯೇ ತಿಳಿಸಿದ್ದರೆ, ವಿಜಯೇಂದ್ರ ವರುಣಾಕ್ಕೆ ತೆರಳುತ್ತಿರಲಿಲ್ಲ. ಈಗ ವರುಣಾದಲ್ಲಿ ಏರ್ಪಟ್ಟಿದ್ದ ಗೊಂದಲ ಬಗೆ ಹರಿದಿದೆ ಅಂತ ಅಮಿತ್ ಶಾ ಸಂದಾನ ಬಳಿಕ ಮೊದಲ ಬಾರಿ ಬಿಎಸ್‍ವೈ ಮನೆಗೆ ಭೇಟಿ ಕೊಟ್ಟ ಈಶ್ವರಪ್ಪ ಹೇಳಿದರು.
ಬಾದಾಮಿ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರ ಮಾಡಿಕೊಂಡಿರುವ ಸಿದ್ದರಾಮಯ್ಯ, ನಾಮಪತ್ರ ಸಲ್ಲಿಸಿದ್ದಾರೆ ಎಂದು ಬಿಎಸ್ ಯಡಿಯೂರಪ್ಪ ಟೀಕಿಸಿದ್ದಾರೆ. ಸಿಎಂ ಅವರು ಇಲ್ಲಿ ಯಶಸ್ವಿ ಆಗೋದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಅವರ ಸಮುದಾಯದವರು ಹೆಚ್ಚು ಇದ್ದರೂ ಕೂಡ ಬದಾಮಿ ಕ್ಷೇತ್ರದಲ್ಲಿ ಗೆಲ್ಲುವುದು ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರೇ ಅಂದ್ರು. ಇದನ್ನೂ ಓದಿ; ವರುಣಾ ಕ್ಷೇತ್ರದಿಂದ ವಿಜಯೇಂದ್ರಗೆ ಬಿಜೆಪಿ ಟಿಕೆಟ್ ಇಲ್ಲ
ವಿಜಯೇಂದ್ರ 20 ದಿನಗಳಲ್ಲಿ ವರುಣಾ ಕ್ಷೇತ್ರದಲ್ಲಿ ಹೆಚ್ಚಿನ ಜನಬೆಂಬಲ ಗಳಿಸಿರುವ ಹಿನ್ನೆಲೆಯಲ್ಲಿ, ರಾಷ್ಟ್ರಿಯ ನಾಯಕರು ವಿಜಯೇಂದ್ರರನ್ನ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಕ್ಷದ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿರೋಣ: ವಿಜಯೇಂದ್ರ