ಬೆಂಗಳೂರು: ಗ್ರಾಮೀಣ ಭಾಗದ ರೈತಾಪಿ ಹಾಗೂ ಬಡ ಜನರ ಅನುಕೂಲಕ್ಕಾಗಿ ಹಿರಿಯ ಚಿತ್ರನಟಿ ಡಾ. ಲೀಲಾವತಿ ನಿರ್ಮಾಣ ಮಾಡಿರುವ ಆಸ್ಪತ್ರೆಗೆ ಮತ್ತೆ ಸಂಕಷ್ಟ ಎದುರಾಗಿದೆ.
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿ 2009ರಲ್ಲಿ ಲೀಲಾವತಿಯವರು ತಮ್ಮ ಸ್ವಂತ ಜಮೀನಿನಲ್ಲಿ ಆಸ್ಪತ್ರೆ ನಿರ್ಮಾಣ ಮಾಡಿದ್ದರು. ನಂತರ ಆಸ್ಪತ್ರೆಯನ್ನು ಸರ್ಕಾರದ ಸ್ವಾಧೀನಕ್ಕೆ ನೀಡಿ, ನೆಲಮಂಗಲ ಆಡಳಿತ ವೈದ್ಯಾಧಿಕಾರಿ ಹೆಸರಿಗೆ ದಾಖಲಾತಿಗಳನ್ನು ವರ್ಗಾವಣೆ ಮಾಡಿದ್ದಾರೆ. ಆದರೆ ಆಸ್ಪತ್ರೆ ನಿರ್ಮಾಣ ಮಾಡಿ ಸರ್ಕಾರದ ಸ್ವಾಧೀನಕ್ಕೆ ನೀಡಿದ್ದರು. ಇದುವರೆಗೂ ಸೂಕ್ತ ವೈದ್ಯರಿಲ್ಲದೆ ಆಸ್ಪತ್ರೆ ಸದಾ ಕಾಲ ಬಾಗಿಲು ಮುಚ್ಚಿರುವ ಸ್ಥಿತಿಯಲ್ಲೇ ಇರುತ್ತದೆ.
Advertisement
Advertisement
ಕಳೆದ ವರ್ಷ ದುಷ್ಕರ್ಮಿಗಳ ಗುಂಪೊಂದು ಆಸ್ಪತ್ರೆಯ ಮೇಲ್ಚಾವಣಿ ಸೇರಿದಂತೆ ಪೀಠೋಪಕರಣಗಳನ್ನು ಧ್ವಂಸಗೊಳಿಸಿತ್ತು. ಇಂತಹ ಘಟನೆಗಳನ್ನು ನಿಯಂತ್ರಿಸಲು ನೆಲಮಂಗಲ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿಗಳು ಲೀಲಾವತಿ ಅವರಿಗೆ ಹಾಗೂ ಆಸ್ಪತ್ರೆಗೆ ಸೆಕ್ಯೂರಿಟಿ ಗಾರ್ಡ್ ನೇಮಿಸುವಂತೆ ತಿಳಿಸಿತ್ತು. ಆದರೆ ಇದುವರೆಗೂ ಅವರಿಗೆ ಸಂಬಳ ನೀಡದೆ ಆರೋಗ್ಯ ಇಲಾಖೆ ಸತಾಯಿಸುತ್ತಲೆ ಬಂದಿದೆ. ಸೆಕ್ಯೂರಿಟಿ ಗಾರ್ಡ್‍ಗಳನ್ನೂ ಸ್ವತಃ ಲೀಲಾವತಿ ಅವರೇ ನಿಭಾಯಿಸಿಕೊಳ್ಳುತ್ತಾ ಬಂದಿದ್ದಾರೆ.
Advertisement
Advertisement
ಈ ಹಿಂದಿನ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಯು.ಟಿ ಖಾದರ್ ಹಾಗೂ ರಮೇಶ್ ಕುಮಾರ್ ಸಹ ಆಸ್ಪತ್ರೆಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದ್ದರು. ಆದರೆ ಎಲ್ಲಾ ಭರವಸೆಗಳು ಇತ್ತೀಚೆಗೆ ಹುಸಿಯಾಗಿದೆ. ಕಳೆದ ಕೆಲ ದಿನಗಳಿಂದ ಮಂಜುಳಾ ಎನ್ನುವ ವೈದ್ಯೆ ಆಸ್ಪತ್ರೆಗೆ ಬರುತ್ತಿದ್ದರು. ಆದರೆ ತಾಲೂಕು ಆಸ್ಪತ್ರೆ ಮುಖ್ಯ ವ್ಯವಸ್ಥಾಕ ಅಧಿಕಾರಿ ನರಸಿಂಹಯ್ಯ ಆಸ್ಪತ್ರೆಗೆ ಬಾಗಿಲು ಹಾಕಿಕೊಂಡು ಬರುವಂತೆ ಸೂಚನೆ ನೀಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv