ರೇಣುಕಾಸ್ವಾಮಿ (Renuka swamy) ಹತ್ಯೆ ಕೇಸ್ ನಲ್ಲಿ ಜೈಲು ಪಾಲಾಗಿರೋ ನಟ ದರ್ಶನ್ (Darshan) ನೆನೆದು ಕಣ್ಣೀರಿಟ್ಟಿದ್ದಾರೆ ಹಿರಿಯ ನಟ ಟೆನ್ನಿಸ್ ಕೃಷ್ಣ (Tennis Krishna). ಪಬ್ಲಿಕ್ ಟಿವಿ ಜೊತೆ ಎಕ್ಸ್ ಕ್ಲೂಸಿವ್ ಆಗಿ ಮಾತನಾಡಿದ ಟೆನ್ನಿಸ್ ಕೃಷ್ಣ, ದರ್ಶನ್ ಜೊತೆಗಿನ ಒಡನಾಟವನ್ನೂ ಹಂಚಿಕೊಂಡಿದ್ದಾರೆ.
Advertisement
ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ‘ದರ್ಶನ್ ಚಿತ್ರರಂಗಕ್ಕೆ ಬರುವ ಮುನ್ನ ಪರಿಚಯ. ಅದಾದ ಬಳಿಕ ಪಿಠೀಲು ಚೌಡಯ್ಯ ಮೆಮೊರಿಯಲ್ ಹಾಲ್ ನಲ್ಲಿ ನೋಡಿದೆ. ನಂತರ ಕತ್ರಿಗುಪ್ಪೆಲಿ ಶೂಟಿಂಗ್ ಟೈಂ ನೋಡಿದ್ದೆ. ದರ್ಶನ್ ನನ್ನ ಪಕ್ಕ ಕೈ ಕಟ್ಕೊಂಡು ನಿಂತಿದ್ರು. ಹಿರಿಯ ಕಲಾವಿದರಿಗೆ ಗೌರವ ಕೊಡ್ತಿದ್ರು. ನನ್ಗೆ ತುಂಬಾ ಅವಮಾನ ಮಾಡ್ತಿದ್ದಾರೆ ಅಂತಾ ದರ್ಶನ್ ಹೇಳಿದ್ರು. ನಾನು ಅವತ್ತು ಒಂದು ಮಾತ್ ಹೇಳಿದೆ. ಈವಾಗ ಕೈಕಟ್ಕೊಂಡು ನಿಲ್ಲಿ.. ಇವತ್ತು ಅವಮಾನ ಮಾಡಿದವ್ರು ನಿಮ್ಮುಂದೆ ಕೈಕಟ್ಕೊಂಡು ನಿಲ್ಲುವ ಟೈಂ ಬರುತ್ತೆ’ ಎಂದಿದ್ದರು.
Advertisement
Advertisement
ಮುಂದುವರೆದು ಮಾತನಾಡಿದ ಕೃಷ್ಣ, ‘ಸ್ಟಾರ್ ಗಿರಿ ಬಂದ ಮೇಲೂ ದರ್ಶನ್ ಬದಲಾಗಲಿಲ್ಲ. ಈ ಕೇಸ್ ನಲ್ಲಿ ಯಾಕಾಯ್ತು ಏನಾಯ್ತು ನನ್ಗೆ ಗೊತ್ತಿಲ್ಲ. ದರ್ಶನ್ ಬಹಳಷ್ಟು ಜನಕ್ಕೆ ಸಹಾಯ ಮಾಡಿದ್ದಾರೆ. ವಿಷ್ಣು ಸರ್, ರಾಜಣ್ಣ ನೆನಿಸ್ಕೊತೀನಿ. ಅವ್ರಿಬ್ಬರು ಚಿತ್ರರಂಗಕ್ಕೆ ಎರಡು ಕಣ್ಣು ಇದ್ದಂಗೆ. ದರ್ಶನ್ ಆ ಇಬ್ಬರು ನಟರ ಮಟ್ಟಕ್ಕೆ ಬೆಳೆದಿದ್ರು. ದರ್ಶನ್ ಜೊತೆ ಬುಲ್ ಬುಲ್ ಸಿನಿಮಾದಲ್ಲಿ ಒಳ್ಳೆ ಪಾತ್ರ ಮಾಡಿದೆ. ದರ್ಶನ್ ಜೊತೆ ಮತ್ತೆ ಸಿನಿಮಾ ಮಾಡುವ ಟೈಂ ಬರಲಿಲ್ಲ’ ಎಂದು ನೆನಪಿನ ಸುರುಳಿಯನ್ನು ಬಿಚ್ಚಿಟ್ಟಿದ್ದಾರೆ.
Advertisement
‘ಬಂಡವಾಳ ಹೂಡಿದ ನಿರ್ಮಾಪಕರು ಉಳಿಬೇಕು. ಕಾನೂನು ವ್ಯವಸ್ಥೆಯಲ್ಲಿ ಏನಾಗುತ್ತೆ ಆಗ್ಲಿ. ಅವ್ರು ತಪ್ಪು ಮಾಡಿದ್ರೆ ಶಿಕ್ಷೆ ಆಗ್ಲಿ. ತಪ್ಪು ಮಾಡಿಲ್ಲ ಅಂದ್ರೆ ಆಚೆ ಬಂದು ದರ್ಶನ್ ಸಿನಿಮಾ ಮಾಡಲಿ. ರೇಣುಕಾಸ್ವಾಮಿ ಕುಟುಂಬಸ್ಥರು ತುಂಬಾ ಅಮಾಯಕರು. ದರ್ಶನ್ ಜೊತೆ ಇದ್ದವರು ಒಳ್ಳೆಯವ್ರಲ್ಲ.. ಅದು ದರ್ಶನ್ ಗೂ ಗೊತ್ತಿರಲಿಲ್ಲ. ಈಗ್ಲೂ ಪರಪ್ಪನ ಅಗ್ರಹಾರಕ್ಕೆ ಜೈಲಿಗೆ ಮೀಟ್ ಮಾಡೋಕೆ ಹೋಗಿ ವಾಪಾಸ್ ಬಂದಿದ್ದೀನಿ. ಅಭಿಮಾನಿಗಳಿಗೆ ಒಂದು ಮಾತು ಸಿನಿಮಾ ಮಾಡಿದಾಗ ಜೈ ಅನ್ನೋದಲ್ಲ.. ಉಪವಾಸ ಸತ್ಯಾಗ್ರಹ ಮಾಡ್ಲಿ.. ಮೌನ ವ್ರತ ಮಾಡಲಿ.. ಇದಕ್ಕೆ ನಾವು ರೆಡಿ ಇದ್ದೀವಿ ಈ ಕೇಸ್ ನಿಂದ ದರ್ಶನ್ ಆಚೆ ಬರ್ತಾರೆ. ದರ್ಶನ್ ಒಳ್ಳೆಯವ್ರು ಅವ್ರ ಬಗ್ಗೆ ಮಾತಾಡುವಾಗ ಮಾತೇ ಬರೊಲ್ಲ ಎನ್ನುವುದು ಕೃಷ್ಣ ಮಾತು.