ಮಡಿಕೇರಿ: ಇತ್ತೀಚಿನ ವರ್ಷಗಳಲ್ಲಿ ಸಾಹಿತ್ಯ ಉತ್ಸವ ಆಡಂಬರದಿಂದ ವೈಭವೀಕರಣವಾಗುತ್ತಿದೆ, ಅದರಿಂದ ಏನೂ ಫಲವಿಲ್ಲ ಎಂದು ಮುಖ್ಯಮಂತ್ರಿ ಚಂದ್ರು (Mukhyamantri Chandru) ಬೇಸರ ವ್ಯಕ್ತಪಡಿಸಿದ್ದಾರೆ.
Advertisement
ಮಡಿಕೇರಿಯಲ್ಲಿ ʻಪಬ್ಲಿಕ್ ಟಿವಿʼಯೊಂದಿಗೆ ಮಾತಾನಾಡಿದ ಅವರು, ಸಾಹಿತ್ಯ ಸಮ್ಮೇಳನಕ್ಕೆ (Sahitya Sammelana) ಸಾಹಿತ್ಯ ವರ್ಚಸ್ಸು ಇರುವ ವ್ಯಕ್ತಿಗಳನ್ನೇ ಅಯ್ಕೆ ಮಾಡಿಕೊಳ್ಳುವ ಅಗತ್ಯ ಇದೆ. ಚುನಾವಣಾ ರೀತಿಯ ತೆಗೆದುಕೊಂಡು ಬಂದು ಯಾರು ಬೇಕಾದರೂ ಆಗಬಹುದು ಅನ್ನೋ ರೀತಿಯಲ್ಲಿ ಅಗಬರದು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಆಂಗ್ಲ ಮಾಧ್ಯಮ ಶಾಲೆಗಳು ತೆರೆಯುವುದನ್ನು ಸರ್ಕಾರ ಕೂಡಲೇ ನಿಲ್ಲಿಸಬೇಕು: ಗೊ.ರು.ಚನ್ನಬಸಪ್ಪ ಹಕ್ಕೊತ್ತಾಯ
Advertisement
Advertisement
ಸಾಹಿತ್ಯ ಸಮ್ಮೇಳನ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದೆ, ಇನ್ಮುಂದೆ ಇದು ಆಗಬಾರದು. ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯ ಮುಂದಿನ ಸಮ್ಮೇಳನದೊಳಗೆ ಪಾಲನೆ ಆಗದಿದ್ದರೆ, ಅದನ್ನು ಖಂಡಿಸುವಂತಾಗಬೇಕು. ಸರ್ಕಾರಕ್ಕೆ ಎಚ್ಚರಿಕೆ ಕೊಡುವ ರೀತಿಯಲ್ಲಿ ಇಂತಹ ನಿರ್ಧಾರ ಕೈಗೊಳ್ಳಬೇಕು. ಆದರೀಗ ಸರ್ಕಾರದ ಹಣದಲ್ಲಿ ಕಾರ್ಯಕ್ರಮ ಆಗುತ್ತಿರುವುದರಿಂದ ಅವರೂ ಸರ್ಕಾರ ಟೀಕೆ ಮಾಡೋದಕ್ಕೆ ಆಗದ ಸ್ಥಿತಿಯಲ್ಲಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೀಪ ಬೆಳಗುವ ಮೂಲಕ ಅಕ್ಷರ ಜಾತ್ರೆಗೆ ಸಿಎಂ ಚಾಲನೆ
Advertisement
ಇನ್ನೂ ಕನ್ನಡ ಶಾಲೆ ಉಳಿವಿಗಾಗಿ ಸಮ್ಮೇಳನಾಧ್ಯಕ್ಷರು ಸರ್ಕಾರಕ್ಕೆ ಮನವಿ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಉತ್ತಮ ಸೌಲಭ್ಯ ಇರುವಂತಹ ಶಾಲೆಗಳನ್ನು ಮಾಡಿದ್ರೆ ಕನ್ನಡ ಶಾಲೆಗಳು ಉಳಿಯುತ್ತವೆ, ಕನ್ನಡವೂ ಉಳಿಯುತ್ತದೆ. ಇಲ್ಲಿ ಆಂಗ್ಲ ಭಾಷೆಯನ್ನೂ ಕಲಿಸಬಹುದು. ಆದ್ರೆ ರಾಜ್ಯದ 56 ಶಾಲೆಗಳಿಗೆ ಶಿಕ್ಷಕರೇ ಇಲ್ಲ ಹುಡುಗರು ಪಾಸ್ ಆಗಬೇಕು ಅಂದ್ರೆ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ ಆಂಗ್ಲ ಭಾಷೆಯಲ್ಲಿ ಇಂದು ವಿದ್ಯಾರ್ಥಿಗಳು ಪೋಷಕರಿಂದಾಗಲಿ ಅಥವಾ ಕನ್ನಡ ಶಾಲೆಗಳಿಂದಾಗಲಿ ಫೇಲಾಗುತ್ತಿಲ್ಲ. ಸರ್ಕಾರದ ವ್ಯವಸ್ಥೆಯಿಂದ ಫೇಲಾಗುತ್ತಿದ್ದಾರೆ ಎಂದರಲ್ಲದೇ ನಾವೆಲ್ಲ ಓದಿದ್ದು ಕನ್ನಡ ಶಾಲೆಯಲ್ಲೇ, ಸಿದ್ದರಾಮಯ್ಯ ಓದಿರುವುದು ಸಹ ಕನ್ನಡ ಶಾಲೆಯಲ್ಲೇ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜಗತ್ತಿನ ಯಾರೇ ಬಂದರೂ ಅವರಿಗೆ ಕನ್ನಡ ಕಲಿಸುತ್ತೇವೆ ಎಂಬ ದಿಟ್ಟತನ ಮಂಡ್ಯ ಜನರದ್ದು – ಸಿಎಂ