ನವದೆಹಲಿ: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ತಮ್ಮ ಹಿರಿಯ ಸಹೋದರ ಎಂದು ಕರೆದಿರುವ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಇಂತಹ ಹೇಳಿಕೆಯನ್ನು ನೀಡುವ ಬದಲು ತಮ್ಮ ಮಕ್ಕಳನ್ನು ಗಡಿಗೆ ಕಳುಹಿಸುವಂತೆ ಸಂಸದ ಗೌತಮ್ ಗಂಭೀರ್ ಸಲಹೆ ನೀಡಿದ್ದಾರೆ.
Advertisement
ಭಯೋತ್ಪಾದಕ ರಾಷ್ಟ್ರದ ಪ್ರಧಾನಿಯನ್ನು ಅಣ್ಣನೆಂದು ಕರೆದಿರುವುದು ನಾಚಿಕೆಗೇಡಿನ ಸಂಗತಿ. ಮೊದಲು ನಿಮ್ಮ ಮಗ ಅಥವಾ ಮಗಳನ್ನು ರಾಷ್ಟ್ರಕ್ಕಾಗಿ ಹೋರಾಡಲು ಕಳುಹಿಸಿ. ಆನಂತರ ಭಯೋತ್ಪಾದಕ ರಾಷ್ಟ್ರದ ಪ್ರಧಾನಿಯನ್ನು ಅಣ್ಣನೆಂದು ಕರೆಯಿರಿ ಎಂದು ಗಂಭೀರ್ ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಪಾಕ್ ಪ್ರಧಾನಿ ಇಮ್ರಾನ್ ಖಾನ್ ನನ್ನ ದೊಡ್ಡಣ್ಣ – ಮತ್ತೆ ವಿವಾದ ಸೃಷ್ಟಿಸಿದ ನವಜೋತ್ ಸಿಂಗ್
Advertisement
Advertisement
ಕಳೆದ ಒಂದು ತಿಂಗಳಿಂದ ಕಾಶ್ಮೀರದ ಪಾಕಿಸ್ತಾನಿ ಭಯೋತ್ಪಾದಕರು ನಮ್ಮ ದೇಶದ 40ಕ್ಕೂ ಹೆಚ್ಚು ಸೈನಿಕರನ್ನು ಹಾಗೂ ನಾಗರಿಕರನ್ನು ಕೊಂದಿದ್ದಾರೆ ಎಂದು ಸಿಧು ನೆನಪಿಸಿಕೊಳ್ಳುತ್ತಾರೆಯೇ ಎಂದು ಸಂಸದ ಪ್ರಶ್ನಿಸಿದ್ದಾರೆ.
Advertisement
Send ur son or daughter to the border & then call a terrorist state head ur big brother! #Disgusting #Spineless
— Gautam Gambhir (@GautamGambhir) November 20, 2021
ಶನಿವಾರ ಪಾಕಿಸ್ತಾನದ ಕರ್ತಾರ್‌ಪುರ ಸಾಹಿಬ್ ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸಿದ್ದ ಸಿಧು, ಇಮ್ರಾನ್ ಖಾನ್ ಅವರನ್ನು ಹೊಗಳಿದ್ದರು. ಇಮ್ರಾನ್ ಖಾನ್ ನನ್ನ ಹಿರಿಯ ಅಣ್ಣ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಇಮ್ರಾನ್ ಅವರು ಸಾಕಷ್ಟು ಪ್ರೀತಿಯನ್ನು ನೀಡಿದ್ದಾರೆ ಎಂದಿದ್ದರು. ಇದನ್ನೂ ಓದಿ: ವಿದರ್ಭ ವಿರುದ್ಧ ಕರ್ನಾಟಕಕ್ಕೆ ರೋಚಕ ಜಯ – ಫೈನಲ್‍ಗೆ ಲಗ್ಗೆ
ಈ ಹಿಂದೆ ಟೀಂ ಇಂಡಿಯಾದ ಮಾಜಿ ಆಟಗಾರರಗಿದ್ದ ಸಿಧು, ನೆರೆಯ ದೇಶಕ್ಕೆ ಭೇಟಿ ನೀಡಿದ್ದಾಗ ಆಗಿನ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಬಜ್ವಾ ಅವರನ್ನು ಅಪ್ಪಿಕೊಳ್ಳುವ ಮೂಲಕ ವಿವಾದಕ್ಕೆ ಕಾರಣರಾಗಿದ್ದರು.