ನವದೆಹಲಿ: ಜೈ ಶ್ರೀರಾಮ್ ಎಂದು ಹೇಳದವರನ್ನು ಸ್ಮಶಾನಕ್ಕೆ ಕಳಿಸಿ ಎಂಬ ಹಾಡಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಹಾಡಿನ ವಿಡಿಯೋ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಟೀಕೆ ವ್ಯಕ್ತವಾಗುತ್ತಿದೆ. ಕೆಲ ಟ್ವಿಟ್ಟಿಗರು ಈ ಹಾಡು ಹಾಡಿದ ಹಾಗೂ ವಿಡಿಯೋ ಮಾಡಿದವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
Advertisement
ರಾಜಕೀಯ ವಿಶ್ಲೇಷಕ ತಹಸೀನ್ ಪೂನವಲಾ ಟ್ವೀಟ್ ಮಾಡಿ, ಈ ವಿಡಿಯೋ ಮಾಡಿದವರ ವಿರುದ್ಧ ಐಪಿಸಿ ಸೆಕ್ಷನ್ 153(ಎ) (ಉದ್ದೇಶಪೂರ್ವಕವಾಗಿ ಆಯುಧಗಳನ್ನು ಬಳಸುವುದು) ಮತ್ತು 295 (1) (ಯಾವುದೇ ವರ್ಗದ ಮತಕ್ಕೆ ಅಪಮಾನ) ಅಡಿ ದೂರು ದಾಖಲಿಸಿ. ಇಂತಹವರು ದೇಶದ ಪ್ರಜೆಗಳಲ್ಲಿ ದ್ವೇಷ ಹರಡಲು ಯತ್ನಿಸಿದ್ದಾರೆ. ನೀವು ಕ್ರಮಕೈಗೊಳ್ಳದಿದ್ದರೆ ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತೇನೆ ಎಂದು ಹೇಳಿದ್ದಾರೆ.
Advertisement
Dear @DelhiPolice,
I am requesting you to file a complaint under IPC 153(a) & 295(a) against the makers of this video. This video incites Mob Violence against the citizens of India. Failure to do so will be contempt of SC (Tehseen Poonawalla vs UoI ) @CPDelhi 1n pic.twitter.com/HO965zb6xy
— Tehseen Poonawalla Official ???????? (@tehseenp) July 24, 2019
Advertisement
ಮೋದಿಯವರ ಭಾರತದಲ್ಲಿ ಇದು ನಡೆಯುತ್ತದೆ. ಮುಸ್ಲಿಂ ವಿರೋಧಿ ಮತ್ತು ಜನಾಂಗೀಯ ಸಂಗೀತವನ್ನು ಹಿಂದೂ ರಾಷ್ಟ್ರೀಯವಾದಿಗಳು ನುಡಿಸುತ್ತಿದ್ದಾರೆ. ಅವರ ವಿರುದ್ಧ ಯಾವುದೇ ಕ್ರಮ ತೆಗೆಕೊಳ್ಳುತ್ತಿಲ್ಲ. ಭಾರತದಲ್ಲಿ ಮುಸ್ಲಿಮರನ್ನು ರಾಕ್ಷಿಸರಂತೆ ಕಾಣಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗುತ್ತಿದೆ.