ಜಗತ್ತಿನ ಅತೀ ದೊಡ್ಡ ಸಿನಿಮಾ ಪ್ರಶಸ್ತಿ ಆಸ್ಕರ್ ಗೆ ಭಾರತದಿಂದ ಯಾವ ಸಿನಿಮಾವನ್ನು ಕಳುಹಿಸಬೇಕು ಎಂಬ ಚರ್ಚೆ ನಡೆದಿದೆ. ಈವರೆಗೂ ಬಾಲಿವುಡ್ ನಲ್ಲಿ ಸೂಪರ್ ಹಿಟ್ ಆಗಿರುವ ಮತ್ತು ದೇಶದ ಗಮನ ಸೆಳೆದಿರುವ ದಿ ಕಾಶ್ಮೀರ್ ಫೈಲ್ಸ್ ಚಿತ್ರವನ್ನೇ ಆಸ್ಕರ್ ರೇಸ್ ನಲ್ಲಿ ಬಿಡಬೇಕು ಎನ್ನುವುದು ಹಲವರ ಅಭಿಪ್ರಾಯವಾಗಿದೆ. ಆದರೆ, ನಿರ್ದೇಶಕ ಅನುರಾಗ್ ಕಶ್ಯಪ್ ಅದನ್ನು ವಿರೋಧಿಸಿದ್ದಾರೆ. ಆಸ್ಕರ್ ಗೆ ಹೋಗುವಂತಹ ಯಾವ ಅರ್ಹತೆನೂ ದಿ ಕಾಶ್ಮೀರ್ ಫೈಲ್ಸ್ ಸಿನಿಮಾಗೆ ಇಲ್ಲ ಎಂದು ಹೇಳುವ ಮೂಲಕ ವಿವಾದ ಕಿಡಿ ಹೊತ್ತಿಸಿದ್ದಾರೆ.
Advertisement
ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಕುರಿತು ಕೆನಡಾ ಸಿನಿಮಾ ನಿರ್ದೇಶಕ ಡಿಲನ್ ಮೋಹನ್ ಗ್ರೇ ಕೂಡ ಪ್ರತಿಕ್ರಿಯಿಸಿದ್ದು, ಈ ಸಿನಿಮಾವನ್ನು ಆಸ್ಕರ್ ಗೆ ಕಳುಹಿಸಿದರೆ ಭಾರತದ ಗೌರವ ಹೊರಟು ಹೋಗುತ್ತದೆ ಎಂದು ಹೇಳಿದ್ದರು. ಈ ಪ್ರತಿಕ್ರಿಯೆಯನ್ನು ಕೊಡುವುದಕ್ಕೆ ಕಾರಣ ಇದೇ ಅನುರಾಗ್ ಕಶ್ಯಪ್ ಅವರ ಟ್ವಿಟ್ ಎನ್ನುವುದು ವಿಶೇಷ. ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನಮ್ಮ ಭಾರತವನ್ನು ಪ್ರತಿನಿಧಿಸಿ, ಆಸ್ಕರ್ ಗೆ ಹೋಗಬಾರದು ಎಂದು ಕಶ್ಯಪ್ ಹೇಳಿದ್ದಾರೆ. ಅದರ ಬದಲಿಗೆ ಆರ್.ಆರ್.ಆರ್ ಸಿನಿಮಾ ಕಳುಹಿಸಿ ಎಂದಿದ್ದಾರೆ. ಇದನ್ನೂ ಓದಿ: ದುಬಾರಿ ಮೊತ್ತದ ಕಾರು ಖರೀದಿಸಿದ `ಬಿಗ್ ಬಾಸ್’ ಖ್ಯಾತಿಯ ಅನುಪಮಾ ಗೌಡ
Advertisement
Advertisement
ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಕುರಿತು ಮೊದಲಿನಿಂದಲೂ ಕೆಲವರು ಆಕ್ಷೇಪ ವ್ಯಕ್ತ ಪಡಿಸುತ್ತಲೇ ಬಂದಿದ್ದಾರೆ. ಆದರೂ, ಸಿನಿಮಾ ಗೆದ್ದಿದೆ. ಬಾಕ್ಸ್ ಆಫೀಸಿನಲ್ಲಿ 200 ಕೋಟಿಗೂ ಅಧಿಕ ಹಣ ಮಾಡಿದೆ. ಅಲ್ಲದೇ, ಅನೇಕರು ಈ ಸಿನಿಮಾ ಮೆಚ್ಚಿ ಮಾತನಾಡಿದ್ದಾರೆ. ಹಿಂದಿಯಲ್ಲಿ ಮಾತ್ರವಲ್ಲ, ನಾನಾ ಭಾಷೆಗಳಿಗೂ ಈ ಸಿನಿಮಾ ಡಬ್ ಆಗಿ ರಿಲೀಸ್ ಕೂಡ ಆಗಿದೆ. ಇದೀಗ ಆಸ್ಕರ್ ವಿಷಯದಲ್ಲಿ ಸಿನಿಮಾ ಬಗ್ಗೆ ಪರ ವಿರೋಧ ಚರ್ಚೆಗಳು ನಡೆದಿದೆ.