ಕೋಲ್ಕತ್ತಾ: ಮಹಾರಾಷ್ಟ್ರದ ರಾಜಕೀಯ ಕ್ಷಣ ಕ್ಷಣಕ್ಕೂ ತಿರುವು ಪಡೆದುಕೊಳ್ಳುತ್ತಿದೆ. ಸರ್ಕಾರದ ಪತನಕ್ಕೆ ಕಾರಣವಾಗಿರುವ, ಶಿವಸೇನೆಯ ಪ್ರಬಲ ನಾಯಕ ಏಕನಾಥ ಶಿಂಧೆ ಬಣಕ್ಕೆ ಹೋಗುತ್ತಿರುವ ಶಾಸಕರ ಸಂಖ್ಯೆ ಏರುತ್ತಲೇ ಇದೆ. ಇಂದು ಮತ್ತೆ ನಾಲ್ವರು ಶಾಸಕರು ಶಿಂಧೆ ಬಣ ಸೇರಿದ್ದಾರೆ.
ಇಂತಹ ಹೊತ್ತಿನಲ್ಲೇ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಹಾರಾಷ್ಟçದ ಶಾಸಕರನ್ನು ಬಂಗಾಳಕ್ಕೆ ಕಳುಹಿಸಿ ನಾವು ಅವರಿಗೆ ಆತಿಥ್ಯ ಕೊಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾರು ಅಪಘಾತ – ಅಮೂಲ್ ಎಂಡಿ ಸೋಧಿಗೆ ಪೆಟ್ಟು, ಆಸ್ಪತ್ರೆಗೆ ದಾಖಲು
Advertisement
Advertisement
ಮಹಾರಾಷ್ಟ್ರದ ಬಂಡಾಯ ಶಾಸಕರು ತಂಗಿರುವ ಗುವಾಹಟಿಯ ರಾಡಿಸನ್ ಬ್ಲೂ ಹೋಟೆಲ್‌ನ ಹೊರಗೆ ತೃಣಮೂಲ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ನಂತರ ಮಮತಾ ಬ್ಯಾನರ್ಜಿ ಹೇಳಿಕೆ ಹೊರಬಿದ್ದಿದೆ. ರಾಜ್ಯವು ಪ್ರವಾಹದಿಂದ ತತ್ತರಿಸುತ್ತಿರುವ ಸಮಯದಲ್ಲಿ ಈ ಶಾಸಕರು ಅಸ್ಸಾಂನಲ್ಲಿ ಏಕಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮದುವೆ ಸಂಭ್ರಮಾಚರಣೆಯಲ್ಲಿ ವರನಿಂದ ಸ್ನೇಹಿತನ ಹತ್ಯೆ
Advertisement
Advertisement
ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಮಾಡಿಕೊಂಡಿತ್ತು. ಫಲಿತಾಂಶ ಪ್ರಕಟವಾದ ಬಳಿಕ ಶಿವಸೇನೆ ಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದಿತ್ತು. ಬಿಜೆಪಿ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡದ ಹಿನ್ನೆಲೆಯಲ್ಲಿ ಎನ್‌ಸಿಪಿ, ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿತ್ತು. ಈ ಬೆಳವಣಿಗೆ ಶಿವಸೇನೆ ನಾಯಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಇದೀಗ ಶಿವಸೇನೆಯ ಪ್ರಬಲ ನಾಯಕ ಏಕನಾಥ ಶಿಂಧೆ ಅವರ ನೇತೃತ್ವದಲ್ಲಿ ಶಾಸಕರು ಮೈತ್ರಿ ಕಡಿದುಕೊಳ್ಳುವಂತೆ ಬಂಡಾಯ ಎದ್ದಿದ್ದಾರೆ.
ಸದ್ಯ ಬಂಡಾಯ ಎದ್ದಿರುವ 42 ಶಾಸಕರು ಶಿಂಧೆ ಜೊತೆ ಅಸ್ಸಾಂನ ಗುವಾಹಟಿಯಲ್ಲಿದ್ದಾರೆ. ಇವರ ಪೈಕಿ 34 ಶಿವಸೇನಾ ಶಾಸಕರು ಹಾಗೂ 8 ಪಕ್ಷೇತರರು ಇದ್ದಾರೆ. ಇಂದೂ ಸಹ 7 ಮಂದಿ ಶಿಂಧೆ ಬಣ ಸೇರಿದ್ದು ಶಿವಸೇನೆಯಲ್ಲಿನ ಬಿಕ್ಕಟ್ಟು ತೀವ್ರಗೊಂಡಿದೆ. ಈ ನಡುವೆ ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜಿ ಅವರು, ಪ್ರವಾಹಪೀಡಿತ ಅಸ್ಸಾಂಗೆ ಶಾಸಕರನ್ನೇಕೆ ಕಳುಹಿಸಲಾಗುತ್ತಿದೆ? ಮಹಾರಾಷ್ಟ್ರ ಶಾಸಕರನ್ನು ಬಂಗಾಳಕ್ಕೆ ಕಳುಹಿಸಿ ನಾವು ಅವರಿಗೆ ಉತ್ತಮ ಆತಿಥ್ಯ ನೀಡುತ್ತೇವೆ ಎಂದು ಹೇಳಿದ್ದಾರೆ.